ಆರೋಗ್ಯ

ಬಿಪಿ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣ ಕಡಲೆಕಾಯಿ.

ಬಿಪಿ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣ ಕಡಲೆಕಾಯಿ.

 

ಕಡಲೆಯು ಪ್ರಪಂಚದ ಅತ್ಯಂತ ಹಳೆಯ ಆಹಾರ ಪದ್ದತಿಯ ಬೆಳೆಗಳಲ್ಲಿ ಒಂದಾಗಿದೆ ಮತ್ತು ಇಂದು ಪ್ರತಿಯೊಂದು ಖಂಡದಲ್ಲೂ ಹೆಚ್ಚು ಜನಪ್ರಿಯವಾಗಿರುವ ಆಹಾರವಾಗಿದೆ.

 

 

ಕಡಲೆಯು ಆರೋಗ್ಯವನ್ನು ಸಮೃದ್ಧಿ ಗೊಳಿಸುವ ದ್ವಿದಳ ಧಾನ್ಯವಾಗಿದೆ. ಕಡಲೆ ಜೀರ್ಣಕ್ರಿಯೆಯನ್ನು ಹೆಚ್ಚಿಸಲು, ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತವೆ, ರೋಗದ ವಿರುದ್ಧ ರಕ್ಷಣೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕಡಲೆ ಪೌಷ್ಟಿಕಾಂಶವು ಪ್ರೋಟೀನ್, ವಿಟಮಿನ್ಗಳು ಮತ್ತು ಖನಿಜಗಳ ಒಂದು ಪ್ರಬಲವಾದ ಪ್ಯಾಕೇಜ್ ಆಗಿದೆ. ಕಡಲೆಯಲ್ಲಿರುವ ನಾರಿನ ಪದಾರ್ಥಗಳು ಹೆಚ್ಚಾಗಿ ಇರುತ್ತದೆ, ಇದು ಶರೀರದಲ್ಲಿರುವ ಕೊಲೆಸ್ಟ್ರಾಲ್’ನ್ನು ಕಡಿಮೆಗೊಳಿಸುತ್ತದೆ. ಇದರೊಂದಿಗೆ ಹೃದಯ ಸಂಬಂಧಿ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು. ಪೊಟಾಶಿಯಂ, ಮೆಗ್ನೀಶಿಯಂ, ಕ್ಯಾಲ್ಸಿಯಂ ರೀತಿ ಎಷ್ಟೋ ತರಹದ ಮಿನರಲ್ಸ್ ಕಡಲೆಯಲ್ಲಿ ಇರುತ್ತದೆ. ಇದು ರಕ್ತದ ಸ್ಥಿರತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಕಡಲೆ ತಿಂದರೆ ಬಹಳ ಸಮಯ ಹಸಿವಾಗುವುದಿಲ್ಲ. ಇದರಿಂದ ಭಾರ ತಗ್ಗಿಸ ಬೇಕೆಂದಿರುವವರಿಗೆ ಕಡಲೆಗಳು ತುಂಬಾ ಪ್ರಯೋಜನಕಾರಿಯಾಗುತ್ತದೆ.

 

 

 

 

ಪೋಷಕಾಂಶಗಳ ಕೊರತೆ ಇರುವವರು ದುಬಾರಿ ಬೆಲೆ ಬಾದಾಮಿ ತಿನ್ನು ಬದಲು ಕಡಲೆಯನ್ನು ತಿನ್ನಬಹುದು ಇದರಿಂದ ಪೋಷಕಾಂಶಗಳ ಕೊರತೆ ನೀಗಿಸಬಹುದು. ಕಡಲೆಯನ್ನು ತಿನ್ನುವ ಮೊದಲು 5 -6 ಘಂಟೆ ಕಾಲ ನೀರಿನಲ್ಲಿ ನೆನೆಸಿಟ್ಟು ಆಮೇಲೆ ಅದನ್ನು ತಿನ್ನಬೇಕು.

 

100 ಕಡಲೆಯಲ್ಲಿರುವ ಪೋಷಕಾಂಶಗಳು.
268 ಕ್ಯಾಲೋರಿಸ್
12.5 ಗ್ರಾಂ ನಾರಿನ ಅಂಶ
14.5 ಗ್ರಾಂ ಪ್ರೋಟೀನ್
4.2 ಗ್ರಾಂ ಕೊಬ್ಬು

84% ಮ್ಯಾಂಗನೀಸ್
71% ಫೋಲೇಟ್
29% ಕಾಪರ್
28% ಫಾಸ್ಫರಸ್
26% ಕಬ್ಬಿಣ ಅಂಶ
17% ಜಿಂಕ್

ವಿಶೇಷ ಸೂಚನೆ: ಕಡಲೆಯಲ್ಲಿ ಬಹಳ ಪೋಷಕಾಂಶ ಇದೆ ಅಂತ ಕಡಲೆ ಹಿಟ್ಟಿನಿಂದ ಭಜಿ ಮಾಡಿ ತಿನ್ನಬೇಡಿ. ಕಡಲೆಯನ್ನು ನೀರಿನಲ್ಲಿ ನೆನೆಸಿ ತಿನ್ನಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top