fbpx
ಕ್ರೈಂ ಸ್ಟೋರಿ

ಪ್ರೀತಿ ಒಪ್ಪದಿದ್ದಕೆ ಪ್ರಿಯತಮೆಯನ್ನು ಬರ್ಬರವಾಗಿ ಚಾಕುವಿನಿಂದ ಹತ್ಯೆಮಾಡಿದ ಪ್ರಿಯತಮ!

ಪ್ರೀತಿ ಒಪ್ಪದಿದ್ದಕೆ ಪ್ರಿಯತಮೆಯನ್ನು ಬರ್ಬರವಾಗಿ ಚಾಕುವಿನಿಂದ ಹತ್ಯೆಮಾಡಿದ ಪ್ರಿಯತಮ!

 

 

ಹೈದರಾಬಾದ್ ನ ಮೋಸಾಪೇಟ್ನಲ್ಲಿ ತನ್ನ ಪ್ರೀತಿ ಒಪ್ಪದಿದ್ದಕ್ಕೆ ಪ್ರೇಯಸಿಯನ್ನೇ ಕೊಂಡಿರುವ ಘಟನೆ ನಡೆದಿದೆ.

 

 

ಕೊಲೆಯಾದವಳ ಹೆಸರು ಜಾನಕೀ ಎಂದು ಹೇಳಲಾಗಿದೆ. ಹಬಿಬ್ನಗರದಲ್ಲಿ ವಾಸವಿದ್ದ ಈ ಹುಡುಗಿ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು.

ಆನಂದ್ ಸಹ ಹಬಿಬ್ನಗರದಲ್ಲಿ ವಾಸವಿದದ್ದು, ಜಾನಕೀ ಹಿಂದೆ ಸುತ್ತಾಡುತ್ತ ಆಕೆಗೆ ಯಾವಾಗಲೂ ನನ್ನನ್ನು ಪ್ರೀತಿಸು ಎಂದು ಕಾಟ ಕೊಡುತಿದ್ದನಂತೆ.

 

 

ಒಂದು ಬಾರಿ ಹೀಗೆ ಅವಳಿಗೆ ಬೆದರಿಕೆ ಹಾಕಿದ್ದನಂತೆ, ಆಗ ಜಾನಕೀ ನೇರವಾಗಿ ಪೊಲೀಸ್ ಗೆ ದೂರು ನೀಡಿದ್ದಾಳೆ. ಆದರೆ ಅದರ ಬಗ್ಗೆ ಪೊಲೀಸರು ಏನು ಕ್ರಮ ಕೈಗೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಜಾನಕೀ ಮನೆಯಲ್ಲಿ ಒಬ್ಬಳೇ ಇರುವುದನ್ನು ನೋಡಿ ಮಂಗಳವಾರ ಆತ ಆಕೆಯ ಮನೆಗೆ ನೇರವಾಗಿ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿ ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. ಪೊಲೀಸರು ಆರೋಪಿಯನ್ನು ಇಂದು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top