fbpx
News

BPL ಕಾರ್ಡುದಾರರಿಗೆ ಸಿಹಿ ಸುದ್ದಿ: ಸರ್ಕಾರದಿಂದ ಬರ್ತಿದೆ ಉಚಿತ ಕುರಿ,ಮೇಕೆ ಭಾಗ್ಯದ ಯೋಜನೆ.

BPL ಕಾರ್ಡುದಾರರಿಗೆ ಸಿಹಿ ಸುದ್ದಿ: ಸರ್ಕಾರದಿಂದ ಬರ್ತಿದೆ ಉಚಿತ ಕುರಿ,ಮೇಕೆ ಭಾಗ್ಯದ ಯೋಜನೆ.

 

 

ರಾಜ್ಯಾದಂತ ಬಿಪಿಲ್ ಕುಟುಂಬಗಳಿಗೆ ಕುರಿ, ಮೇಕೆ, ಕೋಳಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಪಶು ಸಂಗೋಪನೆ ಸಚಿವ ಎ. ಮಂಜು ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎ. ಮಂಜು ಅವರು ಈ ವಿಷಯವನ್ನು ತಿಳಿಸಿದ್ದಾರೆ.ಸದ್ಯಕ್ಕೆ ಪಶು-ಭಾಗ್ಯ ಯೋಜನೆ ಸೇರಿದಂತೆ ಕೆಲವು ಯೋಜನೆಗಳಡಿ ಕೆಲವರಿಗೆ ಈ ಸೌಲಭ್ಯ ದೊರೆಯುತ್ತಿದ್ದರೂ, ಬಿಪಿಲ್ ಕುಟುಂಬಗಳಿಗೆ ಇದು ವಿಸ್ತರಣೆಯಾಗಬೇಕೆಂದು ಅವರು ಹೇಳಿದರು.

 

 

ಇದೇ ವೇಳೆ ಅವರು ಮಾತನಾಡುತ್ತ ರಾಜ್ಯದಲ್ಲಿ ಮಾಂಸದ ಉತ್ಪಾದನೆಯ ಪ್ರಮಾಣ ಕಡಿಮೆಯಿದ್ದು.ಈ ಹಿನ್ನಲೆಯಲ್ಲಿ ಮಾಂಸದ ಉತ್ಪಾದನೆಯನ್ನು ಹೆಚ್ಚಿಸಲು ಕುರಿ, ಮೇಕೆ, ಕೋಳಿಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ.ಮಾಂಸದ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಲೇ ಬೇಕಾದ ಸ್ಥಿತಿ ಇದೆ.ಈ ಹಿನ್ನಲೆಯಲ್ಲಿ ಕುರಿ, ಮೇಕೆ, ಕೋಳಿ ಸಾಕಲು ಬಯಸುವ ಬಿಪಿಲ್ ಕುಟುಂಬಗಳಿಗೆ ಅವನ್ನು ಒದಗಿಸುವಂತೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

 

 

ರಾಜ್ಯದಲ್ಲಿ ಒಬ್ಬ ವ್ಯಕ್ತಿ ವಾರ್ಷಿಕ 11 ಕೆಜಿ ಮಾಂಸವನ್ನು ಸೇವಿಸುತ್ತಾರೆ.ಆದರೆ ರಾಜ್ಯದಲ್ಲಿ ಮಾಂಸದ ಉತ್ಪಾದನೆಯ ಪ್ರಮಾಣ ಕೇವಲ 3 ಕೆಜಿಯಷ್ಟಿದೆ.ಹೀಗಾಗಿ ಮನುಷ್ಯನ ಬೇಡಿಕೆಯ ಪ್ರಮಾಣಕ್ಕಿಂತಲೂ ತಲಾ 8 ಕೆಜಿಗಳಷ್ಟು ಮಾಂಸದ ಕೊರತೆಯಿದೆ.ಹೀಗಾಗಿ ಹೆಚ್ಚುವರಿ ಅಗತ್ಯವನ್ನು ಪೂರೈಸಲು ಹೊರ ರಾಜ್ಯಗಳಿಂದ ಕುರಿ, ಮೇಕೆ, ಕೋಳಿಗಳನ್ನು ಆಮದು ಮಾಡಿಕೊಳ್ಳುವುದು ನಡೆಯುತ್ತಿದೆ.ಇದನ್ನು ತಪ್ಪಿಸಲು ರಾಜ್ಯದಲ್ಲಿ ಕುರಿ, ಮೇಕೆ, ಕೋಳಿಗಳನ್ನು ಸಾಕಲು ಬಯಸುವ ಬಿಪಿಲ್ ಕುಟುಂಬಗಳಿಗೆ ಅವುಗಳನ್ನು ಒದಗಿಸಬೇಕೆಂಬುದು ಸರ್ಕಾರದ ಯೋಜನೆ.2 ಕುರಿ,ಮೇಕೆ ಹಾಗು ಹಲವು ಕೋಳಿಗನ್ನು ಒದಗಿಸಿದರೆ ಅವುಗಳನ್ನು ಪಾಲನೆ,ಪೋಷಣೆ ಮಾಡುವುದರ ಮುಖಾಂತರ ವರ್ಷಕ್ಕೆ 35 ಸಾವಿರದಿಂದ 40 ಸಾವಿರ ರೂ.ಳಷ್ಟು ಆದಾಯವನ್ನು ಮಾಡಿಕೊಳ್ಳಬಹುದೆಂದು ಅವರು ವಿವರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top