fbpx
ಸಮಾಚಾರ

ಈ ಊರಲ್ಲಿ ಹೆಣ್ಮಕ್ಕಳ ಕಣ್ಣೀರು ಒರಸಿದ್ರೆ 3900 ರೂ ಕೊಡ್ತಾರೆ , ನೀವು ಒಂದ್ ಚಾನ್ಸ್ ತಗೋಬಿಡಿ .

ಈ ಊರಲ್ಲಿ ಹೆಣ್ಮಕ್ಕಳ ಕಣ್ಣೀರು ಒರಸಿದ್ರೆ 3900 ರೂ ಕೊಡ್ತಾರೆ , ನೀವು ಒಂದ್ ಚಾನ್ಸ್ ತಗೋಬಿಡಿ .

ಕಣ್ಣೊರೆಸುವ ಮಾತು

‘ಹೆಣ್ಣೇ ನೀನು ಅತ್ತರೆ ನಮ್ಮ ಬಾಯಿ ಸಕ್ಕರೆ’

‘ಅಂಬಲಿ ಕುಡಿಯೋನಿಗೆ ಮೀಸೆ ತಿರುವೋರು ಆರು ಜನ!’ ಅನ್ನುವಂತೆ ಅಳೋ ಹೆಣ್ಣಿನ ಕಣ್ಣೊರೆಸಲು ಆರುಜನ ಅನ್ನುವ ಸುದ್ದಿ ಇಲ್ಲಿದೆ…

 

 

ಸ್ತ್ರೀಯರ ಸಂಕಟನೀಗಿಸಿ, ಅವರ ಕಣ್ಣೀರ ಒರೆಸುವ ಕೆಲಸವನ್ನು ‘ಇಕೆಮಿಸೊ’ ಅಲಿಯಾಸ್ ಸ್ಪುರದ್ರೂಪಿ ಗಂಡುಗಳು ಮಾಡುತ್ತಾರೆ. ಈ ಘನಾಂಧಾರಿ ಕಾರ್ಯ ಮಾಡಲು $65 ನೀಡಬೇಕು. ಹೆಣ್ಣಿನ ಕಣ್ಣೀರಿನ ಬೆಲೆ ಇಷ್ಟೇನಾ?

ಹಾಗೇನೂ ಇಲ್ಲ. ಅಳು ನೀಗಿಸಿದ ಪುರುಷನಿಗೆ ಇನ್ನೂ ಹೆಚ್ಚಿನ ರೊಕ್ಕಕೊಟ್ಟರೂ ಅವರು ಮುಲಾಜಿಲ್ಲದೆ ಪಡೆಯುತ್ತಾರೆ.

ಎಲ್ಲಾ ಓ.ಕೆ. ಹೆಂಗಸರು ಅಳುವುದೇಕೆ?

ಜಪಾನಿನ ವರ್ಕಿಂಗ್ ಲೇಡಿಗಳಿಗೆ ಕೆಲಸದ ಒತ್ತಡ ಅಧಿಕ. ಗುರಿ ಮೀರಿದ ಟಾರ್ಗೆಟ್‍ಗಳಿರಲಿವೆ. ಅದನ್ನು ನೀಗಿಕೊಳ್ಳಲು ಅಳುತ್ತಾರೆ. ಹಾಗೆ ಅಳು ಬಂದಾಗ ಇವರಿಗೆ ಕರೆ ಮಾಡಿದರೆ ಈ ಆಳುಗಳು ಬಂದು ‘ಅಳು’ ಅಳಿಸಿ ಹಾಕುತ್ತಾರೆ!

ಅಳುವ ಹೆಣ್ಣಿನ ಕಣ್ಣೀರು ಒರೆಸಿ, ತಮಗೆ ತೋಚಿದ ರೀತಿಯಲ್ಲಿ ಸಮಾಧಾನ ಮಾಡುತ್ತಾರೆ. ಧೈರ್ಯ ತುಂಬುತ್ತಾರೆ. ಕಷ್ಟ ಎದುರಿಸುವುದನ್ನು ಹೇಳುತ್ತಾರೆ.

 

 

ಇವರು ಬರುತ್ತೇವೆಂದು ಕೈ ಕೊಟ್ಟರೆ ಹೇಗೆ?

ಅಳುವ ಹೆಣ್ಣಿನ ರೋದನೆ ಹೆಚ್ಚಾಗಬಹುದು.

‘ವನಿತೆ ನೀನು ಅತ್ತರೆ ನಮ್ಮ ಬಾಯಿ ಸಕ್ಕರೆ…’ಎಂದು ಹಾಡುವ ಆರು ಇಕೆಮಿಸೊಗಳು ಅಲ್ಲಿನ ಅಳುಬುರುಕಿಯರ ಗಮನ ಸೆಳೆದಿದ್ದಾರಂತೆ.

 

 

‘ಅಳೊ ಹೆಂಗಸರನ್ನು ನಂಬಿದರೂ, ಕಣ್ಣೊರೆಸುವ ಗಂಡುಗಳನ್ನು ನಂಬಬಾರದು’ ಅನ್ನೋ ಗಾದೆಮಾತು ಸದ್ಯಕ್ಕಂತೂ ಕೇಳಿ ಬಂದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top