fbpx
ವಿಶೇಷ

ಟೊಂಟಾಟೊ- ಕಾಂಡದಲ್ಲಿ ಟೊಮ್ಯಾಟೋ ಅರಳಿದರೆ ಬುಡದಲ್ಲಿ ಪೊಟ್ಯಾಟೊ ಮೂಡಲಿದೆ.

ಟೊಂಟಾಟೊ- ಕಾಂಡದಲ್ಲಿ ಟೊಮ್ಯಾಟೋ ಅರಳಿದರೆ ಬುಡದಲ್ಲಿ ಪೊಟ್ಯಾಟೊ ಮೂಡಲಿದೆ.

ಟೊಂಟಾಟೊ

ಕಾಂಡದಲ್ಲಿ ಟೊಮ್ಯಾಟೋ ಅರಳಿದರೆ ಬುಡದಲ್ಲಿ ಪೊಟ್ಯಾಟೊ ಮೂಡಲಿದೆ.

ಹೊಟ್ಟೆಬಾಕ ಮನುಷ್ಯರಿಗೆ ಎಷ್ಟೊಂದು ವಿಧದ ತರಕಾಗಿಗಳಿದ್ದರೂ ಸಾಲದು! ಎಲ್ಲವನ್ನೂ ತಿಂದು ಹಾಕುತ್ತಾರೆ. ಅಷ್ಟೇ ಆಗಿದ್ದರೆ ಹಾಳಾಗಿ ಹೋಗಲಿ ಎನ್ನಬಹುದಿತ್ತು. ಬಿ.ಟಿ. ತಂತ್ರಜ್ಞಾನದಲ್ಲಿ ತರಕಾರಿಯ ಸಿಪ್ಪೆಯಿಂದಲೇ ಗಿಡಬೆಳಸಿ ಫಲ ತೆಗೆದ ಉದಾಹರಣೆಗಳೂ ಇವೆ. ಇದೀಗ ಮಿಶ್ರತಳಿಗಳನ್ನು ಬೆಳೆಸಲು ಹೊರಟಿದ್ದಾನೆ. ಅದರ ಫಲವಾಗಿಯೇ ಬಂದಿದೆ ಟೊಂಟಾಟೋ! – ಕಾಂಡದಲ್ಲಿ ಟೊಮ್ಯಾಟೋ ಅರಳಿದರೆ ಬುಡದಲ್ಲಿ ಪೊಟ್ಯಾಟೊ ಮೂಡಲಿದೆ.

 

 

ಹಾಗೆಂದು ಇದು ಬಯೋಟೆಕ್ನಾಲಜಿ ಅಥವಾ ಕುಲಾಂತರಿಯಲ್ಲ. ಸ್ವಾಭಾವಿಕವಾಗಿಯೇ ಕಸಿ ಮಾಡಿ ಕೃಷಿ ಮಾಡಲಾಗಿದೆಯಂತೆ. ಮಾಮೂಲಿ ಟೊಮ್ಯಾಟೋ ಮತ್ತು ಆಲೂಗಡ್ಡೆಯ ರುಚಿಯೇ ಇದೆ. ಟೊಮ್ಯಾಟೋ ಇಳುವರಿ ಅಧಿಕ. ಗಿಡವೊಂದರಲ್ಲಿ 500ರವರೆಗೂ ಫಲ ನಿರೀಕ್ಷಿಸಬಹುದು. ಈ ಫಸಲಿಗೆ ವಿಶೇಷ ಆರೈಕೆಯ ಅಗತ್ಯವಿಲ್ಲ. ಟಮೋಟ ಗಿಡಕ್ಕೆ ಸೋಕುವ ಕೀಟ ಬಾಧೆ, ಅದೇ ರೀತಿ ಆಲೂಗಡ್ಡೆಗೆ ಗಿಡವನ್ನು ಕಾಡುವ ಹುಳುಗಳು ಟೊಂಟಾಟೊವನ್ನು ಕಾಡುತ್ತದೆಯೇ? ಎಂಬುದು ಪತ್ತೆಯಾಗಿಲ್ಲ.

ಒಂದು ವೇಳೆ ಕಾಡಿದರೆ?

ಸ್ವಾಭಾವಿಕ ಗಿಡ ಎನ್ನಲು ಅಡ್ಡಿಯಿಲ್ಲ.

 

 

ಕಾಡದಿದ್ದರೆ?

ಹುಳುವೂ ಸೇವಿಸದ ತರಕಾರಿಯನ್ನು ‘ಹುಳು-ಮಾನವರು’ ತಿನ್ನಬೇಕಾ ಎಂಬ ಪ್ರಶ್ನೆಮೂಡುತ್ತದೆ.

ಬ್ರಿಟನ್‍ನ ಥಾಂಪ್ಸನ್ ಮತ್ತು ಮೋರ್ಗಾನ್ ತೋಟಗಾರಿಕಾ ಸಂಸ್ಥೆಯವರ ಜಂಟಿಯತ್ನವಿದು.

 

 

ಮನುಜರ ‘ಒನ್ ಟೇಕ್ ಒನ್ ಫ್ರೀ’ ತೆವಲಿಗೆ ಪ್ರಕೃತಿಯಲ್ಲಿನ ತರಕಾರಿ ಗಿಡಗಳೂ ಬಾಗುತ್ತಿವೆಯಲ್ಲವೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top