ರಾಜಕೀಯ

RSS ಬ್ಯಾನ್ ಮಾಡೋಕ್ಕೆ ನೆಹರು, ಇಂದಿರಾ ಕೈಯಲ್ಲಿ ಆಗಿಲ್ಲ ಸಿದ್ದರಾಮಯ್ಯ ಇನ್ನು ಬಚ್ಚಾ, ಅವರ ಕೈಲಿ ಆಗುತ್ತಾ.

RSS ಬ್ಯಾನ್ ಮಾಡೋಕ್ಕೆ ನೆಹರು, ಇಂದಿರಾ ಕೈಯಲ್ಲಿ ಆಗಿಲ್ಲ ಸಿದ್ದರಾಮಯ್ಯ ಇನ್ನು ಬಚ್ಚಾ, ಅವರ ಕೈಲಿ ಆಗುತ್ತಾ.

 

ತುಮಕೂರಿನ ಶಿರಾದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ RSS ಬ್ಯಾನ್ ಮಾಡೋಕ್ಕೆ ನೆಹರು, ಇಂದಿರಾ ಕೈಯಲ್ಲಿ ಆಗಿಲ್ಲ ಸಿದ್ದರಾಮಯ್ಯ ಇನ್ನು ಬಚ್ಚಾ, ಅವರ ಕೈಲಿ ಆಗುತ್ತಾ ಎಂದು ಹೇಳಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ RSS ಬ್ಯಾನ್ ವಿಚಾರವಾಗಿ ಪ್ರತಿಕ್ರಿಯಿಸಿರುವವ ಯಡಿಯೂರಪ್ಪ ಈ ಹೇಳಿಕೆ ನೀಡಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಹಗುರವಾದ ಹೇಳಿಕೆ ನೀಡಿ ಅವರ ಮೇಲಿರುವ ಅಲ್ಪ ಸ್ವಲ್ಪ ಗೌರವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರೂವರೆ ಕೋಟಿ ಕನ್ನಡಿಗರು ಅವರಿಗೆ ಪಾಠ ಕಳಿಸುತ್ತಾರೆ ಎಂದು ಯಡಿಯೂರಪ್ಪ ಕಿಡಿಕಾರಿದರು.

 

 

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹೇಳಿಕೆ ಪ್ರತಿ ಹೇಳಿಕೆ ಎಲ್ಲ ಪಕ್ಶದ ನಾಯಕರು ಹೇಳಿಕೆ ಪ್ರತಿ ಹೇಳಿಕೆ ನೀಡುತ್ತಿದ್ದು ಮಾಧ್ಯಮಲ್ಲಿ ಸುದ್ದಿಯಲ್ಲಿದ್ದಾರೆ. ಮಹದಾಯಿ ವಿವಾದ ಸಮಸ್ಯೆ ಬಗೆಹರಿಸಲು ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಜೊತೆ ಮಾತನಾಡಿ ಒಪ್ಪಿಸಿದ್ದೆವು. ಅದರೆ ಸಿಎಂ ಸಿದ್ದರಾಮಯ್ಯ ಗೋವಾ ಕಾಂಗ್ರೆಸ್‌ ಅಧ್ಯಕ್ಷರಿಂದ ವಿರುದ್ಧ ಹೇಳಿಕೆ ಕೊಡಿಸಿದರು. ಈ ಯೋಜನೆಯ ವೈಫಲ್ಯಕ್ಕೆ ನಾವು ಮಾತ್ರವಲ್ಲ ಸಿಎಂ ಜವಬ್ದಾರಿ ಹೊರಬೇಕು ಎಂದು ಹೇಳಿಕೆ ನೀಡಿದರು. ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಸುಸೂತ್ರವಾಗಿ ಬಗೆಹರಿಸಿಕೊಂಡು ರಾಜ್ಯಕ್ಕೆ ನೀರು ತರುವ ಪ್ರಯತ್ನದಲ್ಲಿ ಬಿಜೆಪಿ ತೊಡಗಿತು. ಆದರೆ, ಕಾಂಗ್ರೆಸ್ ಷಡ್ಯಂತ್ರ ನಡೆಸಿ ಸಮಸ್ಯೆ ಬಗೆಹರಿಯಲು ಬಿಡುತ್ತಿಲ್ಲ’ ಎಂದು ಆರೋಪಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top