fbpx
ಧರ್ಮ

ದ್ರೌಪದಿಯ ಸೀರೆಗೆ ಕೈ ಹಾಕಿದವನು , ಅವಳ ಕೂದಲನ್ನು ಎಳೆದವನ ಎದೆ ಮೆಟ್ಟಿ ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಭೀಮ ದುಷ್ಟ ದುಶ್ಯಾಸನನ್ನು ಕೊಂದಿದ್ದು ಹೀಗೆ

ದ್ರೌಪದಿಯ ಸೀರೆಗೆ ಕೈ ಹಾಕಿದವನು , ಅವಳ ಕೂದಲನ್ನು ಎಳೆದವನ ಎದೆ ಮೆಟ್ಟಿ ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಭೀಮ ದುಷ್ಟ ದುಶ್ಯಾಸನನ್ನು ಕೊಂದಿದ್ದು ಹೀಗೆ

ದುಶ್ಯಾಸನನ ಅಂತ್ಯ.

ದುರ್ಯೋಧನನು ಭೀಷ್ಮ ದ್ರೋಣರ ನಂತರದಲ್ಲಿ ಆಪ್ತನಾದ ಮಿತ್ರ, ಕರ್ಣನಿಗೆ ಸೇನಾಪತಿ ಪಟ್ಟ ಕಟ್ಟಿದನು. ಕರ್ಣನು ಮಕರ ವ್ಯೂಹವನ್ನು ರಚಿಸಿ ಯುದ್ಧಕ್ಕೆ ಸನ್ನದ್ಧನಾದನು. ಅರ್ಜುನನು ಅಂದು ಅರ್ಧ ಚಂದ್ರವ್ಯೂಹದಿಂದ ಎದುರಿಸಿದನು. ಕರ್ಣಾರ್ಜುನರ ನಡುವೆ ದೊಡ್ಡ ರೀತಿಯಲ್ಲಿ ಕಾಳಗ ನಡೆಯಿತು. ಇಬ್ಬರೂ ಸಮಬಲರಾಗಿ ಕಾದಾಡಿದರು. ಕರ್ಣನೊಬ್ಬನೇ ಪಾಂಡವರ ಹಲವಾರು ಆನೆ, ಕುದುರೆ ಪದಾತಿಗಳನ್ನು ನಾಶ ಮಾಡಿದನು.

 

 

ಮರುದಿನದ ಯುದ್ಧಕ್ಕೆ ಹೋಗುವ ಮೊದಲು ಕರ್ಣನು ದುರ್ಯೋಧನನನ್ನು ಕುರಿತು ಉತ್ತಮ ಸಾರಥಿ ಬೇಕಾಗಿದ್ದನೆಂದು ತಿಳಿಸಿದನು. ಈ ಕಾರ್ಯಕ್ಕಾಗಿ ಮದ್ರ ದೇಶದ ರಾಜ ಶಲ್ಯನನ್ನು ಒಪ್ಪಿಸು ಎಂದನು ಮಿತ್ರನಿಗೆ. ಆಗ ದುರ್ಯೋಧನನು ಶಲ್ಯನನ್ನು ಒಪ್ಪಿಸಿ ಕರ್ಣನಿಗೆ ಸಾರಥಿಯನ್ನಾಗಿಸಿದನು. ಆದರೆ ಕೃಷ್ಣನ ರಥದಲ್ಲಿದ್ದ0ತೆ ನನ್ನ ಮಾತಿಗೆ ವಿರುದ್ಧ ನಡೆದರೆ ನಾನು ರಥದಲ್ಲಿರುವುದಿಲ್ಲ ಎಂದು ನಿಯಮ ಹಾಕಿಯೇ ಶಲ್ಯ ಒಪ್ಪಿದನು.

 

 

ಶಲ್ಯನ ಸಾರಥ್ಯದಲ್ಲಿ ಕರ್ಣನ ರಥವು ಕೃಷ್ಣಾರ್ಜುನರನ್ನು ಎದುರಿಸಲು ಸಮರ್ಥವಾಯಿತು. ಕರ್ಣನು ಅರ್ಜುನನನ್ನು ಗೆಲ್ಲುವೆನೆಂದಾಗ ಹೀಗೆ ವಿಕೋಪಕ್ಕೆ ಹೋಗುವುದನ್ನು ತಡೆದ. ಕರ್ಣ ಪರಾಕ್ರಮವನ್ನು ತೋರಿಸಿದರಾಯಿತೆಂದು ಶಲ್ಯನ ಬಗ್ಗೆ ತಾತ್ಸಾರ ತೋರಿದನು.
ಯುದ್ಧ ಆರಂಭವಾದಾಗ ಮಹಾರಥಿ ಕರ್ಣನು ಪಾಂಡವರ ಸೇನೆಯೊಳಗೆ ನುಗ್ಗಿ ನಾಶ ಮಾಡಿದನು. ಅನೇಕ ವೀರರು ಹೆದರಿ ಓಡಿದರು. ಸಾತ್ಯಕಿಯು ಕರ್ಣನ ಮಗನನ್ನು ಕೊಂದನು. ಭೀಮ ದುಶ್ಯಾಸನರ ಯುದ್ಧವು ಆರಂಭವಾಯಿತು. ಬಿಲ್ಲು ಬಾಣಗಳನ್ನು ಮುರಿದು ಒಗೆದು ಭೀಮನು ದುಶ್ಯಾಸನನನ್ನು ಹಿಡಿದಿದ್ದನು. ಸಿಂಹಗಳಂತೆ ಅನೇಕ ರೀತಿ ಹೋರಾಡಿದರು. ಬೇರೆ ಬೇರೆ ಆಯುಧಗಳಿಂದ ಯುದ್ದ ಮಾಡಿದರು. ಭೀಮನು ಗದೆಯಿಂದ ಹೊಡೆದಾಗ ದುಶ್ಯಾಸನ ಕೆಳಗೆ ಬಿದ್ದನು.

ಭೀಮನಿಗೆ ಸಭೆಯಲ್ಲಿ ತಾನು ಮಾಡಿದ ಪ್ರತಿಜ್ಞೆಯ ನೆನಪಾಯಿತು. ದುಶ್ಯಾಸನನ ತಲೆಯನ್ನು ಕಾಲಿನಿಂದ ಮೆಟ್ಟಿ ಅವನ ಎದೆಯ ಮೇಲೆ ಕುಳಿತು ಹೇಳಿದನು. “ಎಲವೋ ಪಾಪಿ, ನಿನ್ನ ರಕ್ತವನ್ನೇ ಹೀರಿ ಪ್ರತಿಜ್ಞೆಯನ್ನು ಪೂರೈಸುತ್ತೇನೆ” ಎಂದನು. ಆದರೆ ದುಶ್ಯಾಸನನು ತಪ್ಪಿಸಿಕೊಂಡು ಓಡತೊಡಗಿದನು. ಬಿಡದೇ ಭೀಮಸೇನನು ದುಶ್ಯಾಸನನನ್ನು ಹಿಡಿದು ದ್ರೌಪದಿಯ ಕೂದಲು ಹಿಡಿದು ತಂದೆಯಲ್ಲವೇ ? ಎನ್ನುತ್ತ ದ್ರೌಪದಿಯ ಸೀರೆಗೆ ಕೈ ಹಾಕಿದೆಯಲ್ಲವೇ ? ಎನ್ನುತ್ತ ಕೈಗಳನ್ನು ಮುರಿದನು. ಅವನ ಎದೆಯನ್ನು ಸೀಳಿ ರಕ್ತ ಹೀರಿದನು. ಕೌರವ ಸೇನೆ ಭ್ರಾಂತವಾಗಿ ನೋಡುತ್ತಿತ್ತು. ಅದೇ ಸಮಯದಲ್ಲಿ ಕರ್ಣನ ಮಕ್ಕಳು ಸಹ ಯುದ್ಧವನ್ನು ಮಾಡುತ್ತ ಇದ್ದರು, ಭೀಮಸೇನನು ತೀಕ್ಷ್ಣವಾದ ಬಾಣದಿಂದ ಸತ್ಯಸೇನನನ್ನು ಕೊಂದನು. ಕರ್ಣನು ರೋಷದಿಂದ ಸಾತ್ಯಕಿ, ಶಿಖಂಡಿ ದೃಷ್ಟದ್ಯುಮ್ನರನ್ನು ರಥದಿಂದ ಬೀಳಿಸಿದನು. ಬೇರೆ ಬೇರೆ ದಿಕ್ಕುಗಳಿಂದ ಬಾಣವನ್ನು ಪ್ರಯೋಗಿಸಿ ದಿಗಿಲು ಉಂಟು ಮಾಡಿದನು ಕರ್ಣ.ಯುಧಿಷ್ಠಿರನು ಗಾಯಗೊಂಡಾಗ ಪಾಂಡವ ಸೇನೆಯಲ್ಲಿ ಹಾಹಾಕಾರ ಉಂಟಾಯಿತು.

 

 

ಅರ್ಜುನನು ಆಗ ಅಶ್ವತ್ಥಾಮನನ್ನು ಎದುರಿಸುತ್ತ ಉತ್ತರ ದಿಕ್ಕಿನಲ್ಲಿದ್ದನು. ಯುಧಿಷ್ಠಿರನಲ್ಲಿಗೆ ಬಂದು ಸಮಾಧಾನ ಪಡಿಸಿದ ಅರ್ಜುನನು ರಥವನ್ನೇರಿ ಹೊರಟನು. ಮೊದಲು ವೃಕಸೇನನನ್ನು ಕೊಂದು ಅಭಿಮನ್ಯುವನ್ನು ಕೊಂದ ಕಾರ್ಯದ ಪ್ರತಿಕ್ರಿಯೆ ತೋರಿದನು. ಕರ್ಣಾರ್ಜುನರ ಪರಸ್ಪರರ ಮೇಲೆ ಅಸ್ತ್ರ ಪ್ರಯೋಗ ನಡೆಸಿದರು.

ಬ್ರಹ್ಮಾಸ್ತ್ರಕ್ಕೆ ಬ್ರಹ್ಮಾಸ್ತ್ರ, ಅಗ್ನಿಯಸ್ತ್ರಕ್ಕೆ ಪರ್ಜನ್ಯಾಸ್ತ್ರ ಹೀಗೆ ಸಮಬಲರಲ್ಲಿ ಯುದ್ಧ ಸಾಗಿತ್ತು. ಕರ್ಣನು ಗಾಂಡೀವದ ಹುರಿಯನ್ನು ಕತ್ತರಿಸಿದಾಗ ಅರ್ಜುನನು ಬೇರೆ ಹುರಿ ಕಟ್ಟಿ ಯುದ್ಧ ಮುಂದುವರಿಸಿದನು. ಕರ್ಣನು ಸರ್ಪಾಸ್ತ್ರವನ್ನು ಪ್ರಯೋಗಿಸಿದಾಗ ಗುರಿಯನ್ನು ಗುರಿಯನ್ನು ಎದೆಯ ಮಟ್ಟಕ್ಕೆ ಹಿಡಿ ಎಂದನು .

ಕರ್ಣನು ಶಲ್ಯನ ಮಾತನ್ನು ಕೇಳಲಿಲ್ಲ. ಕೃಷ್ಣನು ಸರ್ಪಾಸ್ತ್ರವನ್ನು ಗಮನಿಸಿ ರಥವನ್ನು ತಗ್ಗಿಸಿದನು. ಅರ್ಜುನನ ಕಿರೀಟ ಹಾರಿ ಬಿದ್ದಿತು. ಕರ್ಣನು ತನ್ನ ಇಚ್ಛೆಯಂತೆ ನಡೆದಾಗ ಇನ್ನೊಮ್ಮೆ ಸರ್ಪಾಸ್ತ್ರವನ್ನು ಬಿಡೆ೦ದು ಶಲ್ಯನು ಹೇಳಿದನು.ಆಗ ಕರ್ಣನು ಒಪ್ಪದಿದ್ದಾಗ ಅವನು ರಥದಿಂದ ಇಳಿದು ಹೊರಟು ಹೋದನು.

ಆಗ ಕರ್ಣನು ತಾನೇ ರಥ ನಡೆಸಿ ಯುದ್ಧ ಮಾಡುತ್ತಿದ್ದಾಗ ಕರ್ಣನ ರಥವು ಭೂಮಿಯಲ್ಲಿ ಸಿಕ್ಕಿ ಬಿದ್ದಿತ್ತು. ಅರ್ಜುನನನ್ನು ಕುರಿತು ಗಳಿಗೆ ಸೈರಿಸು ಪಾರ್ಥ, ರಥವನ್ನು ಮೇಲೆತ್ತಿಕೊಳ್ಳುತ್ತೇನೆ ಎಂದು ಹೇಳಿ ನನ್ನ ಮೇಲೆ ಅಧರ್ಮದಿಂದ ಬಾಣವನ್ನು ಪ್ರಯೋಗಿಸಬೇಡ ಎಂದನು. ಆಗ ಶ್ರೀಕೃಷ್ಣ ಕರ್ಣ, ಈಗ ನಿನಗೆ ಧರ್ಮದ ನೆನಪಾಯಿತೆ.ಜೂಜಾಟ, ಅವಮಾನ ಅಜ್ಞಾತವಾಸಗಳಲ್ಲಿ ಧರ್ಮದ ಬಗ್ಗೆ ಚಿಂತೆಯಿರಲಿಲ್ಲ ಅಲ್ಲವೇ ಎಂದು ಕೇಳಿ ಅರ್ಜುನನಿಗೆ ಬಾಣ ಹೊಡೆಯಲು ಹೇಳಿದನು. ಕರ್ಣನು ರಥವನ್ನೆತ್ತಿಕೊಳ್ಳಲು ಕೆಳಗೆ ಇಳಿದಾಗ ಪಾಶುಪತಾಸ್ತ್ರದಿಂದ ಹೊಡೆದು ಕರ್ಣನನ್ನು ಪಾರ್ಥ ಕೊಂದನು. ಮರಣ ಕಾಲದಲ್ಲಿಯೂ ಕರ್ಣನು ಶ್ರೀಕೃಷ್ಣನನ್ನೇ ನೋಡುತ್ತಿದ್ದನು. ಕರ್ಣನ ಮರಣದಿಂದ ಪಾಂಡವರಿಗೆ ಹರ್ಷವಾಯಿತು. ಆದರೆ ಕೌರವನಿಗೆ ಬಹಳ ದುಃಖವಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top