ಆರೋಗ್ಯ

ಪೇಪರ್ ನಲ್ಲಿ ಪೊಟ್ಟಣ ಕಟ್ಟಿದ ಬೋಂಡಾ ಬಜ್ಜಿ ,ಕುರುಕು -ಮುರುಕು ತಿನ್ನೋರು ಇದನ್ನೊಂದ್ಸರಿ ಓದಿ

ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ನಡೆಸಿದ ಸಂಶೋಧನೆಗಳ ಪ್ರಕಾರ ಪೇಪರ್ ನಲ್ಲಿ ಪೊಟ್ಟಣ ಕಟ್ಟಿದ ತಿಂಡಿಗಳನ್ನು ತಿಂದರೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆಯಂತೆ .

 

 

ಪೇಪರ್ ಮುದ್ರಣಕ್ಕೆ ಬಳಸುವ ಹಾನಿಕಾರಕ ಬಣ್ಣಗಳು, ವರ್ಣದ್ರವ್ಯಗಳು, ಬೈಂಡರುಗಳು, ಸಂರಕ್ಷಕಗಳನ್ನು ಸಹ ಒಳಗೊಂಡಿರಬಹುದು. ರಾಸಾಯನಿಕ ಮಾಲಿನ್ಯಕಾರಕಗಳಲ್ಲದೆ, ಬಳಸಿದ ಪತ್ರಿಕೆಗಳಲ್ಲಿ ರೋಗಕಾರಕ ಸೂಕ್ಷ್ಮ ಜೀವಿಗಳ ಉಪಟಳ ತಡೆಯುವ ರಾಸಾಯನಿಕಗಳು ಸಹ ಇರುತ್ತವೆ ಇವುಗಳು
ಮಾನವನ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡುತ್ತದೆ.

 

 

ಮರುಬಳಕೆಯ ಕಾಗದದಿಂದ ಮಾಡಲ್ಪಟ್ಟ ಪೇಪರ್ / ಕಾರ್ಡ್ಬೋರ್ಡ್ ಪೆಟ್ಟಿಗೆಗಳು ಕೂಡಾ ಥಾಥಲೇಟ್ನಂತಹ ಹಾನಿಕಾರಕ ರಾಸಾಯನಿಕಗಳನ್ನೂ ಹೊಂದಿರುತ್ತವೆ ಇವು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ತೀವ್ರ ವಿಷತ್ವಕ್ಕೆ ಕಾರಣವಾಗಬಹುದು.

 

 

ರೋಗ ನಿರೋಧಕ ವ್ಯವಸ್ಥೆಯನ್ನು ಕುಂಠಿತಗೊಳಿಸಿ ಕ್ಯಾನ್ಸರ್-ಸಂಬಂಧಿತ ಆರೋಗ್ಯ ತೊಡಕುಗಳನ್ನು ಉಂಟು ಮಾಡುತ್ತವೆ ಆದ್ದರಿಂದ ಪೇಪರ್ ನಲ್ಲಿ ಪೊಟ್ಟಣ ಕಟ್ಟಿದ ಬೋಂಡಾ ಬಜ್ಜಿ ,ಕುರುಕು -ಮುರುಕು ತಿನ್ನೋಕು ಮುಂಚೆ ಯೋಚನೆ ಮಾಡಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top