fbpx
ಕನ್ನಡ

ಕನ್ನಡದ ಹೆಸರಲ್ಲಿ ರೋಲ್’ಕಾಲ್ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ.? ಆರೋಪ

ಕನ್ನಡದ ಹೆಸರಲ್ಲಿ ರೋಲ್’ಕಾಲ್ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ.? ಆರೋಪ

 

 

 

ಈ ಸುದ್ದಿಯನ್ನು ಕೇಳಿದರೆ ಒಂದು ಕ್ಷಣ ಎದೆ ಜಲ್ ಎನಿಸುತ್ತದೆ, ಕರ್ನಾಟಕದ ದೊಡ್ಡ ಸಂಘಟನೆ ಎಂದು ಎನಿಸಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಸಲಿ ಬಂಡವಾಳವನ್ನು ಬಯಲು ಮಾಡಿದ್ದೇವೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದು “kannada pride for sale” ಎಂದು ಶೀರ್ಷಿಕೆ ಕೊಟ್ಟು ವರದಿ ಮಾಡುತ್ತಿದೆ..

ಡಿಸೆಂಬರ್ 31ರ ಹೊಸ ವರ್ಷದ ಸ್ವಾಗತಕ್ಕೆ ಬೆಂಗಳೂರಿನಲ್ಲಿ ಸನ್ನಿ ನೈಟ್ಸ್ ಕಾರ್ಯಕ್ರಮ ನಡೆಯಬೇಕಿತ್ತು, ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಬಂದು ಕುಣಿಯಬೇಕಿತ್ತು ಆದರೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕೆಲವು ಕನ್ನಡ ಪರ ಸಂಘಟನೆಗಳು ಸನ್ನಿ ನೈಟ್ಸ್ ಕಾರ್ಯಕ್ರಮಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದವು. ಅದರ ಜೊತೆಗೆ ಪೊಲೀಸರು ಕೂಡ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಿಸಿದಕ್ಕಾಗಿ ಸನ್ನಿ ಲಿಯೋನ್ ಬಂದಿರಲಿಲ್ಲ.

 

 

ನಾವು ಆ ಕಾರ್ಯಕ್ರಮದ ಆಯೋಜಕರು ಅದೇ ಕಾರ್ಯಕ್ರಮವನ್ನು ಪ್ರೇಮಿಗಳ ದಿನದ(ಫೆಬ್ರವರಿ 14) ರಾತ್ರಿ ಮಾಡಬೇಕು ಈ ಭಾರಿ ನಿಮ್ಮ ವಿರೋಧ ಇರಬಾರದು ನಮಗೆ ರಕ್ಷಣೆಬೇಕು ಎಂದು ಹೇಳಿಕೊಂಡು ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ರಹಸ್ಯ ಕ್ಯಾಮರಾ ಕಾರ್ಯಾಚರಣೆಯ ತಂಡದಿಂದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಸಂಪರ್ಕಿಸಿದಾಗ ಕೆಲವರು 30 ಲಕ್ಷದವರೆಗೂ ಹಣವನ್ನು ಕೇಳಿದರು ಎಂದು ರಹಸ್ಯ ಕ್ಯಾಮರಾ ಕಾರ್ಯಾಚರಣೆಯನ್ನ ರಾಷ್ಟ್ರೀಯ ಸುದ್ದಿವಾಹಿನಿ ಪ್ರಸಾರ ಮಾಡುತ್ತಿದೆ.

ರಾಷ್ಟ್ರೀಯ ಸುದ್ದಿವಾಹಿನಿಯ ರಹಸ್ಯ ಕ್ಯಾಮ ಕಾರ್ಯಾಚರಣೆಯಲ್ಲಿ ದಾಖಲಾಗಿರುವ ಮಾತುಗಳೇನು ಎಂಬುದನ್ನು ಇಲ್ಲಿ ಓದಿ:

ಅಂಜಿನಪ್ಪ(ಕರವೇ ರಾಜ್ಯ ಉಪಾಧ್ಯಕ್ಷ): ರಾಜ್ಯದಲ್ಲಿ ನಮ್ಮದು ಬಹುದೊಡ್ಡ ಸಂಘಟನೆ, ನಾವು ಒಂದು ಸ್ಟೇಟ್ ಮೆಂಟ್ ಕೊಟ್ರೆ ಇಡೀ ಕರ್ನಾಟಕ ಸ್ತಬ್ಬವಾಗುತ್ತೆ.

ರಿಪೋರ್ಟರ್: ಈಗ ಏನಾಗಬೇಕು ಹೇಳಿ.

ಅಂಜಿನಪ್ಪ(ಕರವೇ ರಾಜ್ಯ ಉಪಾಧ್ಯಕ್ಷ): ಮೂವತ್ತು ಲಕ್ಷ ತುಂಬಾ ಕಡಿಮೆ ಆಯ್ತು, ಇದು ದೊಡ್ಡ ಕಾರ್ಯಕ್ರಮ ಆಕೆ ದೊಡ್ಡ ನಟಿ ಹಾಗಾಗಿ ದೊಡ್ಡ ಮೊತ್ತದಿಂದ ಈ ಸಮಸ್ಯೆ ಪರಿಹಾರವಾಗುತ್ತದೆ, ಮೂವತ್ತು ಲಕ್ಷದಿಂದ ಏನೂ ಆಗಲ್ಲ, ಮೂವತ್ತು ಲಕ್ಷ ಬಹಳ ಕಡಿಮೆ ಆಯಿತು. ಕಾರ್ಯಕ್ರಮಕ್ಕೆ ಅಡ್ಡಿ ಮಾಡುವ ಜನ ನಮ್ಮವರು ನಾನು ಹೇಳಿದರೆ ಮಾತ್ರ ಅವರು ಅಲ್ಲಿಗೆ ಹೋಗುತ್ತಾರೆ.

ರಿಪೋರ್ಟರ್: ನಾರಾಯಣ ಗೌಡರ ಜೊತೆ ಮಾತನಾಡಿದ್ದೀರಾ? ಅವ್ರು ಏನ್ ಅಂತಾರೆ? ಎಷ್ಟು ಕೇಳ್ತಾರೆ?.

ಅಂಜಿನಪ್ಪ: ಅವರಿಗೆ 30 ಲಕ್ಷ ಕೊಡಿ.

ರಿಪೋರ್ಟರ್: ಯಾರಿಗೆ?

ಅಂಜಿನಪ್ಪ :ನಮ್ಮ ಬಾಸ್’ಗೆ, ಅಡ್ವಾನ್ಸ್ ಕೊಟ್ಬಿಡಿ ಮೊದಲು.

ರಿಪೋರ್ಟರ್: ಅಡ್ವಾನ್ಸ್ ಕೊಡೋದಕ್ಕೆ ಆಗಲ್ಲ! 20 ಲಕ್ಷ ದುಡ್ಡು ಕೊಡ್ತೀವಿ ನಮಗೆ ಪೂರ್ತಿ ಭರವಸೆ ಕೊಡಿ. ಸನ್ನಿ ಲಿಯೋನ್ ಕಾರ್ಯಕ್ರಮ ಯಾವುದೇ ತೊಂದರೆ ಇಲ್ಲದಂತೆ ನಡೆಯಬೇಕು. ಆಕೆ ಕಾರ್ಯಕ್ರಮ ಮುಗಿಸಿ ಹೋಗುವವರೆಗೂ..

ಅಂಜಿನಪ್ಪ: ಕಾರ್ಯಕ್ರಮ ನಡೆಯುವಾಗ ನಾನೇ ಅಲ್ಲಿರುತ್ತೇನೆ, ನಮ್ಮ ಬೇರೆ ವಿಭಾಗದ ಅಧ್ಯಕ್ಷರು 10-15 ತಂಡಗಳಾಗಿ ಬರ್ತಾರೆ, ನಾವು ಅಲ್ಲಿ ಬಂದು ನಿಮಗೆ ಪ್ರೊಟೆಕ್ಷನ್ ಕೊಡ್ತೀವಿ.

ರಿಪೋರ್ಟರ್: ನಮಗೆ ಭದ್ರತೆ ಕೊಡ್ತೀರಾ?

ಅಂಜಿನಪ್ಪ: ಅದಕ್ಕೆ ನಾನು ಅಡ್ವಾನ್ಸ್ ಕೇಳ್ತಿರೋದು.

 

 

ಈ ವಿಡಿಯೋ ತುಣುಕು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗುತ್ತಿದ್ದು ಈ ಬಗ್ಗೆ ಸತ್ಯಸತ್ಯತೆಗಳ ಬಗ್ಗೆ ತಿಳಿಯದೆ ಗೊಂದಲಕ್ಕೀಡಾಗುವಂತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾರಾಯಣ ಗೌಡ ಬೇರೆ ಸನ್ನಿವೇಶದಲ್ಲಿ ಚಿತ್ರೀಕರಿಸಿರುವ ದೃಶ್ಯವನ್ನು ಇಟ್ಟುಕೊಂಡು ನಮ್ಮ ಸಂಘಟನೆಯ ಮಾನವನ್ನು ಹತ್ತಿಕ್ಕಲು ರಾಷ್ಟ್ರೀಯ ಸುದ್ದಿವಾಹಿನಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top