ಸಮಾಚಾರ

29 ವರ್ಷದ ನಂತರ ಬಾಟಲಿಯಲ್ಲಿ ಇಟ್ಟಿದ ಆ ಪತ್ರ ಸಿಕ್ತು , ಅಂತದೆಂತಿತ್ತು ಆ ಪತ್ರದಲ್ಲಿ ಮುಂದೆ ಓದಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

29 ವರ್ಷದ ನಂತರ ಬಾಟಲಿಯಲ್ಲಿ ಇಟ್ಟಿದ ಆ ಪತ್ರ ಸಿಕ್ತು , ಅಂತದೆಂತಿತ್ತು ಆ ಪತ್ರದಲ್ಲಿ ಮುಂದೆ ಓದಿ

29 ವರ್ಷದ ನಂತರ ಆ ಪತ್ರ ಸಿಕ್ಕಾಗ…

ನಾವು ಕಳೆದುಕೊಂಡ ವಸ್ತುಗಳ ಅಚಾನಕ್ಕಾಗಿ ನಮಗೆ ಸಿಕ್ಕಾಗ ಆಗುವ ಅನುಭವ, ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ. ಇನ್ನು ಆ ವಸ್ತು ನಮ್ಮನ್ನು ನಮ್ಮ ಹಿಂದಿನ ನೆನಪುಗಳತ್ತ ಕೊಂಡೊಯ್ಯುತ್ತದೆಎನ್ನುವುದಾದರೆ ಆ ಖುಷಿಯೇ ಬೇರೆ.ಇನ್ನು ಸುಮ್ಮನೆ ಏನೋ ಬರೆದ ಪತ್ರವನ್ನು ಬಾಟಲಿಯಲ್ಲಿಟ್ಟು ಸಮುದ್ರಕ್ಕೆ ಬಿಸಾಕಿ, ಮತ್ತದು 29 ವರ್ಷಗಳ ನಂತರಅದೇ ಸಮುದ್ರದತಟದಲ್ಲಿದೊರೆತರೆ ಹೇಗಾಗಬೇಡ ಹೇಳಿ…

 

 

ತೆಲುಗಿನ ಶಿವಮಣಿ ಚಿತ್ರದಲ್ಲಿಇಂತಹದ್ದೇಒಂದು ಪ್ರಸಂಗಇದೆ. ಅಸಿನ್ ಒಂದು ಪತ್ರ ಬರೆದುಅದನ್ನು ಬಾಟಲಿಯಲ್ಲಿಟ್ಟು ಸಮುದ್ರಕ್ಕೆ ಬಿಸಾಡಿರುತ್ತಾಳೆ.ಕೆಲವು ವರ್ಷಗಳ ನಂತರರಕ್ಷಿತಾ ಸಮುದ್ರದಲ್ಲಿ ಪ್ರಯಾಣಿಸುವಾಗ ಆ ಬಾಟೆಲ್ ಸಿಕ್ಕು, ಆ ಪತ್ರ ಓದುತ್ತಾಳೆ.ಇದು ಚಲನಚಿತ್ರದ ಪ್ರಸಂಗವಾದರೆ, ಸದ್ಯ ನೈಜ ಪ್ರಸಂಗವೇ ನಡೆದಿದೆ.29 ವರ್ಷಗಳ ಹಿಂದೆಒಬ್ಬ ಹುಡುಗಿ ಬರೆದಿದ್ದಪತ್ರ ಈಗ ಸಮುದ್ರದಿಂದ ಹೊರಬಂದಿದೆ. ನೆನಪಿರಲಿ… ಇದು ಪ್ರೇಮ ಪತ್ರವಲ್ಲ!

ಮಿರಾಂಡಾಜಾವೆಜ್ ಎಂಬಾಕೆ ತನ್ನ 8ನೇ ವಯಸ್ಸಿನಲ್ಲಿದ್ದಾಗ ಅಂದರೆ 1988 ಸೆಪ್ಟೆಂಬರ್ 26ರಂದು ಒಂದು ಪತ್ರ ಬರೆಯುತ್ತಾಳೆ.ಅದರಲ್ಲಿತನ್ನ ಹೆಸರು, ವಿಳಾಸ, ಶಾಲೆ ಹೆಸರು, ಅಲ್ಲಿಗೆ ಬಂದಿರುವಕಾರಣಎಲ್ಲ ವಿವರಗಳನ್ನು ಬರೆದು ಆ ಪತ್ರವನ್ನು ಮಡಿಚಿಟ್ಟುಒಂದು ಬಾಟಲಿಯಲ್ಲಿ ಹಾಕಿ ಮುಚ್ಚಳ ಮುಚ್ಚಿ ಸಮುದ್ರಕ್ಕೆ ಬಿಸಾಡಿರುತ್ತಾಳೆ.

ಸದ್ಯ ಮಿರಾಂಡಾಅವರಿಗೆ 37 ವರ್ಷ.ಅಂದರೆ ಬರೋಬ್ಬರಿ 29 ವರ್ಷಗಳ ಬಳಿಕ ಆ ಬಾಟಲಿ ಸಿಕ್ಕಿದೆ.ಅಮೆರಿಕಾದ ಸೌತ್‍ಕರೋಲಿನಾದಲ್ಲಿರುವಕೊಲ್ಲೆಟಾನ್‍ಕೌಂಟಿ, ಎಡಿಕಸ್ಟೋ ಬೀಚ್‍ನಲ್ಲಿ ಬಿಸಾಡಿದ್ದ ಪತ್ರದ ಬಾಟಲಿ ಇತ್ತೀಚೆಗೆಜಾರ್ಜಿಯಾ ಸಪೆಲೊ ಐಲ್ರ್ಯಾಂಡ್ ಬೀಚ್‍ನಲ್ಲಿ ಕಾಣಿಸಿಕೊಂಡಿದೆ.

 

 

ಆದರೆ ಈ ಬಾಟಲಿ ಮಿರಾಂಡಾಗೆ ಸಿಕ್ಕಿದ್ದಲ್ಲ. ಬದಲಿಗೆ ಲೊಂಡಾ ಹಾಂಪೈರ್ಸ್, ಡೇವಿಡ್ ದಂಪತಿಗಳಿಗೆ ಸಿಕ್ಕಿದೆ.ಆ ಪತ್ರಓದಿದಅವರು, ಅದರಲ್ಲಿನ ವಿಷಯ, ವಿಳಾಸ ತಿಳಿದು, ಅದರ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.ಆ ಪೋಸ್ಟ್ ವೈರಲ್ ಆಗಿ, ಅದನ್ನು ಮಿರಾಂಡಾ ನೋಡಿ, ನಂತರಡೇವಿಡ್ ದಂಪತಿಗಳನ್ನು ಭೇಟಿಯಾಗಿತನ್ನ ಪತ್ರವನ್ನುಅವರಿಂದ ಪಡೆದುಕೊಂಡಿದ್ದಾಳೆ.

 

 

ಬಾಲ್ಯದತನ್ನ ಕೈ ಬರಹದ ಸಿಹಿನೆನಪನ್ನು ಈ ಪತ್ರ ಮರುಕಳಿಸಿದೆ ಎಂದು ಮಿರಾಂಡಾಅತಿ ಸಂತೋಷಪಟ್ಟಿದ್ದಾಳೆ.ಆದರೆಎಲ್ಲರಿಗೂ ಈ ಅದೃಷ್ಟ ಸಿಕ್ಕುವುದಿಲ್ಲ. ಆದರೂ ನೀವು ಒಂದು ಪತ್ರ ಬರೆದು ಬಾಟಲಿಯಲ್ಲಿಟ್ಟು ಸಮುದ್ರಕ್ಕೆ ಬಿಸಾಡಿ ನೋಡುವ… ಯಾವಾಗ ಸಿಗುತ್ತದೆ ಎಂದು!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top