fbpx
ಭವಿಷ್ಯ

ಜನವರಿ 31 ನೇ ತಾರೀಖಿನಂದು ಖಂಡಗ್ರಾಸ ಚಂದ್ರಗ್ರಹಣ ಆ ದಿನ ಈ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು ಅದಕ್ಕೆ ಈ ಪರಿಹಾರಗಳನ್ನು ತಪ್ಪದೆ ಮಾಡಿ

ಜನವರಿ 31 ನೇ ತಾರೀಖಿನಂದು ಖಂಡಗ್ರಾಸ ಚಂದ್ರಗ್ರಹಣ ಆ ದಿನ ಈ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು ಅದಕ್ಕೆ ಈ ಪರಿಹಾರಗಳನ್ನು ತಪ್ಪದೆ ಮಾಡಿ

ಖಂಡಗ್ರಾಸ ಚಂದ್ರಗ್ರಹಣ ಜನವರಿ 31 ನೇ ತಾರೀಖಿನಂದು….. ಈ ರಾಶಿಯ ಮೇಲೆ ಪರಿಣಾಮ ಬೀರುವುದು.

ಅರವತ್ತು ವರ್ಷಗಳ ನಂತರ ಮಹಾ ಅಪಾಯಕಾರಿ ಚಂದ್ರಗ್ರಹಣ ಇದೇ ತಿಂಗಳು ಅಂದರೆ ಜನವರಿ ಮೂವತ್ತೊಂದನೇ ತಾರೀಖಿನಂದು ಬುಧವಾರ ಸಂಭವಿಸಲಿದೆ. ಈ ಗ್ರಹಣವನ್ನು ಖಂಡಗ್ರಾಸ ಚಂದ್ರಗ್ರಹಣ ಎಂದು ಕರೆಯುತ್ತಾರೆ. ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಗ್ರಸ್ತೋದಯವಾಗಿ ಗೋಚರವಾಗುತ್ತಿದೆ.

ಅಂದು ಸಂಜೆ 5:17 ಕ್ಕೆ ಸ್ಪರ್ಶ ಕಾಲ ಅಥವಾ ಆರಂಭವಾಗುತ್ತದೆ ರಾತ್ರಿ 7:19 ಕ್ಕೆ ಗ್ರಹಣ ಮಧ್ಯಕಾಲವಾಗುತ್ತದೆ ಮತ್ತು ರಾತ್ರಿ 8:41 ಕ್ಕೆ ಮೋಕ್ಷಕಾಲ ಹೊಂದಲಿದೆ ಅಥವಾ ಅಂತ್ಯವಾಗಲಿದೆ.
ಗ್ರಹಣ ಎಂದರೆ ಗತಿಸುವುದು ಎಂದು ಅರ್ಥ. ಗ್ರಹಣ ಸಂಭವಿಸಿದಾಗ ಪಂಚಭೂತದಲ್ಲಿ ಏರುಪೇರು, ಚಂದ್ರ ಗ್ರಹಣ ಎಂದರೆ ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬರುವ ಒಂದು ಪ್ರಕ್ರಿಯೆ. ಅದೇ ರೀತಿ ಇದು ಒಂದು ವಿಶೇಷವಾದ ಚಂದ್ರಗ್ರಹಣ ಹಾಗೂ ಈ ವರ್ಷದ ಮೊದಲ ಗ್ರಹಣ ಇದಾಗಿದೆ.

 

 

ಗ್ರಹಣಗಳಿಗೂ, ಗ್ರಹಣಕ್ಕೂ ಮತ್ತು ಜ್ಯೋತಿಷ್ಯ ಶಾಸ್ತ್ರಕ್ಕೂ ತುಂಬಾ ನಂಟು ಇದೆ. ಅದೇ ರೀತಿ ಈ ಗ್ರಹಣದಿಂದ ಕೆಲವು ರಾಶಿಗೆ ಶುಭ ಫಲ ದೊರೆಯುವುದು. ಇನ್ನು ಕೆಲವು ರಾಶಿಗೆ ಆಶುಭವಾಗುವುದು. ಇದರ ಫಲ ಗ್ರಹಣದ ದಿನ ಅಥವಾ ತಕ್ಷಣವೇ ಅನುಭವಕ್ಕೆ ಬರುವುದಿಲ್ಲ. ಎರಡು, ಮೂರು ತಿಂಗಳ ನಂತರ ಅನುಭವಕ್ಕೆ ಬರುವುದು.

ಯಾವ ರಾಶಿಯವರಿಗೆ ಏನು ಫಲ ? ಯಾವ ನಕ್ಷತ್ರಕ್ಕೆ ಏನು ಫಲ ? ಎಂದು ತಿಳಿಯೋಣ ಬನ್ನಿ..

ರಾಹು ಎಂದರೆ ಭಯ, ನಡುಕ ಹುಟ್ಟಿಸುವಂತಹದ್ದು. ಈ ಗ್ರಹಣ ಆಶ್ಲೇಷಾ ನಕ್ಷತ್ರದಲ್ಲಿ ಪೂರ್ಣ ಚಂದ್ರ ರಾಹು ಗ್ರಹಣ ಗ್ರಸ್ತೋದಯವಾಗುತ್ತದೆ. ಹಾಗಾಗಿ ತೊಂದರೆ ಹೆಚ್ಚು. ಮೊದಲಿಗೆ ಗ್ರಹಣದಿಂದ ಶುಭ ಫಲವನ್ನು ಹೊಂದುವ ರಾಶಿಗಳು ವೃಷಭ ರಾಶಿ, ತುಲಾ ರಾಶಿ,ಕುಂಭ ರಾಶಿ ಹಾಗೂ ಕನ್ಯಾ ರಾಶಿ. ಈ ನಾಲ್ಕು ರಾಶಿಗಳಿಗೆ ತುಂಬ ಒಳ್ಳೆಯದಾಗುವುದು ಇವರಿಗೆ ಕೈ ಹಾಕಿದ ಕೆಲಸವೆಲ್ಲ ನೆರವೇರುವುದು .

ಮಿಶ್ರಫಲ ಹೊಂದುವ ರಾಶಿಗಳು.

ಮೀನ ರಾಶಿ, ಮಕರ ರಾಶಿ, ವೃಶ್ಚಿಕ ರಾಶಿ ಹಾಗೂ ಮಿಥುನ ರಾಶಿ. ಇವರಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಸಹ ಲಭಿಸುವುದು.
ಅಶುಭ ಫಲ…… ಹೊಂದುವ ರಾಶಿಗಳು ಕಟಕ ರಾಶಿ, ಮೇಷ ರಾಶಿ, ಸಿಂಹ ರಾಶಿ ಮತ್ತು ಧನಸ್ಸು ರಾಶಿ. ಇವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಇದು ಇವರಿಗೆ ತುಂಬಾ ಕಷ್ಟ ಕಾಲವಾಗಿದೆ. ಈ ಗ್ರಹಣ ಕಟಕರಾಶಿಯಲ್ಲಿ ಸಂಭವಿಸುತ್ತಿರುವುದರಿಂದ ಮತ್ತು ಕಟಕ ರಾಶಿಯ ಅಧಿಪತಿ ಚಂದ್ರನೇ ಆಗಿರುವುದರಿಂದ ಮನಸ್ಸು ಕೆಡುವುದು. ಸಾವು, ನೋವು ಸಂಭವಿಸುವುದು ಸಹ ಆಗುತ್ತದೆ.

 

 

ಪುನರ್ವಸು ನಕ್ಷತ್ರ, ಪುಷ್ಯ ನಕ್ಷತ್ರ, ಆಶ್ಲೇಷಾ ನಕ್ಷತ್ರ, ಜೇಷ್ಠ ನಕ್ಷತ್ರ ಹಾಗೂ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರಿಗೆ ಕೂಡ ಅಶುಭ ಫಲ ಪ್ರಾಪ್ತಿಯಾಗುವುದು .

ಅಶುಭ ಫಲಕ್ಕೆ ಪರಿಹಾರ.

ಗ್ರಹಣದ ಸಮಯದಲ್ಲಿ ಸ್ವಲ್ಪ ಅಕ್ಕಿಯನ್ನು ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು. ಮರುದಿನ ದೇವಸ್ಥಾನಕ್ಕೆ ಅಥವಾ ಬಡವರಿಗೆ ಆ ಅಕ್ಕಿಯನ್ನು ದಾನ ನೀಡಬೇಕು.

ಇದು ಚಂದ್ರನಿಗೆ ಸಂಬಂಧಿಸಿದ ಮಂತ್ರವಾಗಿದೆ.

“ಅಕ್ಷಿರ ಪೂರ್ತಾಯ ವಿಗ್ಮಯೇ ಅಮೃತತ್ವಯಾ ಧೀಮಹಿ ತನ್ನೋ ಚಂದ್ರ ಪ್ರಚೋದಯಾತ್” ಈ ಮಂತ್ರವನ್ನು ಪಠಿಸಿ.

ಗ್ರಹಣ ಸಮಯದಲ್ಲಿ ಹುಟ್ಟು ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.

ಗ್ರಹಣ ಮಧ್ಯ ಕಾಲದಲ್ಲಿ ಸ್ನಾನ ಮಾಡಿದರೆ ಲಕ್ಷ ಫಲ ಸಿಗುವುದು. ಗ್ರಹಣ ಅಂತ್ಯ ಅಥವಾ ಮೋಕ್ಷ ಕಾಲದಲ್ಲಿ ಸ್ನಾನ ಮಾಡಿದರೆ ಅನಂತ ಅನಂತ ಫಲ ಸಿಗುವುದು. ಗ್ರಹಣ ಮಧ್ಯಮ ಕಾಲದಲ್ಲಿ ಹೋಮ ಮಾಡಿದರೆ ಕೋಟಿ ಪುಣ್ಯ ಫಲ ಸಿಗುವುದು. ನೆನಪಿರಲಿ ಗ್ರಹಣ ಸಮಯದಲ್ಲಿ ಯಾರೂ ಹೊರಗೆ ಬರಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top