ಹೆಚ್ಚಿನ

ಆಧಾರ್ ಕಾರ್ಡ್ ಗೆ ಬರುತ್ತಿದೆ 16 ಅಂಕಿಯ ಹೊಸ ವರ್ಚುವಲ್ ಸಂಖ್ಯೆ.

ಆಧಾರ್ ಕಾರ್ಡ್ ಗೆ ಬರುತ್ತಿದೆ 16 ಅಂಕಿಯ ಹೊಸ ವರ್ಚುವಲ್ ಸಂಖ್ಯೆ.

 

 

 

ಆಧಾರ ಕಾರ್ಡ್ ಬಳಕೆದಾರರ ಗೌಪ್ಯತೆ ಕಾಳಜಿಯನ್ನು ವಹಿಸುವ ನಿಟ್ಟಿನಲ್ಲಿ ಬುಧವಾರ ಯುಐಡಿಎಐ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದು ಪರ್ಯಾಯ ಗುರುತು ಸಂಖ್ಯೆ’ಯ (ವರ್ಚ್ಯುವಲ್‌ ಐಡಿ) ವಿನೂತನ ಪರಿಕಲ್ಪನೆಯನ್ನು ರೂಪಿಸಿದೆ. ನಾವಿನ್ನು ಸಿಮ್ ಕಾರ್ಡ್ ತೆಗೆದುಕೊಳ್ಳುವಾಗ ಅಥವಾ ಇನ್ನಿತರೇ ಸಂಧರ್ಭದಲ್ಲಿ ನಮ್ಮ ಅಸಲಿ 12 ಅಂಕಿಯ ಆಧಾರ ಸಂಖ್ಯೆಯ ಬದಲು ಈ ಪರ್ಯಾಯ ಗುರುತು ಸಂಖ್ಯೆ (ವರ್ಚ್ಯುವಲ್‌ ಐಡಿ) ಕೊಡಬಹುದು.

ಅಧಿಕಾರಿಗಳು ಹೇಳಿರುವಂತೆ ಆಧಾರ ಬಳಕೆದಾರರು ಎಷ್ಟು ಬೇಕೋ ಅಷ್ಟು ವರ್ಚುವಲ್ ID ಗಳನ್ನು ರಚಿಸಬಹುದು. ನಾವು ಹೊಸ ವರ್ಚುವಲ್ ಸಂಖ್ಯೆ ರಚಿಸಿದಾಗ ಹಳೆಯ ಸಂಖ್ಯೆ ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ. ಆಧಾರ ಅಧಿಕೃತ ವೆಬ್ಸೈಟ್ https://uidai.gov.in/ ನಲ್ಲಿ 16 ಅಂಕಿಯ ವರ್ಚುವಲ್ ಸಂಖ್ಯೆಯನ್ನು ಪಡೆಯಬಹುದಾಗಿದೆ.

 

 

ಈ ಹೊಸ ವರ್ಚುವಲ್ ಸಂಖ್ಯೆ ವ್ಯವಸ್ಥೆಯನ್ನು 2018ರ ಮಾರ್ಚ್‌ 1ರಿಂದ ಜಾರಿಗೆ ತರಲು ನಿರ್ಧರಿಸಿದ್ದಾರೆ. ವಿವಿಧ ಸೇವೆಗಳನ್ನು ನೀಡುವ ಎಲ್ಲ ಸಂಸ್ಥೆಗಳು ಜೂನ್‌ 1ರಿಂದ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಸಂಸ್ಥೆಗಳು ಈ ಸಮಯದಲ್ಲಿ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳದಿದ್ದರೆ ದಂಡ ವಿಧಿಸಲು ನಿಧರಿಸಿದ್ದಾರೆ.

ಈ ಕ್ರಮವು ಆಧಾರ್ ಡೇಟಾದ ಗೌಪ್ಯತೆ ಮತ್ತು ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ವ್ಯಕ್ತಿಯು ಬೆರಳಚ್ಚು ಇಡುವ ಸಂಧರ್ಭದಲ್ಲಿ ಈ ವರ್ಚುಯಲ್ ಸಂಖ್ಯೆಯನ್ನು ನೀಡಿದರೆ ಸಾಕು. 12 ಅಂಕಿಯ ಮೂಲ ಸಂಖ್ಯೆಯನ್ನು ಹೇಳುವ ಅವಶ್ಯಕತೆ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top