ದೇವರು

19 ಅಡಿಯ ಕಾಳಿಂಗ ಸರ್ಪವನ್ನು ಕೈಯಲ್ಲಿ ಹಿಡಿದು ಈ ದೇವಿ ಆಲಯದಲ್ಲಿ ಪೂಜೆ ಮಾಡಲಾಗುತ್ತೆ ಇದರ ವಿಶೇಷತೆಗಳೇನು ತಿಳಿಯೋಣ ಬನ್ನಿ

ಶ್ರೀ ಮಹಾ ಪ್ರತ್ಯಾಂಗರ ದೇವಿಯು ಶಕ್ತಿಶಾಲಿ ದೇವಿಯಾಗಿದ್ದು, ಶಿವನ ಒಂದು ಉಗ್ರ ಅವತಾರ ಶರಬೇಶ್ವರನ ಸೊಕ್ಕು ಮುರಿಯುತ್ತಾಳೆ.
ನರಸಿಂಹಿಕಾ ಎಂದು ಕೂಡ ಕರೆಯಲ್ಪಡುತ್ತಿದ್ದಳು ಇದರ ಉಲ್ಲೇಖಗಳು ಕಾಳಿ ಸಹಸ್ರನಾಮ ಸ್ತೋತ್ರದಲ್ಲಿ ಇವೆ , ಈಕೆಯ ದೇಹ ಅರ್ಧ ಮಾನವ ದೇಹ ಹಾಗು ಮುಖದ ಭಾಗ ಸಿಂಹದ್ದಾಗಿದೆ.

 

 

ಸಿಂಹದ ತಲೆಯು ಗಂಡು ಮತ್ತು ದೇಹವು ಶಿವನ ರೂಪಗಳೇ ಆಗಿವೆ ಇದು ಶಿವ ಹಾಗು ಶಕ್ತಿಯ ಪ್ರತಿರೂಪವೇ ಆಗಿದೆ 1008 ತಲೆಗಳನ್ನೂ ದೇವಿ ಹೊಂದಿದ್ದಾಳೆ ಇದು ಸಹಸ್ರಾರಾ ಚಕ್ರವನ್ನು, ವಿಶ್ವ ಶಕ್ತಿಯನ್ನು ಚಕ್ರಾಧಿಪತ್ಯದ ಶಕ್ತಿಯನ್ನು ಪ್ರತಿನಿಧಿಸುತ್ತದೆ ,2016 ಕೈಗಳು , 4 ಸಿಂಹಗಳು ರಥವನ್ನು ಎಳೆಯುವ ಪರಿ 4 ವೇದಗಳನ್ನು ಪ್ರತಿನಿಧಿಸುತ್ತದೆ .

ಅಥರ್ವವೇದದ ಮತ್ತೊಂದು ಹೆಸರು ಅಥರ್ವ ಅಂಗೀರಸ ಎಂದು ಅಂಗೀರಸ ಎಂದರೆ ಮಾಟ ಮಂತ್ರ ಅಥವಾ ನಕಾರತ್ಮಕ ಮಾಂತ್ರಿಕತೆ , ಈ ದೇವತೆಯು ಇಂತಹ ದುಷ್ಟ ಗ್ರಹ ಪೀಡೆ , ನಕಾರತ್ಮಕ ಮಾಂತ್ರಿಕತೆ ಹಾಗು ಮಾಟ ಮಂತ್ರ ಇವುಗಳ ವಿರುದ್ಧ ಹೋರಾಡುತ್ತಾಳೆ .

 

 

ಶ್ರೀ ಚಕ್ರದ ಆರಾಧನೆಯಿಂದ ದೇವಿಯನ್ನು ಒಲಿಸಿಕೊಳ್ಳಬಹುದು ಎಂದು ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ .

 

ಪುರಾಣದ ಕಥೆಗಳು :

 

ಪ್ರಾಚೀನ ಕಾಲದಲ್ಲಿ ಇಬ್ಬರು ಋಷಿಗಳಾದ ಪ್ರತ್ಯಂಗಿರಾ ಹಾಗು ಅಂಗೀರಸ ಧ್ಯಾನದಲ್ಲಿ ಈ ದೇವಿಯನ್ನು ಮೂಲಾ ಮಂತ್ರದ ಮೂಲಕ ಧ್ವನಿ ಪ್ರವಾಹದ ಅಲೌಕಿಕ ಅಲೆಗಳಲ್ಲಿ ಕಂಡುಹಿಡಿದರು ಎಂದು ಹೇಳಲಾಗುತ್ತದೆ ಹೀಗೆ ದೇವಿಗೆ ತಮ್ಮದೇ ಹೆಸರುಗಳನ್ನೂ ಕೊಟ್ಟು ಶ್ರೀ ಮಹಾ ಪ್ರತ್ಯಾಂಗರ ದೇವಿ ಎಂದೇ ಉಲ್ಲೇಖ ಮಾಡಿದ್ದಾರೆ ಎಂದು ಹೇಳಲಾಗುತ್ತದೆ .

 

 

ತಾಯಿಯ ಬೀಜಾಕ್ಷರಿ ಮಂತ್ರ ಕ್ಷಮ್ – ಈ ಮಂತ್ರವು ಮನಸಿಗೆ ಆನಂದವನ್ನು ಉಂಟು ಮಾಡುತ್ತದೆ ಹಾಗು ನಕಾರಾತ್ಮಕ ಶಕ್ತಿಗಳನ್ನು ಓಡಿಸುತ್ತದೆ .

 

19 ಅಡಿಯ ಕಾಳಿಂಗ ಸರ್ಪವನ್ನು ದಿನ ನಿತ್ಯ ಪೂಜೆ ಮಾಡಲಾಗುತ್ತದೆ !

 

 

ಹೌದು ಶ್ರೀ ಮಹಾ ಪ್ರತ್ಯಾಂಗರ ದೇವಿಯು ದೇವಿಯ ಆಲಯಗಳು ಭಾರತ ದೇಶದ ಹಲವಾರು ಜಿಲ್ಲೆಗಳಲ್ಲಿ ಇದ್ದರು ಸಹ , ಮಲೇಷಿಯಾದ ಮೆಲಾಕದಲ್ಲಿರುವ ಪ್ರತ್ಯಾಂಗರ ದೇವಿಯು ದೇವಿಯ ಆಲಯವು ಹಲವಾರು ವಿಸ್ಮಯಗಳಿಗೆ ಹೆಸರುವಾಸಿಯಾಗಿದೆ .

 

 

ಇಲ್ಲಿ ಪ್ರತಿ ನಿತ್ಯ 19 ಅಡಿಯ ಕಾಳಿಂಗ ಸರ್ಪವನ್ನು ಅರ್ಚಕರು ಕೈಯಲ್ಲಿ ಹಿಡಿದು ಪೂಜೆ ಮಾಡುವ ಪರಿ ಎಲ್ಲರಿಗು ಭಯದ ಜೊತೆಗೆ ಆಶ್ಚರ್ಯ ಉಂಟು ಮಾಡುತ್ತದೆ , ತಮಿಳು ನಾಡಿನ ಮೂಲ ದೇವಾಲಯದ ಅರ್ಚಕರೇ ಇಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದು ಈ ವಿಸ್ಮಯವನ್ನು ನೋಡಲು ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ .

 

 

ಮಹಾ ಮಂಗಳಾರತಿ ಮುಗಿಸಿದ ನಂತರ ದೇವಿಯ ಕೊರಳಿಗೆ ಮಾಲೆಯ ಆಗೇ ಹಾವನ್ನು ಹಾಕಲಾಗುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top