ಸಮಾಚಾರ

ಸಚಿನ್ ಪುತ್ರಿಗೂ ತಪ್ಪಲಿಲ್ಲವೇ ಕಿರುಕುಳ?

ಸಚಿನ್ ಪುತ್ರಿಗೂ ತಪ್ಪಲಿಲ್ಲವೇ ಕಿರುಕುಳ?

ಅದೇನೋಯಾವ ಹೆಣ್ಣು ಮಕ್ಕಳಿಗೂ ಕಿರುಕುಳ ಎಂಬುದರಿಂದ ಮುಕ್ತಿಯೇಇಲ್ಲವೇನೋ… ಒಂದಾದ ನಂತರಒಂದರಂತೆ ಸಮಸ್ಯೆ ಹೆಚ್ಚು ಹೆಣ್ಣುಮಕ್ಕಳನ್ನೇ ಪ್ರೀತಿಸುತ್ತದೇನೋ ಅನಿಸುತ್ತದೆ.ಏನೂ ಸವಲತ್ತುಗಳಿಲ್ಲದ ನಿರ್ಗತಿಕ ಹುಡುಗಿಯರಿಂದ ಹಿಡಿದು, ಸಕಲ ಸೌಲಭ್ಯಗಳಲ್ಲಿ ಮಿಂದೆದ್ದಿರುವ ಹುಡುಗಿಯರತನಕಒಂದಲ್ಲಒಂದು ಕಿರುಕುಳ ಕೊಡುವ ಮಂದಿ ಅವರ ಬದುಕಿನಲ್ಲಿಒಮ್ಮೆಯಾದರೂಎಂಟ್ರಿಕೊಟ್ಟಿರುತ್ತಾರೆ.

ಈಗ ಸಚಿನ್‍ತೆಂಡೂಲ್ಕರ್ (ಖ್ಯಾತಕ್ರಿಕೆಟ್‍ಆಟಗಾರ) ಅವರ ಪುತ್ರಿಯ ಪಾಲಿಗೆ ಈ ದುಸ್ಥಿತಿ ಎದುರಾಗಿದೆ.32 ವಯಸ್ಸಿನ ವ್ಯಕ್ತಿಯೊಬ್ಬ ಸಚಿನ್ ಪುತ್ರಿ ಸಾರಾಗೆತನ್ನನ್ನು ಮದುವೆಆಗುವಂತೆ ಬೆನ್ನುಬಿದ್ದಿದ್ದಾನೆ.

 

 

ಸಾರಾತೆಂಡೂಲ್ಕರ್‍ಅವರ ಫೋಣ್ ನಂಬರ್‍ಅನ್ನು ಹೇಗೋ ಪಡೆದುಕೊಂಡ ಆ ವ್ಯಕ್ತಿ ಪದೇಪದೇದೂರವಾಣಿಕರೆ ಮಾಡಿ, ಮದುವೆಯಾಗುವಂತೆ ಒತ್ತಾಯಿಸಿ ತೊಂದರೆಕೊಡುತ್ತಿದ್ದನಂತೆ.ಈತ ಸುಮಾರು 20 ಬಾರಿ ಲ್ಯಾಂಡ್‍ಲೈನ್ ನಂಬರ್‍ನಿಂದ ಫೋನ್ ಮಾಡಿ ಕಿರುಕುಳ ನೀಡಿದ್ದಾನಂತೆ.ತನ್ನನ್ನು ಮದುವೆಯಾಗಲೇಬೇಕು, ಇಲ್ಲದಿದ್ದರೆಕಿಡ್ನಾಪ್ ಮಾಡಿಯಾದರೂ ಸಹ ವಿವಾಹವಾಗುತ್ತೇನೆಎಂದು ಬೆದರಿಸಿದ್ದಾನೆ.

ವ್ಯಕ್ತಿಯಕಾಟವನ್ನು ತಾಳಲಾರದೆ ಸ್ವತಃ ಸಾರಾತೆಂಡೂಲ್ಕರ್ ಮುಂಬೈನ ಬಾಂದ್ರಾ ಪೊಲೀಸ್‍ಠಾಣೆಯಲ್ಲಿದೂರು ದಾಖಲಿಸಿದ್ದಾರೆ.ಆರೋಪಿಯ ಬೆನ್ನುಬಿದ್ದ ಪೊಲೀಸರುಆತನನ್ನು ಪಶ್ಚಿಮ ಬಂಗಾಳದ ಮಿದ್ನಪುರ್‍ಜಿಲ್ಲೆಯಲ್ಲಿ ಬಂದಿಸಿದ್ದಾರೆ.ಸದ್ಯಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆಆರೋಪಿ ದೇವಕುಮಾರ್ ಮೈಟಿ.

 

 

ಆರೋಪಿ ದೇವಕುಮಾರ್ ಮೈಟಿ ಬಹಳ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿಅದಕ್ಕಾಗಿಚಿಕಿತ್ಸೆ ಪಡೆಯುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.

ಕ್ರಿಕೆಟ್ ಪಂದ್ಯವೊಂದರ ಟಿವಿ ಪ್ರಸಾರದ ಸಮಯದಲ್ಲಿ ಸ್ಟೇಡಿಯಂನಲ್ಲಿ ಕುಳಿತಿದ್ದ ಸಾರಾತೆಂಡೂಲ್ಕರ್‍ಳನ್ನು ನೋಡಿಕೂಡಲೇ ಪ್ರೇಮಾಂಕುರವಾಯಿತು.ಆಕೆಯನ್ನು ಮದುವೆಯಾಗಲೇಬೇಕುಎಂದು ನಿಶ್ಚಯಮಾಡಿಕೊಂಡಿದ್ದೆಎಂದುಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೆಆತನನ್ನು ಬಂಧಿಸುವಾಗಅವರು ಬರೆದಡೈರಿಯನ್ನು ನೋಡಿದರೆಅದರಲ್ಲಿ ‘ಸಾರಾತೆಂಡೂಲ್ಕರ್ ನನ್ನ ಹೆಂಡತಿ’ ಎಂದು ಬರದುಕೊಂಡಿರುವುದು ಬೆಳಕಿಗೆ ಬಂದಿದೆ.

 

 

ಒಟ್ಟಿನಲ್ಲಿತಮ್ಮ ಪಾಡಿಗೆತಾವಿದ್ದರೂ ಹೆಣ್ಮಕ್ಕಳು, ಈ ತಿಕ್ಕಲು ಆಸಾಮಿಗಳಿಂದ ಕಾಟಅನುಭವಿಸಲೇಬೇಕಾಗುತ್ತದೆಅಲ್ಲವೆ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top