ಮಾಹಿತಿ

ಶಾಸ್ತ್ರದ ಪ್ರಕಾರ ಸ್ತ್ರೀಯರು ಈ ಐದು ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರ ಜೊತೆಗೂ ಅಂದರೆ ಬೇರೆ ಸ್ತ್ರೀಯರೊಂದಿಗೆ ಹಂಚಿಕೊಳ್ಳಬಾರದು.

ಶಾಸ್ತ್ರದ ಪ್ರಕಾರ ಸ್ತ್ರೀಯರು ಈ ಐದು ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರ ಜೊತೆಗೂ ಅಂದರೆ ಬೇರೆ ಸ್ತ್ರೀಯರೊಂದಿಗೆ ಹಂಚಿಕೊಳ್ಳಬಾರದು.

ಮದುವೆಯಾದ ಸ್ತ್ರೀಯರು ಈ ಐದು ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.ಸ್ತ್ರೀಯರು ತಮ್ಮ ಮನೆಯಲ್ಲಿ ಇದುವರೆಗೂ ಅವರ ವಸ್ತುಗಳನ್ನು ಅವರೇ ಉಪಯೋಗಿಸುತ್ತಾರೆ.

ಆದರೆ ತಮಗೆ ಮದುವೆಯಾದ ನಂತರ ಅವರ ಗಂಡನ ಮನೆಯಲ್ಲಿ ಅವರ ಅತ್ತೆ ಅಥವಾ ಅವರ ನಾದಿನಿಯ ಜೊತೆಗೆ ಕೆಲವು ವಸ್ತುಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಹಾಗೆ ಮಾಡಿದರೆ ಗಂಡ ಹೆಂಡತಿ ನಡುವೆ ಸಮಸ್ಯೆ ಉಂಟಾಗುತ್ತದೆ.
ಈಗ ನಾವು ಆ ಐದು ವಸ್ತುಗಳ ಯಾವುವು ಎಂದು ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…….

ಸಿಂಧೂರ .

ಸಿಂಧೂರ ಅಥವಾ ಕಂಕುಮ ಅದನ್ನು ಯಾರೊಂದಿಗೂ ಸಹ ಹಂಚಿಕೊಳ್ಳಬಾರದು. ಬೇರೆ ಸ್ತ್ರೀಯರಿಗೆ ತಮ್ಮ ಸಿಂಧೂರ ಅಥವಾ ಕುಂಕುಮವನ್ನು ಬಳಸುವುದಕ್ಕೆ ಅನುಮತಿ ನೀಡಬಾರದು. ಸಿಂಧೂರವನ್ನು ಏಕಾಂತವಾಗಿ ಇಟ್ಟುಕೊಳ್ಳಬೇಕು. ಯಾಕೆಂದರೆ ನಿಮ್ಮ ವೈವಾಹಿಕ ಜೀವನಕ್ಕೆ ದೃಷ್ಟಿ ಬೀಳದಿರುವುದಕ್ಕೆ, ಇದನ್ನು ಬೇರೆಯವರ ಬಳಿ ಹಂಚಿಕೊಂಡರೆ ಗಂಡ ಹೆಂಡತಿಯ ನಡುವೆ ಜಗಳ ಉಂಟಾಗುತ್ತದೆ.

 

 

ಕಾಡಿಗೆ.

ಇದನ್ನು ತಮ್ಮ ನಾದಿನಿಯರೊಡನೆ ಮತ್ತು ಸ್ನೇಹಿತರೊಡನೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಹೀಗೆ ಮಾಡಬಾರದಂತೆ ಒಂದು ವೇಳೆ ಹೀಗೆ ಮಾಡಿದರೆ ಗಂಡನಿಗೆ ನಿಮ್ಮ ಮೇಲೆ ಪ್ರೀತಿ ಕಡಿಮೆಯಾಗುತ್ತದೆ.

 

 

ಮೆಹಂದಿ.

ಮೆಹಂದಿಯನ್ನು ತುಂಬಾ ಜನ ಹೆಂಗಸರು ತಮ್ಮಷ್ಟಕ್ಕೆ ತಾವೇ ಮೆಹಂದಿಯನ್ನು ಬಿಟ್ಟುಕೊಳ್ಳುತ್ತಾರೆ. ಆದರೆ ಒಂದೇ ಮೆಹಂದಿಯನ್ನು ಬೇರೆ ಸ್ತ್ರೀಯರೊಂದಿಗೆ ಹಂಚಿಕೊಳ್ಳಬಾರದು. ಹೀಗೆ ಮಾಡಿದರೆ ಗಂಡ- ಹೆಂಡತಿಯ ಮಧ್ಯೆ ಪ್ರೀತಿ ಕಡಿಮೆಯಾಗುತ್ತದೆ.

 

 

ಹಣೆಯ ಬೊಟ್ಟು.

ಸ್ತ್ರೀಯರು ಅವರ ಹಣೆಯ ಬೊಟ್ಟನ್ನು ತೆಗೆದು ಸ್ನೇಹಿತರಿಗೆ, ಮಕ್ಕಳಿಗೆ ಇಡುತ್ತಿರುತ್ತಾರೆ. ಹೀಗೆ ಮಾಡಬಾರದು.

 

 

ಬಳೆಗಳು ಮತ್ತು ಕಾಲಿಗೆ ಹಾಕುವ ಕಾಲ್ಗೆಜ್ಜೆಗಳು.

ಬಳೆಗಳು, ಕಾಲಿಗೆ ಹಾಕುವ ಕಾಲ್ಗೆಜ್ಜೆಗಳನ್ನು ಸೌಭಾಗ್ಯವೆಂದು ಭಾವಿಸುತ್ತಾರೆ. ಎಂದಿಗೂ ಸಹ ಸ್ನೇಹಿತರೊಡನೆ ಮತ್ತು ಕುಟುಂಬಸ್ಥರೊಡನೆ ಇವುಗಳನ್ನು ಹಂಚಿಕೊಳ್ಳಬಾರದು. ಹೀಗೆ ಮಾಡಿದರೆ ಗಂಡ ಹೆಂಡತಿ ನಡುವೆ ಪ್ರೀತಿ ಕಡಿಮೆಯಾಗಿ, ಜಗಳ ವೈಮನಸ್ಯ ಉಂಟಾಗುತ್ತವೆ. ಎಂದು ಶಾಸ್ತ್ರ ಹೇಳುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top