ಮನೋರಂಜನೆ

ಜೀ ಕನ್ನಡ ವಾಹಿನಿಯಲ್ಲಿ ನಾಡಿನ ರೈತ ಬಾಂಧವರೊಂದಿಗೆ ‘ಸಂಕ್ರಾಂತಿ ಸಂಭ್ರಮ’.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಜೀ ಕನ್ನಡ ವಾಹಿನಿಯಲ್ಲಿ ನಾಡಿನ ರೈತ ಬಾಂಧವರೊಂದಿಗೆ ‘ಸಂಕ್ರಾಂತಿ ಸಂಭ್ರಮ’.

ಜೀ ವಾಹಿನಿಯಲ್ಲಿ ಸಂಕ್ರಾಂತಿ ಸಂಭ್ರಮ

ಮನೋರಂಜನಾ ವಾಹಿನಿಯಾದ ಜೀ ಕನ್ನಡ ಹೊಸ ವರ್ಷದ ಆರಂಭವನ್ನು ನಾಡಿನ ರೈತ ಬಾಂಧವರೊಂದಿಗೆ ವಿನೂತನವಾಗಿ ಆಚರಿಸಲು ನಿರ್ಧರಿಸಿದೆ. ರೈತರು ನಮ್ಮ ದೇಶದ ಬೆನ್ನೆಲುಬಷ್ಟೇ ಅಲ್ಲದೆ ನಮ್ಮ ಬಂಧುಗಳು ಕೂಡ ಎಂಬುದನ್ನು ಹೇಳಲು ಜೀ ಕನ್ನಡ ವಾಹಿನಿ ‘ಸಂಕ್ರಾಂತಿ ಸಂಭ್ರಮ’ ಎಂಬ ವಿಶೇಷ ಕಾರ್ಯಕ್ರಮವನ್ನು ಇದೇ ಜನವರಿ 11ರಂದು ಮಂಡ್ಯ ಜಿಲ್ಲೆಯ ಮಂಗಲ ಗ್ರಾಮದಲ್ಲಿ ಆಯೋಜಿಸಿದೆ.

 

 

ಈ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳ ತಂಡ ಮತ್ತು ರಿಯಾಲಿಟಿ ಶೋಗಳ ತಂಡಗಳು ಜೊತೆಯಾಗಿ ಭಾಗವಹಿಸಲಿವೆ. ಜೋಡಿಹಕ್ಕಿ, ಸುಬ್ಬಲಕ್ಷ್ಮಿ ಸಂಸಾರ, ಯಾರೇ ನೀ ಮೋಹಿನಿ, ವಿದ್ಯಾ ವಿನಾಯಕ, ನಾಗಿಣಿ ಮತ್ತು ಬ್ರಹ್ಮಗಂಟು ಧಾರಾವಾಹಿಗಳ ತಂಡಗಳ ಜೊತೆ ಸರಿಗಮಪ, ಕಾಮಿಡಿ ಕಿಲಾಡಿಗಳು ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ತಂಡಗಳು ಕೂಡ ಭಾಗವಹಿಸಲಿವೆ. ಈ ವಿಶೇಷ ಕಾರ್ಯಕ್ರಮವನ್ನು ಬಸವಟ್ಟಿ ಮತ್ತು ಕಾಮಿಡಿ ಕಿಲಾಡಿ ಖ್ಯಾತಿಯ ನಯನ ನಿರೂಪಣೆ ಮಾಡಲಿದ್ದಾರೆ .

ಈ ಸಂಭ್ರಮದ ಜೊತೆಗೆ ರಿಯಾಲಿಟಿ ಶೋ ತಂಡದಿಂದ ‘ಸಂಕ್ರಾಂತಿ ಗೋ ಉತ್ಸವ’ ಎಂಬ ವಿಶೇಷ ಕಾರ್ಯಕ್ರಮವನ್ನು ಎಲ್ಲಾ ರೈತರ ಕುಟುಂಬಗಳಿಗಾಗಿ ಜನವರಿ 14ರ ಭಾನುವಾರ ಹಮ್ಮಿಕೊಳ್ಳಲಾಗಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದ ಸಡಗರದಲ್ಲಿ ಹಸುಗಳ ಅಲಂಕಾರ ಸ್ಪರ್ಧೆ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಸ್ಪರ್ಧೆಯಲ್ಲಿ ರೈತ ಕುಟುಂಬದವರು ತಾವು ಸಾಕಿರುವ ಹಸುವನ್ನು ವಿಶೇಷವಾಗಿ ಅಲಂಕಾರ ಮಾಡಿಕೊಂಡು ತರಬೇಕು. ಈ ಸ್ಪರ್ಧೆಯು ಹಾಸನ, ಚಾಮರಾಜ ನಗರ, ಶಿವಮೊಗ್ಗ ಮತ್ತು ತುಮಕೂರಿನ ಪ್ರಮುಖ ಹಳ್ಳಿಗಳಲ್ಲಿ ನಡೆಯಲಿದೆ. ಈ ಸ್ಪರ್ಧೆಯ ಮೂಲಕ ಗೋ ಮಾತೆಗೆ ನಮನ ಸಲ್ಲಿಸುವುದು ಜೀ ಕನ್ನಡದ ಮುಖ್ಯ ಉದ್ದೇಶವಾಗಿದೆ.

 

 

ಹಳ್ಳಿಯ ಸೊಗಡಿನಲ್ಲಿ ಕಾರ್ಯಕ್ರಮ ನಡೆಸುವ ಖುಷಿಯೇ ಬೇರೆ. ಅಲ್ಲಿನ ರೈತಾಪಿ ಜನರನ್ನಷ್ಟೇ ಅಲ್ಲದೆ ಗ್ರಾಮೀಣ ಸಂಸ್ಕøತಿ, ಸಂಪ್ರದಾಯ, ಪ್ರಕೃತಿ, ಹಬ್ಬದ ವಾತಾವರಣ ಇವೆಲ್ಲವನ್ನೂ ಕಿರುತೆರೆ ವೀಕ್ಷಕರಿಗೆ ಪರಿಚಯಿಸುವುದು ಜೀ ಕನ್ನಡದ ಉದ್ದೇಶ ಕೂಡ ಎಂದು ಜೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಹೇಳಿದ್ದಾರೆ. ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಇದೇ ಜನವರಿ 14 ಸಂಜೆ 5ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top