ಸಿನಿಮಾ

ಖಾಕಿ ಖದರ್ ನಲ್ಲಿ ಮಿಂಚಿದ ಪ್ರಿಯಾಂಕಾ ಉಪೇಂದ್ರ. ‘2nd ಹಾಫ್’ ಚಿತ್ರದ ಟ್ರೈಲರ್ ಬಿಡುಗಡೆ.

ಖಾಕಿ ಖದರ್ ನಲ್ಲಿ ಮಿಂಚಿದ ಪ್ರಿಯಾಂಕಾ ಉಪೇಂದ್ರ.
‘2nd ಹಾಫ್’ ಚಿತ್ರದ ಟ್ರೈಲರ್ ಬಿಡುಗಡೆ.

 

ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಚಿತ್ರನಟಿ ಪ್ರಿಯಾಂಕ ರವರು ನಟಿಸಿರುವ ‘2nd ಹಾಫ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು. ಇನ್ನು ಕೆಲವೇ ದಿನದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಮೊದಲು ‘ಮಮ್ಮಿ ಸೇವ್ ಮಿ’ ಅಂತಹ ಚಿತ್ರ ನೀಡಿದ್ದ ಪ್ರಿಯಾಂಕ ರವರು ‘ 2nd ಹಾಫ್’ ಚಿತ್ರದಲ್ಲಿ ಪೊಲೀಸ ಪೇದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಮಹಿಳಾ ಪ್ರಧಾನ ಪಾತ್ರವಾಗಿರುವ 2nd ಹಾಫ್ ಚಿತ್ರದಲ್ಲಿ ಪ್ರಿಯಾಂಕ ಅವರು ಪೊಲೀಸ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಯುವ ಮಹತ್ವದ ಕೆಲಸದಲ್ಲಿ ತೊಡಗಿರುವ ಮಹಿಳಾ ಪೊಲೀಸ ಪೇದೆಯ ಪಾತ್ರವಿದು. ಖಾಕಿ ಖದರ್ ನಲ್ಲಿ ಮಿಂಚಿರುವ ಪ್ರಿಯಾಂಕಾ ಯಾವ ರೀತಿ ಮೋದಿ ಮಾಡಲಿದ್ದಾರೆ ಎಂದು ಸಿನಿಮಾ ರಿಲೀಸ್ ಆದ್ಮೇಲೆ ಗೊತ್ತಾಗುತ್ತೆ.

ಇದೊಂದು ಉತ್ತಮ ಕಥೆಯಿರುವ ಚಿತ್ರವಾಗಿದೆ ಎಂದು ಸಿನಿಮಾದ ನಿರ್ದೇಶಕ ಯೋಗಿ ತಿಳಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ನಾಗೇಶ್ ಕುಮಾರ್ ನಿರ್ಮಾಣ, ಶಿವಕುಮಾರ್ ಛಾಯಾಗ್ರಹಣ ಹಾಗು ಚೇತನ್ ಎಲ್ ಜೆ ಸಂಗೀತ ಈ ಚಿತ್ರಕ್ಕಿದೆ.

 

ಉಪೇಂದ್ರ ಅವರ ಅಣ್ಣನ ಮಗನಾಗಿರುವ ನಿರಂಜನ್ ಈ ಚಿತ್ರದ ಮೂಲಖ ಸ್ಯಾಂಡಲ್ ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top