ಬಿಗ್ ಬಾಸ್

ಬಿಗ್ ಬಾಸ್ ಮುಗಿದ ಮೇಲೆ ಚಂದನ್ ಶೆಟ್ಟಿ ಮದುವೆ ಅಂತೇ !

ನಗುನಗುತ್ತಾ ‘ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ‘ ಎಂದು ಹಾಡು ಗುನುಗುತ್ತಾ ಬಿಗ್ ಬಾಸ್ ಮನೆಗೆ ಬಂದ ಚಂದನ್ ಶೆಟ್ಟಿ ತಂದೆಯವರು ಬರ್ತಾ ಇದ್ದ ಹಾಗೆ ‘ ಏನ್ ಶೆಟ್ರೇ ಹೆಂಗಿದ್ದೀರಾ , ಬರ್ತಾ ಇದ್ದ ಹಾಗೆ ಮದುವೆ ಮಾಡ್ತೀವಿ ಗಾಬರಿ ಆಗ್ಬೇಡಿ’ ಅಂತ ಕಾಲೆಳೆದರು .

 

 

ಮೊದಲಿನಿಂದಲೂ ಶ್ರುತಿ ಜೊತೆಗಿನ ಮದುವೆ ಮಾತು ಕಥೆಗಳು ಬಿಗ್ ಬಾಸ್ ಮನೆಯಲ್ಲಿ ಜೋರಾಗಿ ಸೌಂಡ್ ಮಾಡುತ್ತಿದ್ದು , ಮದುವೆ ಪ್ರಸ್ತಾಪಗಳು ಆಗಾಗ ಬಂದು ಹೋಗುತ್ತಾ ಇರುತ್ತವೆ ಹೀಗಿರುವಾಗ ಮೊದಲಿಗೆ ಶ್ರುತಿ ಮೇಲೆ ಲವ್ ಅಂದಿದ್ದ ಚಂದನ್ ನಂತ್ರ ತಮ್ಮ ಸಂಬಂಧಿಯೊಬ್ಬರನ್ನು ಮದುವೆ ಆಗ್ತೀನಿ ಅಂದಿದ್ರು .

 

 

ಆದರು ಈ ಎಲ್ಲ ಲವ್ವಿ ಡವ್ವಿ ಗಳನ್ನೂ ನೋಡುತ್ತಿರುವ ಚಂದನ್ ಶೆಟ್ಟಿ ತಂದೆ ಪರಮೇಶ್ವರ್ ರವರು ಮಗನಿಗೆ ಆದಷ್ಟು ಬೇಗ ಮದುವೆ ಮಾಡಿ ಮುಗಿಸುವ ನಿರ್ಧಾರಕ್ಕೆ ಬಂದಂತಿದೆ , ತಂದೆ ಮಗ ಇಬ್ಬರು ಮಚ್ಚ ಮಚ್ಚ ಎಂದು ಕರೆದುಕೊಂಡು ಬಹಳ ಅನ್ಯೋನ್ಯವಾಗಿರುವುದು ಮಾತ್ರ ಬಹಳ ಸತ್ಯ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top