ತಿಂಡಿ ತೀರ್ಥ

ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ರುಚಿ ರುಚಿಯಾದ ಚಿಲ್ಲಿ ಚಿಕನ್

ಚಿಲ್ಲಿ ಚಿಕನ್ :

 

ಬೇಕಾಗುವ ಸಾಮಗ್ರಿಗಳು :

 

1 /4 ಕೆಜಿ ಚಿಕನ್
ಹಸಿ ಮೆಣಸಿನ ಕಾಯಿ 6
ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದಿನ ಸೊಪ್ಪು ಸ್ವಲ್ಪ

ಗರಂ ಮಸಾಲಾ ಪುಡಿ 4 / 3 ಚಮಚ
ಅರಿಶಿಣ ಪುಡಿ 1 /4 ಚಮಚ
ಎಣ್ಣೆ
ಚಕ್ಕೆ 2 ಇಂಚ್
ಲವಂಗ 4

ಶುಂಠಿ 1 1 / 2 ಇಂಚ್
ಬೆಳ್ಳುಳ್ಳಿ ಒಂದು
ನಿಂಬೆಹಣ್ಣು 1
ಕರಿಬೇವಿನ ಸೊಪ್ಪು
ಒಣ ಮೆಂತ್ಯ ಸೊಪ್ಪು ಸ್ವಲ್ಪ

ಕಾಳು ಮೆಣಸಿನ ಪುಡಿ 1 ಚಮಚ

 

ಮಾಡುವ ವಿಧಾನ :

 

ಮೊದಲು ಮಿಕ್ಸಿಗೆ ಚಕ್ಕೆ,ಲವಂಗ ,ಶುಂಠಿ,ಬೆಳ್ಳುಳ್ಳಿ ,ಹಸಿ ಮೆಣಸಿನ ಕಾಯಿ,ಕೊತ್ತಂಬರಿ ಸೊಪ್ಪು ಮತ್ತು ಪುದಿನ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ ,ನಂತರ ಒಣ ಮೆಂತ್ಯ ಸೊಪ್ಪು ಸ್ವಲ್ಪ ಬಿಸಿಮಾಡಿಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ .

ಅನಂತರ ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ

ಆ ಸಮಯದಲ್ಲಿ ಇನ್ನೊಂದು ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಅದು ಸ್ವಲ್ಪ ಬಿಸಿಯಾದ ಮೇಲೆ ಅದಕ್ಕೆ ಚಿಕನ್,ರುಚಿಗೆ ಬೇಕಾದ ಉಪ್ಪು ,ಅರಿಶಿಣ ಮತ್ತು ಸ್ವಲ್ಪ ನೀರನ್ನು ಹಾಕಿ ಬೇಯಲು ಬಿಡಿ .

ಆಗಲೇ ಬಾಡಲು ಇಟ್ಟಿದ ಈರುಳ್ಳಿಗೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಸ್ವಲ್ಪ ಸಮಯ ಬಿಸಿಯಾಗಲು ಬಿಡಿ ನಂತರ ಇದಕ್ಕೆ ಬೇಯಿಸಿಕೊಂಡ ಚಿಕನ್ ,ಗರಂ ಮಸಾಲಾ ಪುಡಿ ,ಕರಿಬೇವಿನ ಸೊಪ್ಪು ,ಸ್ವಲ್ಪ ಒಣ ಮೆಂತ್ಯ ಸೊಪ್ಪು ಮತ್ತು ರುಚಿಗೆ ಬೇಕಾದ ಉಪ್ಪನ್ನು ಸೇರಿಸಿ ಚೆನ್ನಾಗಿ ಸ್ವಲ್ಪ ಸಮಯ ಬೇಯಲು ಬಿಡಿ.

ಸುಲಭವಾಗಿ ಚಿಲ್ಲಿ ಚಿಕನ್ ಮಾಡಿಕೊಂಡು ಆಸ್ವಾದಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top