ರಾಜಕೀಯ

ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದ ಸಿಎಂ ಸಿದ್ದರಾಮಯ್ಯ. ವಾರದಲ್ಲಿ ಐದೇ ದಿನ ಕೆಲಸ, ವೇತನ ಹೆಚ್ಚಳ.

ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದ ಸಿಎಂ ಸಿದ್ದರಾಮಯ್ಯ.
ವಾರದಲ್ಲಿ ಐದೇ ದಿನ ಕೆಲಸ, ವೇತನ ಹೆಚ್ಚಳ

 

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಂದಿನ ತಿಂಗಳು ಬಜೆಟ್ ಮಂಡಿಸುತ್ತಿದ್ದು ಎಲ್ಲಾ ವರ್ಗದವರಿಗೂ ಅನುಕೂಲತೆ ಕಲ್ಪಿಸಲು ಮುಂದಾಗಿದ್ದಾರೆ. ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗ ನೀಡಿರುವಂತಹ ವರದಿಯನ್ನು ಸರ್ಕಾರ ಜಾರಿಗೊಳಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿ ಮುಗಿಯುವದರೊಳಗೆ ಈ ವರದಿಯನ್ನು ಅನುಷ್ಠಾನ ಮಾಡಲು ನಿರ್ಧರಿಸಿದ್ದಾರೆ.

 

 

ಇದರಂತೆ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ನೀಡಲಿರುವ ರಾಜ್ಯ ಸರ್ಕಾರ, ವೇತನ ಏರಿಕೆ, ವಾರದಲ್ಲಿ 5 ದಿನ ಕೆಲಸ ಮೊದಲಾದ ಉಡುಗೊರೆಯನ್ನು ರಾಜ್ಯ ಸರ್ಕಾರಿ ನೌಕರಿಗೆ ನೀಡುವ ಸಾಧ್ಯತೆ ಇದೆ. 6 ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲು ಸಿ.ಎಂ. ತೀರ್ಮಾನಿಸಿದ್ದಾರೆ.

 

 

ಸರ್ಕಾರಿ ನೌಕರರಿಗೆ ಹೆಚ್ಚಿನ ಭತ್ಯೆ ಭಾಗ್ಯ ನೀಡಲಿರುವ ರಾಜ್ಯ ಸರ್ಕಾರ ಮೂಲ ಸಂಬಳದ ಪ್ರತಿಶತ 25.25ರಷ್ಟಿದ್ದ ತುಟ್ಟಿಭತ್ಯೆಯನ್ನು ಪ್ರತಿಶತ 28.75ಕ್ಕೆ ಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಪ್ರಸ್ತುತ ಚಾಲ್ತಿಯಲ್ಲಿ ಇರುವ ತುಟ್ಟಿಭತ್ಯೆಯಲ್ಲಿ ಶೇ.3.5ರಷ್ಟು ಏರಿಕೆಯನ್ನು ಮಾಡಿದಂತಾಗಿದೆ.

ರಾಜ್ಯದಲ್ಲಿರುವ ಸುಮಾರು 6 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರಿಗೆ ಸರ್ಕಾರದ ಈ ನಿರ್ಧಾರದಿಂದ ಸಂತತ ಮನೆಮಾಡಿದೆ ಎನ್ನಲಾಗಿದೆ. ಮುಂದಿನ ತಿಂಗಳು ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೆ ಸಂಧರ್ಭದಲ್ಲಿ ಆಯೋಗದ ನೀಡಿರುವ ವರದಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top