ತಿಂಡಿ ತೀರ್ಥ

ನೋಡಿದ್ರೆ ಸಾಕು ಬಾಯಲ್ಲಿ ನೀರು ಬರೋ ಖರ್ಜುರದ ಹಲ್ವಾ ಮಾಡುವ ವಿಧಾನ ತಿಳಿದುಕೊಳ್ಳಿ.

ನೋಡಿದ್ರೆ ಸಾಕು ಬಾಯಲ್ಲಿ ನೀರು ಬರೋ ಖರ್ಜುರದ ಹಲ್ವಾ ಮಾಡುವ ವಿಧಾನ ತಿಳಿದುಕೊಳ್ಳಿ.

ಖರ್ಜುರದ ಹಲ್ವಾ ಮಾಡಲು ಬೇಕಾದ ಪದಾರ್ಥಗಳು:
200 ಗ್ರಾಂ ಖರ್ಜುರ (ಬೀಜವಿಲ್ಲದ, ಸಣ್ಣಗೆ ಕತ್ತರಿಸಿದ)
1 ಕಪ್ ಹಾಲು
1 1/4 ಕಪ್ ಪುಡಿ ಸಕ್ಕರೆ
1/4 ಕಪ್ ತುಪ್ಪ
100 ಗ್ರಾಂ ಗೋಡಂಬಿ ಬೀಜಗಳು
1/4 ಚಮಚ ಯಾಲಕ್ಕಿ ಪುಡಿ

 

ಖರ್ಜುರದ ಹಲ್ವಾ ಮಾಡುವ ವಿಧಾನ:
*ಹಾಲು ಮತ್ತು ಖರ್ಜುರ ಒಂದು ಪಾತ್ರೆಯಲ್ಲಿ ಹಾಕಿ ಕುದಿಸಿ. ಶಾಖ ಕಡಿಮೆ ಇಡಿ.

*ಒಂದು ಪ್ರತ್ಯೇಕ ಪಾತ್ರೆಯಲ್ಲಿ ಗೋಡಂಬಿ ಹುರಿದು ಪಕ್ಕೆ ಇಟ್ಟುಕೊಳ್ಳಿ.

*ಕುದಿಯುತ್ತಿರುವ ಹಾಲು ಹಾಗು ಖರ್ಜುರದ ಮಿಶ್ರಣ ಗಟ್ಟಿಯಾದಾಗ ಸಕ್ಕರೆ, ತುಪ್ಪ ಹಾಗು ಗೋಡಂಬಿ ಹಾಕಿಕೊಳ್ಳಿ.

*ನಂತರ ಈ ಮಿಶ್ರಣಕ್ಕೆ ಏಲಕ್ಕಿ ಪಿಡಿ ಸೇರಿಸಿ ಚೆನ್ನಾಗಿ ಕಲಸಿ. ಒಂದು ತಾಟಿನಲ್ಲಿ ತೆಳುವಾಗಿ ತುಪ್ಪವನ್ನು ಹರಡಿ ಅದರ ಮೇಲೆ ಕಾರ್ಜುರದ ಹಲ್ವಾ ಮಿಶ್ರಣವನ್ನು ಹಾಕಿ.

*ಮಿಶ್ರಣವು ತಂಪಾದಾಗ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

 

 

 

ಖರ್ಜುರದ ಹಲ್ವಾ ಅತ್ಯಂತ ಪೋಷಕಾಂಶ ಭರಿತವಾಗಿದ್ದು ಈ ಕೆಳಗಿನ ಪೋಷಕಾಂಶಗಳನ್ನು ಹೊಂದಿದೆ.:
ಕ್ಯಾಲ್ಸಿಯಂ: 76.7 ಮಿಗ್ರಾಂ
ಮೆಗ್ನೀಸಿಯಮ್: 74.8 ಮಿಗ್ರಾಂ
ಪಾಸ್ಪರಸ್: 148.5 ಮಿಗ್ರಾಂ

ನೀವು ಮನೆಯಲ್ಲಿ ಈ ಖರ್ಜುರದ ಹಲ್ವಾ ಮಾಡಿ ಸವಿಯಿರಿ, ನಿಮಗೆ ಈ ಸಿಹಿ ತಿನಿಸು ಇಷ್ಟ ಆಗಿದ್ದರೆ ಶೇರ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top