ವಿಶೇಷ

ಸಾಯುವ ಸ್ಥಿತಿಯಲ್ಲಿದ್ದ ವೃದ್ಧನ ಬದುಕನ್ನು ಬದಲಾಯಿಸಿದ್ದು ಫೇಸ್ಬುಕ್. ಹೇಗೆ ಅಂತೀರಾ? ಇಲ್ಲಿ ಓದಿ.

ಸಾಯುವ ಸ್ಥಿತಿಯಲ್ಲಿದ್ದ ವೃದ್ಧನ ಬದುಕನ್ನು ಬದಲಾಯಿಸಿದ್ದು ಫೇಸ್ಬುಕ್. ಹೇಗೆ ಅಂತೀರಾ? ಇಲ್ಲಿ ಓದಿ.

ಸಾಮಾಜಿಕ ಮಾಧ್ಯಮವು ನಮ್ಮ ನಮ್ಮ ಸಮಾಜದಲ್ಲಿ ಅತೀ ಮುಖ್ಯವಾದ ಭಾಗವಾಗಿ ಆವರಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಜನರು ಅಂತರ್ಜಾಲದಲ್ಲಿ ಸಂವಹನ ನಡೆಸಲು ಮಿಲಿಯನ್ಗಟ್ಟಲೆ ಅಪ್ಲಿಕೇಶನ್ಗಳು, ವೆಬ್ಸೈಟ್ಗಳು ಮತ್ತು ಇತರ ಪ್ಲ್ಯಾಟ್ಫಾರ್ಮ್ಗಳು ಲಭ್ಯವಿವೆ. ಇದು ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಾದ ನಹುದೊಡ್ಡ ಬೆಳವಣಿಗೆಯಾಗಿದೆ. ಸಾಮಾಜಿಕ ಮಾಧ್ಯಮವು ಜಗತ್ತಿನಾದ್ಯಂತ ಇರುವ ಜನರೊಂದಿಗೆ ಸಂಪರ್ಕ ನಡೆಸಲು ನಮಗೆ ಅವಕಾಶ ಕಲ್ಪಿಸುತ್ತದೆ.ಉದಾಹರಣೆಗೆ, ಫೇಸ್ಬುಕ್ ಅಥವಾ ಟ್ವಿಟರ್ನಂತಹ ವೇದಿಕೆಯಲ್ಲಿ ಸಂದೇಶವನ್ನು ರಚಿಸಬಹುದು ಮತ್ತು ಅದನ್ನು ಇಡೀ ವಿಶ್ವದಲ್ಲಿ ಯಾರೊಂದಿಗೆ ಬೇಕಾದರೂ ಹಂಚಿಕೊಳ್ಳಬಹುದು.

 

 

ಫೇಸ್ ಬುಕ್ ನ ಸ್ಟೇಟಸ್ ಅನ್ನು ನವೀಕರಿಸಲು ಅಥವಾ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಹಾಕಲು ಅಥವಾ ಟ್ವಿಟರ್ ನಲ್ಲಿ 280 ಅಕ್ಷರಗಳಲ್ಲಿ ಸ್ಟೇಟಸ್ ಹಾಕುವುದರಲ್ಲಿ ಬಹುತೇಕ ಮಂದಿ ತಮ್ಮ ಸಮಯವನ್ನು ಅಂತರ್ಜಾಲದಲ್ಲಿ ಕಳೆಯುತ್ತಾರೆ.
“ನಮ್ಮ ರಾಜಮಹೇಂದ್ರವರ್ಮನ್” ಎಂಬ ಫೇಸ್ಬುಕ್ ಪೇಜ್ ನ ನಿರ್ವಾಹಕ ಆದಿತ್ಯ ವೈಭವ್ ಅವರು ಆಂಧ್ರಪ್ರದೇಶದ ರಾಜಮಹೇಂದ್ರವರ್ಮನ್ ಎಂಬ ನಗರದಲ್ಲಿ ಈ ರೀತಿಯಾಗಿ ಪೋಸ್ಟ್ ಮಾಡಿದ್ದರು “ನನ್ನ ತಂದೆ ಶ್ರೀ ರಾಜಗೋಪಾಲ್ ಅವರು 60 ವರ್ಷ ಮನೆಯಿಲ್ಲದೆ ಬಳಲುತ್ತಿದ್ದ ಸಿಂಹಾಚಲನ್ ಎಂಬ 60 ವರ್ಷ ವಯಸ್ಸಿನ ವೃದ್ಧರನ್ನು ನೋಡಿದ್ದಾರೆ. ಸ್ಥಳೀಯರ ಪ್ರಕಾರ, ಸಿಂಹಾಚಲನ್ ಎಂಬ ವ್ಯಕ್ತಿ ಐದು ವರ್ಷಗಳಿಂದ ಪುಟ್ ಪಾತ್ ನಲ್ಲಿ ವಾಸಿಸುತ್ತಿದ್ದಾರೆ. ”

 

 

 

ಅವನ ಕಾಲು ತುಂಬಾ ಕ್ರೂರವಾಗಿ ಗಾಯಗೊಂಡಿದ್ದು, ಸಿಂಹಾಚಲನ್ ತನ್ನ ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲಾಗುತ್ತಿಲ್ಲ. ರಾಜಾ ಗೋಪಾಲ್ ಅವರು ತಮ್ಮ ದಿನನಿತ್ಯದ ಕೆಲಸದೊಂದಿಗೆ ಸಿಂಹಾಚಲನ್ ಗೆ ಸಹಾಯ ಮಾಡಲು ನರ್ಸ್ ಒಬ್ಬರನ್ನು ನೇಮಕ ಮಾಡಿದರು. ಫೇಸ್ಬುಕ್ ಪೇಜ್ ನ ನಿರ್ವಾಹಕ ಆದಿತ್ಯ ವೈಭವ್ ತಮ್ಮ ಪುಟದಲ್ಲಿ “ನಾವು ಕೆಲವು ರಾಜಕೀಯ ನಾಯಕರನ್ನು ಸಂಪರ್ಕಿಸಿ ಅವರ ಬಳಿ ಸಿಂಹಾಚಲನ್ ಅವರಿಗೆ ಸಹಾಯ ಮಾಡಬೇಕೆಂದು ಕೇಳಿಕೊಂಡೆವು ಆದರೆ ಅದು ಪ್ರಯೋಜನವಾಗಲಿಲ್ಲ, ಆ ವೃದ್ಧನಿಗೆ ಸಹಾಯ ಮಾಡಲು ನಮ್ಮ ಫೇಸ್ಬುಕ್ ಪುಟ “ನಮ್ಮ ರಾಜಮಹೇಂದ್ರವರ್ಮನ್” ನಿರ್ಧರಿಸಿದ್ದು, ಸಹಾಯಕ್ಕಾಗಿ ಸಂಪರ್ಕವನ್ನು ಪಡೆಯಲು ನಾವು ಸಂದೇಶಗಳನ್ನು ಸ್ವೀಕರಿಸಲಾರಂಭಿಸಿದ್ದೇವೆ ” ಎಂದು ಪೋಸ್ಟ್ ಮಾಡಿದ್ದರು. ನಂತರ, ಶ್ರೀ ಕಂಡುಲಾ ದುರ್ಗೇಶ್ ಮತ್ತು ‘ಶ್ರವಂತಿ ವಾಲಂಟರಿ ಆರ್ಗನೈಸೇಷನ್’ ಎಂದು ಕರೆಯಲ್ಪಡುವ ಅವರ ಚಾರಿಟಿ ಸಂಘಟನೆಯ ಸ್ವಯಂಸೇವಕರು ಜೊತೆಗೂಡಿ ಸಿಂಹಾಚಲನ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿದರು.ಸಿಂಹಾಚಲನ್ ಪ್ರಸಕ್ತ ಚಿಕಿತ್ಸೆ ಮತ್ತು ಔಷಧಿಗಳಲ್ಲಿದ್ದಾರೆ ಮತ್ತು ಗಾಯದಿಂದ ಚೇತರಿಸಿಕೊಂಡಿದ್ದಾರೆ.

 

 

ಸಾಮಾಜಿಕ ಮಾಧ್ಯಮದ ಈ ಕಾರ್ಯ ಪ್ರಶಂಸನೀಯವಾದದ್ದು.ದೇಶದ ವಿವಿಧ ರಸ್ತೆಗಳಲ್ಲಿ ಅನೇಕ ಸಿಂಹಾಚಲನ್ ತರದವರು ಇದ್ದಾರೆ ನಾವೆಲ್ಲರೂ ಸಾಮೂಹಿಕ ಶ್ರಮವನ್ನು ಮಾಡೋಣ ಮತ್ತು ನಾವು ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top