ರಾಜಕೀಯ

ವಿಶ್ವಸಂಸ್ಥೆಯಲ್ಲಿ ಹಿಂದಿ ಮಾನ್ಯತೆಗಾಗಿ ಕೇಂದ್ರ ಖರ್ಚು ಮಾಡಲಿರುವ ಹಣ ಎಷ್ಟು ಗೊತ್ತಾ. ಶಶಿ ತರೂರ್ ಇದರ ವಿರುದ್ಧ ಹೇಳಿದ್ದೇನು

ವಿಶ್ವಸಂಸ್ಥೆಯಲ್ಲಿ ಹಿಂದಿ ಮಾನ್ಯತೆಗಾಗಿ ಕೇಂದ್ರ ಖರ್ಚು ಮಾಡಲಿರುವ ಹಣ ಎಷ್ಟು ಗೊತ್ತಾ.
ಶಶಿ ತರೂರ್ ಇದರ ವಿರುದ್ಧ ಹೇಳಿದ್ದೇನು

ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಸಂಬಂಧ ಲೋಕಸಭೆಯಲ್ಲಿ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಸಂಸದ, ಮಾಜಿ ಸಚಿವ ಶಶಿ ತರೂರ್ ನಡುವೆ ಮಾತಿನ ಚಕಮಕಿ ನಡೆದಿದೆ.

 

 

ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಲು ಹೊರಟಿರುವ ಸುಷ್ಮಾ ಸ್ವರಾಜ್. ವಿಶ್ವಸಂಸ್ಥೆಯಲ್ಲಿ 193 ಸದಸ್ಯ ರಾಷ್ಟ್ರಗಳ ಪೈಕಿ 129 ಸದಸ್ಯ ರಾಷ್ಟ್ರಗಳು ಹಿಂದಿ ಭಾಷೆಯನ್ನು ಅಧಿಕೃತ ಭಾಷೆಯ ಮಾನ್ಯತೆಗೆ ಬೆಂಬಲವನ್ನು ನೀಡಬೇಕು. ಹಿಂದಿಯನ್ನು ಅಧಿಕೃತ ಭಾಷೆಯಾಗಿಸಲು ಖರ್ಚಾಗುವ ಹಣವನ್ನು ಈ ದೇಶಗಳೇ ಹಣವನ್ನು ಭರಿಸಬೇಕು ಎಂಬುದು ವಿಶ್ವಸಂಸ್ಥೆಯ ನಿಯಮವಾಗಿದೆ ಎಂದು ಸುಷ್ಮಾ ಮಾಹಿತಿ ನೀಡಿದರು.

ಈ ವಿಡಿಯೋ ನೋಡಿ:

ಬಡರಾಷ್ಟ್ರಗಳು ದುಬಾರಿ ವೆಚ್ಚದ ಸಲುವಾಗಿ ಬೆಂಬಲ ನೀಡುವುದಕ್ಕೆ ಹಿಂದೆ ಸರಿಯಬಹುದು. ಈ ಸಲುವಾಗಿ ಹಿಂದಿ ಭಾಷೆಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಒಂದು ಎಂಬ ಮಾನ್ಯತೆ ಪಡೆದುಕೊಳ್ಳುವುದಕ್ಕೆ ₹400 ಕೋಟಿ ವೆಚ್ಚವಾದರೂ ಸರಿ ಕೇಂದ್ರ ಸರ್ಕಾರವು ಈ ಹಣವನ್ನು ಭರಿಸಲು ಸಿದ್ಧವಾಗಿದೆ ಎಂದು ಸುಷ್ಮಾ ಸ್ವರಾಜ ಹೇಳಿದರು.

 

 

ಇದಕ್ಕೆ ಪ್ರತಿಕ್ರಯಿಸಿದ ಶಶಿ ತರೂರ್ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಅದನ್ನೆಕ್ಕೆ ವಿಶ್ವಸಂಸ್ಥೆಯ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂದು ಹೇಳಿದ್ದಾರೆ. ಒಂದು ವೇಳೆ ಹಿಂದಿ ಭಾಷೆಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆ ಮಾಡಿದರೆ ತಮಿಳುನಾಡಿನ, ಬಂಗಾಳದ ವ್ಯಕ್ತಿ ಪ್ರಧಾನಿಯಾದರೆ ಅವಾಗ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಹಿಂದಿ ಭಾಷೆ ಮಾತನಾಡುವವರಿಗೆ ಹಿಂದಿಯ ಮೇಲೆ ಇರುವ ಗೌರವ ನನಗೆ ಅರ್ಥವಾಗುತ್ತದೆ. ಆದರೆ ಹಿಂದಿ ಭಾಷೆ ಮಾತನಾಡದವರಿಗೂ ಸಹ ಭಾರತೀಯರೆಂಬ ಹೆಮ್ಮೆ ನನಗೆ ಇದೆ ಎಂದು ಶಶಿ ತರೂರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top