ಸಿನಿಮಾ

ಹಂಬಲ್ ನಿರ್ಮಾಪಕನ ಕನ್ನಡ ದ್ರೋಹ

ಹಂಬಲ್ ನಿರ್ಮಾಪಕನ ಕನ್ನಡ ದ್ರೋಹ

ಕನ್ನಡ ಚಿತ್ರ ‘ಹಂಬಲ್ ಪೊಲಿಟಿಷಿಯನ್ ನೊಗರಾಜ್’ ಚಿತ್ರ ಕನ್ನಡ ಪತ್ರಿಕೆ ವರದಿಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡ ಸಿನಿಮಾಗಳನ್ನು ನಿರ್ಮಿಸಿ ಅದರ ಮೂಲಕ ದುಡ್ಡು ಮಾಡೋ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ. ಇವರು ನಿರ್ಮಿಸಿರುವ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಎನ್ನುವ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ಸೆಲೆಬ್ರಿಟಿ ಶೋ ಹೆಸರಿನಲ್ಲಿ ನೆನ್ನೆ ರಾತ್ರಿಯೇ ಇಂಗ್ಲಿಷ್ ಪತ್ರಿಕೆಯ ವರದಿಗಾರರಿಗೆ ಮಾತ್ರ ‘ಸ್ಪೆಷಲ್ ಶೋ ಏರ್ಪಡಿಸಿದ್ದಾರೆ. ಇದರಿಂದ ಕನ್ನಡದ ಪತ್ರಕರ್ತರು ಬೇಸರಗೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಕನ್ನಡ ಚಿತ್ರ ನಿರ್ಮಿಸಿ ಇಂಗ್ಲಿಷ್ ಪತ್ರಿಕೆ ಪತ್ರಕರ್ತರಿಗೆ ಆಹ್ವಾನ ನೀಡಿ ಕನ್ನಡ ಪತ್ರಕರ್ತರಿಗೆ ಆಹ್ವಾನ ನೀಡದಿರುವ ಈ ಚಿತ್ರದವರ ಕ್ರಮ ನಿಜಕ್ಕೂ ಕನ್ನಡಿಗರಿಗೆ ಮಾಡುವ ದ್ರೋಹ ಎಂದರೆ ಅತಿಶಯೋಕ್ತಿ ಆಗಲಾರದು.

 

 

ಸಿನಿಮಾ ನೋಡಿದವರ ಅಭಿಪ್ರಾಯ ಕೇಳಿದಾಗ. ನೆನ್ನೆ ಸಿನಿಮಾ ನೋಡಿದವರ ಪ್ರಕಾರ ಈ ಸಿನಿಮಾದಲ್ಲಿ ಶುದ್ಧ ಕನ್ನಡಕ್ಕಿಂತಾ ಬರೀ ಇಂಗ್ಲೀಷ ಭಾಷೆ ಬಳಸಲಾಗಿದೆಯಂತೆ. ಒಂದು ವೇಳೆ ಈ ಸಿನಿಮ ಗೆದ್ದರೆ ಕನ್ನಡ ಭಾಷೆಗೆ ನಿಜಕ್ಕೂ ಮಾರಕ ಎನ್ನುವುದು ನೆನ್ನೆ ಸಿನಿಮಾ ನೋಡಿದ ಇಂಗ್ಲಿಷ್ ಪತ್ರಕರ್ತೆಯೊಬ್ಬರ ಅನಿಸಿಕೆ.

 

 

ಕನ್ನಡಿಗರನ್ನು ಕಡೆಗಣಿಸುತ್ತಿರುವ ಇಂತವರ ಚಿತ್ರವನ್ನು ನಾವು ನೋಡಬೇಕೆ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top