ತಂತ್ರಜ್ಞಾನ

100 ನೇ ಉಪಗ್ರಹ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ. ಕಾಲ್ ಕೆರ್ಕೊಂಡು ಬಂದು ಖ್ಯಾತೆ ತೆಗೆಯುತ್ತಿದೆ ಪಾಕಿಸ್ತಾನ.

100 ನೇ ಉಪಗ್ರಹ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ.
ಕಾಲ್ ಕೆರ್ಕೊಂಡು ಬಂದು ಖ್ಯಾತೆ ತೆಗೆಯುತ್ತಿದೆ ಪಾಕಿಸ್ತಾನ.

 

ಹೊಸ ಮೈಲಿಗಲ್ಲು ಸೃಷ್ಟಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮಹತ್ವಾಕಾಂಕ್ಷೆಯ 100 ನೇ ಉಪಗ್ರಹವನ್ನು ಇನ್ನುಳಿದ ಒಟ್ಟು 30 ಉಪಗ್ರಹಗಳೊಂದಿಗೆ ಯಶಸ್ವಿಯಾಗಿ ಗಗನಕ್ಕೆ ಉಡಾವಣೆ ಮಾಡಿದೆ. ಈ ಐತಿಹಾಸಿಕ ಕ್ಷಣ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

 

 

ಶ್ರೀಹರಿಕೋಟಾದಲ್ಲಿರುವ ಉಡಾವಣೆಯ ಕೇಂದ್ರದಿಂದ ಪೊಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ ಸಿ40 (ಪಿಎಸ್‌ಎಲ್‌ವಿ ಸಿ40) ಉಡಾವಣೆಯ ವಾಹಕದ ಮೂಲಕ ಉಡಾಯಿಸಲಾದ ಒಟ್ಟು 31 ಉಪಗ್ರಹಗಳು ತನ್ನ ಕಕ್ಷೆ ಸೇರಿಕೊಂಡಿವೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

 

ಇದೆ ಉಡಾವಣೆಯ ವಾಹಕದ ಮೂಲಕ ಅಮೆರಿಕ, ಇಂಗ್ಲೆಂಡ್, ಕೆನಡಾ, ಫಿನ್‍ಲ್ಯಾಂಡ್, ಕೊರಿಯಾ ಹಾಗೂ ಫ್ರಾನ್ಸ್ ಗೆ ಸೇರಿದ 28 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

 

ವಿನಾಕಾರಣ ಹೆದರಿ ಖ್ಯಾತೆ ತಗೆಯುತ್ತಿರುವ ಪಾಕಿಸ್ತಾನ, ಭಾರತದ ನೂರನೇ ಉಪಗ್ರಹ ಉಡಾವಣೆಯ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರರಾದ ಮೊಹಮ್ಮದ್ ಫೈಸಲ್ ಉಪಗ್ರಹದ ಉಭಯ ಸ್ವಭಾವವು ಅಸ್ಥಿರಗೊಳಿಸುವ ಮಿಲಿಟರಿ ಸಾಮರ್ಥ್ಯಗಳನ್ನು ನಿರ್ಮಿಸಲು ಕಾರಣವಾಗಬಹುದು. ಭಾರತ ಈ ಉಪಗ್ರಹವನ್ನು ಮಿಲಿಟರಿ ಹಾಗು ನಾಗರೀಕ ಉದ್ದೇಶಕ್ಕೆ ಉಪಯೋಗಿಸುವ ಸಾಧ್ಯತೆ ಇದೆ ಇದರಿಂದ ಶಾಂತಿಗೆ ಧಕ್ಕೆ ಉಂಟಾಗಬಹುದು ಎಂದು ಫೈಸಲ್ ಆರೋಪಿಸಿದ್ದಾರೆ.

 

 

ಈ ಉಪಗ್ರಹದ ಪ್ರಯೋಜನ:
ಇದೀಗ ಕಕ್ಷಕ್ಕೆ ಸೇರಿರುವ ಉಪಗ್ರಹಗಳು ಭಾರತದ ವಿವಿಧ ಕ್ಷೇತ್ರಗಳ ಸಂವಹನಕ್ಕೆ ಹೆಚ್ಚು ಶಕ್ತಿ ನೀಡಲಿವೆ. ಅತಿ ಹೆಚ್ಚು ಗುಣಮಟ್ಟದ ಫೋಟೋ ಕಳುಹಿಸಲು, ಶರವೇಗದ ಮಾಹಿತಿಗಳ ವಿನಿಮಯಕ್ಕೆ ಉಪಯೋಗವಾಗಲಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಸಾಧನೆಯ ಮೂಲಕ ಹೆಸರುವಾಸಿಯಾರುವ ಇಸ್ರೋ ಇನ್ನು ಹೆಚ್ಚೆಚ್ಚು ಉಪಗ್ರಹ ಉಡಾವಣೆ ಮಾಡಿ ನಮ್ಮ ದೇಶವನ್ನು ತಂತ್ರಜಾನದಲ್ಲಿ ಎತ್ತರಕ್ಕೆ ಬೆಳೆಸಲಿ ಎಂದು ಅಶೋಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top