ದೇವರು

ಶಿವನ ಪತ್ನಿ ಸತಿಯ ದೇಹವು 108 ತುಂಡುಗಳಾಗಿ ಬಿದ್ದಾಗ 108 ಶಕ್ತಿ ಪೀಠಗಳು ಉಂಟಾದವು, ಸತಿಯ ಯೋನಿಯಿಂದಲೇ ಆದ ಕಾಮಾಕ್ಯ ದೇವಿಯ ದೇವಸ್ಥಾನದ ಮಹತ್ವ ತಿಳ್ಕೊಳ್ಳೆಬೇಕು

ಶಿವನ ಪತ್ನಿ ಸತಿಯ ದೇಹವು 108 ತುಂಡುಗಳಾಗಿ ಬಿದ್ದಾಗ 108 ಶಕ್ತಿ ಪೀಠಗಳು ಉಂಟಾದವು, ಸತಿಯ ಯೋನಿಯಿಂದಲೇ ಆದ ಕಾಮಾಕ್ಯ ದೇವಿಯ ದೇವಸ್ಥಾನದ ಮಹತ್ವ ತಿಳ್ಕೊಳ್ಳೆಬೇಕು

ಕಾಮಾಕ್ಯ ದೇವಿಯ ದೇವಸ್ಥಾನವು ಅಷ್ಟ ದಶ ಶಕ್ತಿ ಪೀಠಗಳಲ್ಲಿ ಒಂದು.ಈ ದೇವಸ್ಥಾನದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ..

ತಿಂಗಳ ಮುಟ್ಟಿನ ಸಮಯದಲ್ಲಿ ಸಾಮಾನ್ಯವಾಗಿ ಹೆಣ್ಣುಮಕ್ಕಳು ಮತ್ತು ಸ್ತ್ರೀಯರು ದೇವಸ್ಥಾನಕ್ಕೆ ಹೋಗಬಾರದು ಎಂಬ ಪದ್ಧತಿ ರೂಢಿಯಲ್ಲಿದೆ .ನಮ್ಮ ಹಿಂದೂ ಧರ್ಮದಲ್ಲಿ ಈ ಸಮಯದಲ್ಲಿ ಸ್ತ್ರೀಯರು ದೇವಸ್ಥಾನಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಆದರೆ ಅಸ್ಸಾಂನ ಗುವಹಾಟಿಯ ಪಶ್ಚಿಮ ದಿಕ್ಕಿನಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲೆಸಿರುವ ಕಾಮಾಕ್ಯಾ ದೇವಿಯನ್ನು, ಆಕೆಯ ಯೋನಿಯ ರೂಪದಲ್ಲಿ ಇಲ್ಲಿ ಪೂಜಿಸಲಾಗುತ್ತದೆ. ಅದನ್ನು ನೀವು ಒಂದು ಬಾರಿ ನೋಡಲೇಬೇಕು. ಇಲ್ಲಿ ದೇವಿಯ ಯಾವುದೇ ವಿಗ್ರಹವಿಲ್ಲ. ಬದಲಾಗಿ ದೇವಿಯ ಯೋನಿಯನ್ನು ಪೂಜಿಸಲಾಗುತ್ತದೆ.

 

 

 

ಅಸ್ಸಾಂನ ವಸಂತ ಕಾಲದಲ್ಲಿ ಕಲ್ಲಿನಲ್ಲಿ ತೇವವು ಕಂಡುಬರುತ್ತದೆ. ಅಂತೆಯೇ ಇಲ್ಲಿನ ಕಲ್ಲುಗಳಲ್ಲೂ ತೇವ ಇರುತ್ತದೆ. ಈ ದೇವಸ್ಥಾನದ ದೇವಿಯ ಮುಟ್ಟಿನ ಸಮಯದಲ್ಲಿ ದೇವಸ್ಥಾನವನ್ನೇ ಮುಚ್ಚಲಾಗುತ್ತದೆ. ಕಾಮಕ್ಯ ನಗರವು ಭಾರತ ದೇಶದ, ಅಸ್ಸಾಂ ರಾಜ್ಯದ, ಗುವಾಹಟಿಯಲ್ಲಿ, ಪಶ್ಚಿಮ ದಿಕ್ಕಿನಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲೆಸಿರುವ ಶಕ್ತಿಶಾಲಿ ದೇವಿಯ ದೇವಾಲಯ ಇದಾಗಿದೆ.

ಕಾಮಕ್ಯ ದೇವಾಲಯವನ್ನು ಒಂದು ಹಿಂದೂ ದೇವಾಲಯವಾಗಿದ್ದು, ಈ ದೇವಾಲಯವು ಅತ್ಯಂತ ಪುರಾತನ ಶಕ್ತಿ ದೇವಾಲಯಗಳಲ್ಲಿ ಒಂದು ಅಂತ ಹೇಳಲಾಗಿದೆ.ತಾಯಿ ದೇವಿ ಕಾಮಕ್ಯಳಿಗೆ ಅರ್ಪಿತವಾದ ದೇವಾಲಯ ಎಂದು ಸಹ ಹೇಳಲಾಗುತ್ತದೆ.

 

 

ಭಾರತದಲ್ಲಿರುವ 51 ಶಕ್ತಿ ಪೀಠಗಳಲ್ಲಿ, ಈ ದೇವಸ್ಥಾನ ಕೂಡ ಒಂದು. ಶಿವನ ಪತ್ನಿ ಸತಿ ದೇವಿಯು ತಂದೆ ದಕ್ಷನು ಮಾಡುತ್ತಿದ್ದ ಯಜ್ಞದಲ್ಲಿ ಪಾಲ್ಗೊಳ್ಳಲು ಬರುತ್ತಾಳೆ. ಶಿವನು ಪಾಲ್ಗೊಳ್ಳುವುದು ಬೇಡವೆಂದು ಹೇಳಿದರೂ ಸಹ ಲೋಕಾರ್ಪಣೆಗಾಗಿ ಮಾಡುತ್ತಿರುವ ಯಜ್ಞದಲ್ಲಿ ತಾನು ಪಾಲ್ಗೊಳ್ಳಲೇಬೇಕು ಎಂದು ಹೋಗುತ್ತಾಳೆ.

ಶಿವ ಮತ್ತು ಸತಿ ದಂಪತಿಯರಿಗೆ ದಕ್ಷನು ಆಹ್ವಾನವನ್ನು ನೀಡಿರುವುದಿಲ್ಲ. ಮಗಳೆಂಬ ಮಮಕಾರವನ್ನು ನೋಡದೆ ದಕ್ಷನು ಮಗಳನ್ನು ಮತ್ತು ಪತಿಯಾದ ಶಿವನನ್ನು ಹೀಯಾಳಿಸಿ ಅವಮಾನಿಸುತ್ತಾನೆ.ಇದರಿಂದ ನೊಂದ ಸತಿಯು ಯಜ್ಞಕುಂಡಕ್ಕೆ ಹಾರಿ ಪ್ರಾಣವನ್ನು ತ್ಯಾಗ ಮಾಡುತ್ತಾಳೆ. ಈ ವಿಷಯಗಳನ್ನು ತಿಳಿದ ಮಹಾದೇವನು ಕೋಪೋದ್ರಿಕ್ತನಾಗುತ್ತಾನೆ. ಸತಿಯ ಮೃತ ದೇಹವನ್ನು ತನ್ನ ಭುಜದ ಮೇಲೆ ಇರಿಸಿಕೊಂಡು ತಾಂಡವ ನೃತ್ಯವನ್ನು ಆಡುತ್ತಾನೆ.

ಶಿವನನ್ನು ಸಮಾಧಾನಪಡಿಸಲು ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ಕತ್ತರಿಸುತ್ತಾನೆ. ಸತಿಯ ದೇಹವು 108 ತುಂಡುಗಳಾಗಿ ಬೇರೆ ಬೇರೆ ಸ್ಥಳದಲ್ಲಿ ಬೀಳುತ್ತದೆ. ಇವುಗಳನ್ನು ನೂರಾ ಎಂಟು ಶಕ್ತಿ ಪೀಠಗಳು ಎಂದು ಕರೆಯುತ್ತಾರೆ. ಸತಿಯ ದೇಹದ ಭಾಗವು ಕಾಮಾಕ್ಯ ದೇವಸ್ಥಾನದಲ್ಲಿ ಬಿದ್ದಿದೆ ಎಂದು ಹೇಳಲಾಗಿದೆ. ದೇವಸ್ಥಾನವು ವಾರ್ಷಿಕ ಫಲವತ್ತತೆಯನ್ನು ಉತ್ಸವವನ್ನು ಹೊಂದಿದ್ದು, ಇದನ್ನು ಅಮವಾಸಿ ಪೂಜೆ ಎಂದು ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ದೇವಿಯ ವಾರ್ಷಿಕ ಋತು ಚಕ್ರದ ಕ್ರಿಯೆಗೆ ಹೋಗುವುದಾಗಿ ಹೇಳಲಾಗಿದೆ.ಈ ನಾಲ್ಕು ದಿನಗಳ ಕಾಲ ಆ ಸಮಯದಲ್ಲಿ ಈ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ನಂತರ ನಾಲ್ಕನೆಯ ದಿನ ಉತ್ಸವವನ್ನು ಮಾಡಿ ಬಾಗಿಲನ್ನು ತೆರೆಯಲಾಗುತ್ತದೆ. ಈ ಸಮಯದಲ್ಲಿ ಇಲ್ಲಿ ಹರಿಯುವ ನದಿ ಬ್ರಹ್ಮಪುತ್ರದ ನೀರು ಕೂಡ ಕೆಂಪು ಬಣ್ಣಕ್ಕೆ ತಿರುಗುತ್ತದೆಯಂತೆ. ಇದು ನಿಜವಾಗಿಯೂ ಋತುಸ್ರಾವವೇ ಅಂತ ಅಥವಾ ಪಂಡಿತರು ನದಿಗೆ ಹಾಕುವ ಕುಂಕುಮವೇ ಎಂದು ತಿಳಿದು ಬಂದಿಲ್ಲ.

 

 

ಈ ಸಮಯದಲ್ಲಿ ದೇವಸ್ಥಾನವನ್ನು ಮುಚ್ಚಿರುತ್ತಾರೆ. ಈ ಪವಿತ್ರ ನೀರನ್ನು ಭಕ್ತರಿಗೆ ವಿತರಿಸಲಾಗುತ್ತದೆ.ದೇಶದಲ್ಲಿ ಈ ದೇವಾಲಯವನ್ನು ಹೆಚ್ಚು ಪವಿತ್ರವಾದ ಸ್ಥಳ ಎಂದು ಕರೆಯಲಾಗುತ್ತದೆ. ಆದರೆ ಈ ರೀತಿಯಲ್ಲಿ ಚಿತ್ರವಿರುವ ದೇವಸ್ಥಾನ ಅಪರೂಪದಲ್ಲಿ ಅಪರೂಪ ಎಂದು ಹೇಳಲಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top