ಜ್ಯೋತಿಷ್ಯ

ಕುಜ ದೋಷದಿಂದ ನಿಮ್ಮ ಮದುವೆ ತಡವಾಗುತ್ತಿದೆಯಾ ?ಯಾವ ತಾರೀಖಿನಲ್ಲಿ ಹುಟ್ಟಿದರೆ ಕುಜದೋಷ ಕಾಡುತ್ತದೆ ಇದನ್ನು ಏನು ಮಾಡಿ ಸರಿ ಮಾಡ್ಕೋಬಹುದು ತಿಳ್ಕೊಳ್ಳಿ

ಕುಜ ದೋಷದಿಂದ ನಿಮ್ಮ ಮದುವೆ ತಡವಾಗುತ್ತಿದೆಯಾ? ಯಾವ ತಾರೀಖಿನಲ್ಲಿ ಹುಟ್ಟಿದರೆ ಕುಜದೋಷ ಕಾಡುತ್ತದೆ ಇದನ್ನು ಏನು ಮಾಡಿ ಸರಿ ಮಾಡ್ಕೋಬಹುದು ತಿಳ್ಕೊಳ್ಳಿ

ಕುಜ ದೋಷದಿಂದ ನಿಮ್ಮ ಮದುವೆ ತಡವಾಗುತ್ತಿದೆಯಾ?

ಯಾವ ತಾರೀಖಿನಲ್ಲಿ ಹುಟ್ಟಿದರೆ ಕುಜದೋಷ ಕಾಡುತ್ತದೆ ಮತ್ತು ಪರಿಹಾರಗಳೇನು. ಯಾವ ತಾರೀಖಿನಲ್ಲಿ ಹುಟ್ಟಿದವರಿಗೆ ಕುಜ ದೋಷ ಕಾಡುತ್ತದೆ .

ಕುಜ ಎಂದರೆ ಕೆಂಪು ಬಣ್ಣದ ಗ್ರಹ ,ಕುಜನಿಗೆ ಮಂಗಳ ಗ್ರಹ,ಅಂಗಾರಕ ಎಂದು ಸಹ ಕರೆಯಲಾಗುತ್ತದೆ.ಕುಜನನ್ನು ಭೂಮಿ ಕಾರಕ ಎಂದು ಕೂಡ ಕರೆಯಲಾಗುತ್ತದೆ. ಕುಜನಿಗೆ ಸಂಬಂಧಪಟ್ಟ ಕಾಯಿಲೆಗಳು ರಕ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮತ್ತು ಮೂಳೆಗೆ ಸಂಬಂಧಪಟ್ಟ ಕಾಯಿಲೆಗಳು, ಅಪಘಾತಗಳನ್ನು ಎದುರಿಸಬೇಕಾಗುತ್ತದೆ.

9,18,27 ನೇ ತಾರೀಖಿನಂದು ಹುಟ್ಟಿದವರಿಗೆ ವಿಪರೀತ ಕುಜ ದೋಷ ಕಾಡುತ್ತದೆ , 7,16,25 ನೇ ತಾರೀಖಿನಂದು ಹುಟ್ಟಿದವರಿಗೆ ವಿಪರೀತ ಕುಜದೋಷ ಕಾಡುತ್ತದೆ ಮತ್ತು 2,20,29 ನೇ ತಾರೀಖಿನಂದು ಹುಟ್ಟಿದವರಿಗೂ ಕೂಡ ಕುಜ ದೋಷ ಕಾಡುತ್ತದೆ.ಕುಜ ದೋಷ ಇರುವವರಿಗೆ ಮದುವೆ ಜೀವನ ಹಾಳಾಗುವುದು .

ಮೃಗಶಿರಾ ,ಚಿತ್ತ,ಧನಿಷ್ಠ ನಕ್ಷತ್ರದಲ್ಲಿ ಜನಿಸಿದವರಿಗೂ ಕೂಡ ಕುಜ ದೋಷ ಕಾಡುತ್ತದೆ ಯಾಕೆಂದರೆ ಈ ಮೂರು ನಕ್ಷತ್ರಗಳಿಗೆ ಅಧಿಪತಿಯು ಕೂಡ ಕುಜನೇ ಆಗಿದ್ದಾನೆ.
ಕುಜ ದೋಷಕ್ಕೆ ಸುಲಭ ಪರಿಹಾರಗಳು.

ಬೂಂದಿ ಲಡ್ಡುವನ್ನು ಮಂಗಳವಾರದ ದಿನ ಉಂಡೆಯಾಗಿಯೇ ದಾನ ಮಾಡಬೇಕು. ಅದನ್ನು ಮುರಿಯಬಾರದು ಮುರಿದರೆ ದೋಷ ಬರುತ್ತದೆ. ಆದ್ದರಿಂದ ಹಾಗೆ ದಾನ ಮಾಡಿದರೆ ಒಳ್ಳೆಯದು.
ಕುಜ ದೋಷ ಇರುವ ಮಕ್ಕಳಿಗೆ ಬೆಳ್ಳಿಯ ಲೋಟದಲ್ಲಿ ನೀರು ಕುಡಿಯಲು ಕೊಡಬೇಕು.

ಕುಜ ದೋಷವಿರುವವರು ಕೆಂಪು ಬಣ್ಣದ ಸೇಬುಗಳನ್ನು 9,18, ಅಥವಾ 27 ಸೇಬುಗಳನ್ನು ಒಂಬತ್ತು ಮಂಗಳವಾರ ಭಿಕ್ಷುಕರಿಗೆ ಅಥವಾ ಯಾರಿಗಾದರೂ ಅವಶ್ಯಕತೆ ಇರುವವರಿಗೆ ಅಥವಾ ರೋಗಿಗಳಿಗೆ ದಾನ ನೀಡಬೇಕು.
ವಿಷ್ಣು ಸಹಸ್ರನಾಮವನ್ನು ಕುಜ ದೋಷ ಇರುವವರು ಪಠಿಸಬೇಕು. ಪ್ರತಿದಿನ ಪಠಿಸಿದರೆ ಕುಜದೋಷ ನಿವಾರಣೆಯಾಗುತ್ತದೆ.

 

 

ಸುಬ್ರಹ್ಮಣ್ಯ ದೇವರ ಆರಾಧನೆ ಮಾಡಬೇಕು ಮತ್ತು ಸುಬ್ರಹ್ಮಣ್ಯ ದೇವರ ವಿಭೂತಿಯನ್ನು ಪ್ರತಿದಿನ ಹಣೆಗೆ ಇಟ್ಟುಕೊಳ್ಳಬೇಕು ಮತ್ತು ವಿಭೂತಿಯನ್ನು ದಿಂಬಿನ ಕೆಳಗೆ ಇಟ್ಟುಕೊಳ್ಳುವುದು ಸಹ ಕುಜದೋಷಕ್ಕೆ ಪರಿಹಾರವಾಗಿದೆ .
“ಓಂ ಶರವಣಭವಾಯ ನಮಃ” ಎಂಬ ಈ ಮಂತ್ರವನ್ನು ಹೇಳಿಕೊಳ್ಳಬೇಕು. ಪ್ರತಿ ದಿನ ಇದನ್ನು ಹದಿನೆಂಟು ಬಾರಿ ಜಪಿಸಬೇಕು .

 

 

ನೀವು ಈ ರೀತಿ ಸಣ್ಣಪುಟ್ಟ ಪರಿಹಾರಗಳನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಂಡರೆ ಕುಜದೋಷವನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಕುಜದೋಷ ಇರುವವರು ಕಪ್ಪು ಮತ್ತು ಕೆಂಪು ಬಣ್ಣದ ಯಾವುದೇ ರೀತಿಯ ವಸ್ತುಗಳನ್ನು ಉಪಯೋಗಿಸದೆ ಇರುವುದು ಒಳ್ಳೆಯದು ಮತ್ತು ಹಾಗೆ ಕಪ್ಪು ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಸಹ ಆದಷ್ಟು ಧರಿಸದೇ ಇರುವುದು ಒಳ್ಳೆಯದು.

ಹಳದಿ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ಆದಷ್ಟು ಹೆಚ್ಚಾಗಿ ಬಳಸಿ.
ಅತಿ ಹೆಚ್ಚು ಕುಜ ದೋಷ ಇರುವವರು ಮೂರು ಎನ್ನುವ ಸಂಖ್ಯೆಯನ್ನು ಹೆಬ್ಬೆಟ್ಟಿನ ಪಕ್ಕದಲ್ಲಿರುವ ತೋರು ಬೆರಳಿಗೆ ಒಳಮುಖವಾಗಿ ಬರೆದುಕೊಳ್ಳಬೇಕು.
S ಎನ್ನುವ ಅಕ್ಷರದಿಂದ ಕುಜ ದೋಷ ಇರುವವರಿಗೆ ಹೆಸರಿಟ್ಟರೆ ತುಂಬಾ ಒಳ್ಳೆಯದು. ಯಾಕೆಂದರೆ ಈ S ಅಕ್ಷರ ಅವರನ್ನು ಜೀವನದಲ್ಲಿ ತುಂಬಾ ತಗ್ಗಿಸುತ್ತದೆ.

ಉದಾಹರಣೆಗೆ:- ಸೋನಿಯಾ ಗಾಂಧಿ, ಸಲ್ಮಾನ್ ಖಾನ್. ಇವರೆಲ್ಲರೂ ಒಂಬತ್ತನೇ ತಾರೀಖು ಹುಟ್ಟಿರುವವರು ಅಂದರೆ ಅವರಿಗೆ ಕುಜದೋಷ ಖಂಡಿತವಾಗಿಯೂ ಇರುತ್ತದೆ. ಅವರನ್ನು ತಗ್ಗಿಸಿರುವುದು ಈ S ಅಕ್ಷರವೇ.
ಹೆಸರನ್ನು ಸರಿಯಾಗಿ ನೋಡಿ ಇಟ್ಟರೆ ಯಾವ ದೋಷವೂ ಕೂಡಾ ಬಾಧಿಸುವುದಿಲ್ಲ.
ಉತ್ತರ ಭಾರತದಲ್ಲಿ ವಧು ವರರನ್ನು ನೋಡುವುದಕ್ಕೂ ಮುನ್ನ ಮೊದಲು ಅವರ ಜಾತಕವನ್ನು ನೋಡಿ ಕುಜದೋಷವಿದೆಯೋ ಇಲ್ಲವೋ ಎಂದು ಪರಿಶೀಲಿಸಿದ ನಂತರ ಮುಂದುವರಿಯುತ್ತಾರೆ.
ಕುಜದೋಷ .

ತಮ್ಮ ಜನ್ಮ ಜಾತಕ ಅಥವಾ ಜನ್ಮ ಕುಂಡಲಿಯಲ್ಲಿ 2,7,8,12 ನೇ ಮನೆಯಲ್ಲಿ ಕುಜ ಇದ್ದರೆ ಜಾತಕದಲ್ಲಿ ಕುಜ ದೋಷ ಕಾಡುತ್ತದೆ. ಕುಜ ಅಂದರೇನೇ ಕೋಪ ಜಾಸ್ತಿ,ಹಠ ಸ್ವಭಾವದವರು ಆಗಿರುತ್ತಾರೆ.
ಒಂದು ಕಡೆ ನಾಲ್ಕು ಜನ ಸೇರಿದರೆ ಅಲ್ಲಿ ನಗುವಿನ ವಾತಾವರಣವಿದ್ದರೆ ಅದನ್ನು ಹಾಳು ಮಾಡುವುದು, ಕೋಪ, ಜಗಳವನ್ನು ಮಾಡುವುದು ಬಾಯಿಗೆ ಬಂದ ಹಾಗೆಲ್ಲ ಮಾತನಾಡುವುದು, ಸಂಬಂಧಗಳನ್ನು ಮತ್ತು ಸಂಬಂಧದಲ್ಲಿ ಬಾಂಧವ್ಯವನ್ನು ಹಾಳು ಮಾಡುವುದು ಮತ್ತು ಸ್ನೇಹವನ್ನು ಕಳೆದುಕೊಳ್ಳುವುದು ಈ ಕುಜ ದೋಷದಿಂದಾಗಿಯೇ.

ಕುಜದೋಷ ಮುಖ್ಯವಾಗಿ ಮದುವೆಯ ಜೀವನವನ್ನು ಹಾಳು ಮಾಡುತ್ತದೆ. ವೈವಾಹಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಕುಜ ದೋಷ ಇರುವವರು ಮನೆಯಲ್ಲಿ ಇರುವುದಿಲ್ಲ, ಯಾವಾಗಲೂ ದೂರ ಹೋಗಿ ಕೆಲಸ ಮಾಡುತ್ತಾರೆ.ಇನ್ನು ಕುಜದೋಷ ಇರುವವರಿಗೆ ಅವರ ಸಂಬಂಧಿಕರು ಕೂಡ ಅವರಿಂದ ದೂರವೇ ಉಳಿಯುತ್ತಾರೆ. ಸಂಬಂಧಿಕರು ಯಾರು ಸಹ ಇವರ ಹತ್ತಿರದಲ್ಲಿ ಇರುವುದಿಲ್ಲ. ಎಲ್ಲರೂ ದೂರ ಆಗುತ್ತಾರೆ.

ಸಂಬಂಧಿಕರಿಗೂ ಇವರಿಗೂ ಅಷ್ಟಕ್ಕೇ ಅಷ್ಟೇ ಹೇಳಿಕೊಳ್ಳುವಂತಹ ಬಾಂಧವ್ಯ ಮತ್ತು ಸ್ನೇಹವೇನು ಇರುವುದಿಲ್ಲ .
ಗಂಡ- ಹೆಂಡತಿ ಕೂಡ ಹೆಚ್ಚಾಗಿ ಒಂದಾಗಿ ಇರುವುದಿಲ್ಲ ಮತ್ತು ಕುಜ ದೋಷ ಇರುವವರು ಅಪ್ಪ- ಅಮ್ಮ ,ಸಂಬಂಧಿಕರ ಜೊತೆಗೂ ಸಹ ಹೆಚ್ಚಾಗಿ ಇರುವುದಿಲ್ಲ. ಅವರೆಲ್ಲರಿಂದಲೂ ಸಹ ದೂರವೇ ಉಳಿಯುವರು. ಇನ್ನೂ ಬಾಳ ಸಂಗಾತಿಯ ಜೊತೆಗೆ ಕೂಡ ಇವರು ಹೆಚ್ಚು ಹೊಂದಾಣಿಕೆಯಾಗಿ ಇರುವುದಿಲ್ಲ. ಒಂದು ವೇಳೆ ಬಾಳಸಂಗಾತಿ ಜೊತೆಗಿದ್ದರೂ ಕೂಡ ಇವರು ಬಾಳ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ.

ಉದಾಹರಣೆಗೆ:- ಸೋನಿಯಾ ಗಾಂಧಿ, ಶಂಕರ್ ನಾಗ್.

ಈ ಕುಜ ದೋಷ ಇರುವವರಿಗೆ ಕೋಪ, ಸಿಟ್ಟು,ಹಠ, ನಾನು ಎನ್ನುವ ಅಹಂ ಜಾಸ್ತಿ ಇದರಿಂದಲೇ ಇವರ ಸಂಬಂಧಗಳು ಹಾಳಾಗುತ್ತವೆ.ಆದ್ದರಿಂದ ಈ ಕೆಲವು ಸಲಹೆಗಳನ್ನು ಪಾಲಿಸಿ ನೀವು ಸಹ ಕುಜ ದೋಷವನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ.ಎಲ್ಲರಿಗೂ ಒಳ್ಳೆಯದಾಗಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top