ಸಿನಿಮಾ

ಬಹುಭಾಷಾ ನಟಿ ನಿತ್ಯಾ ಮೆನನ್ ಸಲಿಂಗಿ ಪಾತ್ರದಲ್ಲಿ ತೆರೆಗೆ ಬರಲು ಸಜ್ಜಾದ್ರ ?

ಬಹುಭಾಷಾ ನಟಿ ನಿತ್ಯಾ ಮೆನನ್ ಸಲಿಂಗಿ ಪಾತ್ರದಲ್ಲಿ ತೆರೆಗೆ ಬರಲು ಸಜ್ಜಾದ್ರ ?

ಬಹುಭಾಷಾ ನಟಿ ನಿತ್ಯ ಮೆನನ್ ಅವರಿಗೆ ವಿಭಿನ್ನವಾಗಿರುವ ಪಾತ್ರಗಳೆಂದರೆ ತುಂಬಾ ಇಷ್ಟ ಅಂತೆ. ತಮ್ಮ ವಿಶಿಷ್ಟ ಪಾತ್ರದಿಂದ ಅಭಿಮಾನಿಗಳ ಮನಸೆಳೆದಿರುವ ನಿತ್ಯ ಮೆನನ್. ಕಡಿಮೆ ಪಾತ್ರ ಇದ್ದರು ಅವೆಲ್ಲ ವೈವಿಧ್ಯಮಯವಾಗಿರುತ್ತವೆ ಎನ್ನುವುದು ವಿಶೇಷ.

 

 

ನಿತ್ಯ ಮೆನನ್ ತಮ್ಮ ಮುಂದಿನ ಚಿತ್ರದಲ್ಲಿ ಸಲಿಂಗಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ. ಹೊಸ ತೆಲುಗು ಚಿತ್ರದಲ್ಲಿ ನಿತ್ಯ ಮೆನನ್ ಸಲಿಂಗಿ ಪಾತ್ರವನ್ನು ಮಾಡಲಿದ್ದಾರೆ. ತುಂಬಾ ರೋಮ್ಯಾಂಟಿಕ್ ಆಗಿರುವ ಈ ಚಿತ್ರದಲ್ಲಿ ಇನ್ನೊಬ್ಬಳು ನಾಯಕಿಯ ಜೊತೆ ಲಿಪ್ ಲಾಕ್ ಮಾಡುವ ಸಿನ್ ಇದೆ ಅಂತೆ. ಚಿತ್ರದ ರಿಲೀಸ್ ಗಾಗಿ ಪಡ್ಡೆ ಹುಡುಗರು ಕಾಯ್ತಾ ಇದ್ದಾರಂತೆ.

 

 

ಚಿತ್ರಕ್ಕೆ ಒಂದು ಸಮಸ್ಯೆ ಎದುರಾಗಿದ್ದು ಸೆನ್ಸಾರ್ ಮಂಡಳಿ ಹೇಗೆ ರಿಯಾಕ್ಟ್ ಮಾಡುತ್ತೆ ಎಂದು ಎಲ್ಲರು ಕುತೂಹಲಕಾರಿಯಾಗಿ ಕಾಯ್ತಾ ಇದ್ದಾರಂತೆ. ಸಲಿಂಗಿ ಲಿಪ್ ಲಾಕ್ ದಂತ ಸನ್ನಿವೇಶಗಳಿಗೆ ಪರವಾನಿಗೆ ಕೊಡುತ್ತ ಅಥವಾ ದೃಶ್ಯಾವಳಿಗಳಿಗೆ ಕತ್ತರಿ ಬೀಳಿಸುತ್ತ ಎಂದು ಕಾದು ನೋಡಬೇಕಾಗಿದೆ. ಆ ಚಿತ್ರದಲ್ಲಿ ಇನ್ನು ಇಬ್ಬರು ನಟಿಯರಿದ್ದು ರೆಜಿನಾ ಮತ್ತು ಇನ್ನೊಬ್ಬರು ಕಾಜಲ್.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top