ಬಿಗ್ ಬಾಸ್

ಬೇಬಿ ಡಾಲ್ ನಿವೇದಿತಾ ಮುಂದೆ ಸಣ್ಣವರಾದರಂತೆ ದಿವಾಕರ್ !

ಮನೆಯಲ್ಲಿ ಪುಟ್ಟ ಹುಡುಗಿ ಅನಿಸಿಕೊಂಡರು ಒಂದಲ್ಲ ಒಂದು ಸುದ್ದಿಯಲ್ಲಿರುವ ನಿವೇದಿತಾ ಗೌಡ ಜೊತೆ ಇತ್ತೀಚೆಗಷ್ಟೇ ಮುನಿಸಿಕೊಂಡಿದ್ದ ಬಿಗ್ ಬಾಸ್ ಮನೆ ಜನ ಮತ್ತೆ ಆಕೆಯನ್ನು ಕೊಂಡಾಡಿದ್ದಾರೆ .

 

 

ನೆನ್ನೆ ಧಿಡೀರನೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ದಿವಾಕರ್ ಪತ್ನಿ ಮಮತಾ ಈ ಸಮಯದಲ್ಲಿ ಗಾರ್ಡನ್ ಏರಿಯಾಗೆ ನಿವೇದಿತಾ ಹಾಗು ಅನುಪಮರನ್ನು ಕರೆದ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳ ಮನೆಯವರು ಒಳಗೆ ಬಂದಾಗ ನೀಡುವ ಹಾಗೆಯೇ ನಿವೇದಿತಾ ಗೆ ಟಾಸ್ಕ್ ಒಂದನ್ನು ನೀಡಿದರು .

ದಿವಾಕರ್ ಪತ್ನಿ ಮನೆ ಒಳಗೆ ಇರುವ ಕಾಲವನ್ನು ಆ ಟಾಸ್ಕ್ ನಿರ್ಧಾರ ಮಾಡಿತ್ತು , ಅದರಂತಯೇ ನಿವೇದಿತಾ ಏತದ ಮೇಲೆ ಇರಿಸಲಾದ ಮಡಕೆಯನ್ನು ತನ್ನ ಕಾಲಿನ ಸಹಾಯದಿಂದ ಬ್ಯಾಲೆನ್ಸ್ ಮಾಡಬೇಕಿತ್ತು , ಒಂದು ವೇಳೆ ಮಡಕೆ ಕೆಳಗೆ ಬಿದ್ದರೆ ದಿವಾಕರ್ ಪತ್ನಿ ಮನೆಯೊಳಗೇ ಇರುವ ಸಮಯ ಮುಕ್ತಾಯವಾಗುತ್ತಿತ್ತು .

 

 

 

ಆದರೆ ಚಿಕ್ಕ ಹುಡುಗಿ ನಿವೇದಿತಾ ತನ್ನ ಪುಟ್ಟ ಕಾಲುಗಳಲ್ಲೇ 30 ನಿಮಿಷ ಏತದ ಮೇಲೆ ಇರಿಸಲಾದ ಮಡಕೆಯನ್ನು ಬ್ಯಾಲೆನ್ಸ್ ಮಾಡಿ ಎಲ್ಲರಿಂದ ಭೇಷ್ ಎನಿಸಿಕೊಂಡರು .

ಇದರಿಂದ ದಿವಾಕರ್ ಹಾಗು ಅವರ ಪತ್ನಿ ಮನಸ್ಪೂರ್ತಿಯಾಗಿ ಮಾತಾಡಿಕೊಂಡರು , ಕಷ್ಟವಾದರೂ ಸಹಿಸಿಕೊಂಡು 30 ನಿಮಿಷ ಬ್ಯಾಲೆನ್ಸ್ ಮಾಡಿದ ಮೇಲೆ ಬಿಗ್ ಬಾಸ್ ಆದೇಶ ಮಾಡಿ ಕಾಲು ಇಳಿಸಲು ಹೇಳಿದರು .

 

 

ನಂತ್ರ ಅಲ್ಲಿಂದ ಮಮತಾ ಹೊರನಡೆದರು ಇದರಿಂದ ಸಂತೋಷಗೊಂಡ ದಿವಾಕರ್ ನನ್ನ ತಂಗಿ ನೀನು ಎಂದು ಬಾಚಿ ತಬ್ಬಿಕೊಂಡರು , ನಿನ್ನ ಮುಂದೆ ನಾನು ಸಣ್ಣವನಾದೆ ಎಂದುಕೊಂಡರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top