ಕ್ರೀಡೆ

ಬ್ಲಡ್ ಕ್ಯಾನ್ಸರ್​ಗೆ ತುತ್ತಾಗಿದ್ದ ಅಭಿಮಾನಿ ಜೊತೆ ಸಮಯ ಕಳೆದ ರಾಹುಲ್ ದ್ರಾವಿಡ್  

ಬ್ಲಡ್ ಕ್ಯಾನ್ಸರ್​ಗೆ ತುತ್ತಾಗಿದ್ದ ಅಭಿಮಾನಿ ಜೊತೆ ಸಮಯ ಕಳೆದ ರಾಹುಲ್ ದ್ರಾವಿಡ್  

ಟೀಮ್ ಇಂಡಿಯಾದ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಜ.11 ಕ್ಕೆ 45ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಮೈದಾನದಲ್ಲಷ್ಟೇ ಅಲ್ಲ. ಮೈದಾನದ ಹೊರಗೂ ಜ್ಯಾಮಿ ಸಹೃದಯಿ ಎಂಬುದನ್ನ ಎತ್ತಿ ತೋರಿಸುತ್ತಿದೆ, ಅದೇನಂತಿರಾ? ಮುಂದೆ ಓದಿ.

ಬ್ಲಡ್ ಕ್ಯಾನ್ಸರ್​ಗೆ ತುತ್ತಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಭಿಮಾನಿಯೊಬ್ಬರನ್ನ ಸ್ಕೈಪ್ ಮೂಲಕ ಸಂಪರ್ಕಿಸಿದ ರಾಹುಲ್ ದ್ರಾವಿಡ್ ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ಧಾರೆ. ವರ್ಷದ ಹಿಂದೆ ನಡೆದ ಈ ಘಟನೆಯನ್ನ ರಾಹುಲ್ ದ್ರಾವಿಡ್ ಹುಟ್ಟುಹಬ್ಬದಂದು ಅವರ ಅಭಿಮಾನಿಯ ಸ್ನೇಹಿತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

Related image

ಬ್ಲಡ್ ಕ್ಯಾನ್ಸರ್​ಗೆ ತುತ್ತಾಗಿದ್ದ ಅಭಿಮಾನಿ ಜೊತೆ ದ್ರಾವಿಡ್ ಮಾನಡಿದ್ದಾರೆ ಅ ಮನದಾಳದ ಮಾತುಗಳಿ ಹೀಗಿದೆ, ನನ್ನ ಸ್ನೇಹಿತ ಅಕ್ಷಯ್ ಧೋಕೆ ಬ್ಲಡ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ. ಆಸ್ಪತ್ರೆಗೆ ಹೋದ ನಾನು ಅವನ ಜೊತೆ ಕೆಲ ಸಮಯ ಅವನಿಗಿಷ್ಟವಾದ ಕ್ರಿಕೆಟ್ ಬಗ್ಗೆ ಮಾತುಕತೆ ನಡೆಸಿದೆ. ಆಗ ಒಮ್ಮೆಯಾದರೂ ರಾಹುಲ್ ದ್ರಾವಿಡ್ ಅವರನ್ನ ಭೇಟಿಯಾಗಬೇಕೆಂಬ ಮಹದಾಸೆಯನ್ನ ಆತ ವ್ಯಕ್ತಪಡಿಸಿದ್ದ. ಸರಿ ಎಂದು ನನ್ನ ಎಲ್ಲ ಕಾಂಟಾಕ್ಟ್ ಬಳಸಿ ರಾಹುಲ್ ದ್ರಾವಿಡ್ ಸಂಪರ್ಕಕ್ಕೆ ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಲಿಲ್ಲ. ಅಷ್ಟು ದೊಡ್ಡ ವ್ಯಕ್ತಿಯನ್ನ ಸಂಪರ್ಕಿಸಲು ಸಾಧ್ಯವಿಲ್ಲ ಅಂದುಕೊಂಡು ಸುಮ್ಮನಾದೆವು.

ಕೆಲ ದಿನಗಳ ಬಳಿಕ ನಮಗೆ ದ್ರಾವಿಡ್ ಪತ್ನಿ ವಿಜೇತಾರಿಂದ ಕರೆ ಬಂದಿತು. ದ್ರಾವಿಡ್ ಸಂಪರ್ಕಕ್ಕೆ ನಾವು ಮಾಡಿದ ಪ್ರಯತ್ನದ ಬಗ್ಗೆ ಅವರಿಗೆ ತಿಳಿದಿತ್ತು. ರಾಹುಲ್ ದ್ರಾವಿಡ್​ಗೆ ನಿಮ್ಮ ಇಮೇಲ್ ತಲುಪಿದೆ. ದ್ರಾವಿಡ್ ನಿಮ್ಮ ಜೊತೆ ಸ್ಕೈಪ್ ಚಾಟ್ ಮಾಡಲು ಇಚ್ಛಿಸಿದ್ದಾರೆ ಎಂದು ತಿಳಿಸಿದರು. ಆದರೂ ನಮಗೆ ನಂಬಿಕೆ ಬಂದಿರಲಿಲ್ಲ. ಅವರ ಬ್ಯುಸಿ ಶೆಡ್ಯೂಲ್​ನಲ್ಲಿ ನಮ್ನನ್ನ ಸಂಪರ್ಕಿಸುತ್ತಾರಾ..? ಎಂಬ ಅನುಮಾನವಿತ್ತು. ಆದರೆ, ರಾಹುಲ್ ದ್ರಾವಿಡ್ ಅವರಿಂದ ಸ್ಕೈಪ್ ಕಾಲ್ ಬಂದೇಬಿಟ್ಟಿತ್ತು.

 

ಆಸ್ಪತ್ರೆಯಲ್ಲಿದ್ದ ನನ್ನ ಸ್ನೇಹಿತನ ಜೊತೆ ಮಾತನಾಡಿದ ರಾಹುಲ್ ದ್ರಾವಿಡ್, ಆಸ್ಪತ್ರೆಗೆ ಬರಲು ಸಾಧ್ಯವಾಗದಿದ್ದಕ್ಕೆ ಕ್ಷಮೆ ಕೇಳಿದರು. ಒಂದು ಗಂಟೆ ಕಾಲ ಮಾತನಾಡಿದ ರಾಹುಲ್ ದ್ರಾವಿಡ್, ಸಾವಿನಂಚಿನಲ್ಲಿದ್ದ ಸ್ನೇಹಿತನಿಗೆ ಖುಷಿ ಕೊಟ್ಟರು ಎಂದು ಕೋರಾ ಜಾಲತಾಣದ ಜೊತೆ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top