ಸಿನಿಮಾ

ಐದು ವರ್ಷದಿಂದ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ನಟ ಮತ್ತೆ ಬಣ್ಣ ಹಚ್ಚಿದ ರಾಮ್ ಕುಮಾರ್

ಐದು ವರ್ಷದಿಂದ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ನಟ ಮತ್ತೆ ಬಣ್ಣ ಹಚ್ಚಿದ ರಾಮ್ ಕುಮಾರ್

ಐದು ವರ್ಷದಿಂದ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ನಟ ರಾಮ್ ಕುಮಾರ್ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ವಿಶ್ವರಾಧ್ಯರು’ ಎನ್ನುವ ಭಕ್ತಿ ಪ್ರಧಾನ ಚಿತ್ರದ ಮೂಲಕ ಮತ್ತೆ ರಾಮ್ ಕುಮಾರ್ ಸಿನಿಮಾರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ.

Related image

 

‘ಪಾಂಡವರು’ ಸಿನಿಮಾದ ನಂತರ ನಟ ರಾಮ್ ಕುಮಾರ್ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಬ್ಯುಸಿನೆಸ್ ಕಡೆ ಗಮನ ಹರಿಸಿದ್ದ ನಟ ರಾಮ್ ಕುಮಾರ್ ಆಗಾಗ ಭಕ್ತಿ ಪ್ರಧಾನ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ರಾಮ್ ಕುಮಾರ್ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ‘ವಿಶ್ವರಾಧ್ಯರು’ ಎನ್ನುವ ಭಕ್ತಿ ಪ್ರಧಾನ ಚಿತ್ರದ ಮೂಲಕ ಸಿನಿಮಾ ಅಭಿಮಾನಿಗಳ ಮುಂದೆ ಬರಲಿದ್ದಾರೆ.

Image result for vishwaradhya audio release

ಇತ್ತೀಚಿನ ದಿನಗಳಲ್ಲಿ ನಟ ರಾಮ್ ಕುಮಾರ್ ಅವರನ್ನ ನೋಡಲು ಅಭಿಮಾನಿಗಳಿಗೂ ಸಾಧ್ಯವಾಗಿಲ್ಲ. ವಿಶ್ವರಾಧ್ಯರು ಚಿತ್ರದ ಆಡಿಯೋ ಕಾರ್ಯಕ್ರಮದಲ್ಲಿ   ಒಂದೇ ವೇದಿಕೆ ಮೇಲೆ ಬಾವ-ಬಾಮೈದ  ರಾಮ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಚಿತ್ರಗಳಲ್ಲಿ ಅಭಿನಯಿಸುವುದನ್ನ ಕಡಿಮೆ ಮಾಡಿರುವ ರಾಮ್ ಕುಮಾರ್ ತಮ್ಮ ಮಗ ಧಿರೇನ್ ರಾಮ್ ಕುಮಾರ್ ಅವರನ್ನ ಚಿತ್ರರಂಗಕ್ಕೆ ಪರಿಚಯಿಸಲಿದ್ದಾರೆ. ಈಗಾಗ್ಲೆ ಲುಕ್ ಟೆಸ್ಟ್ ಮಾಡಿಸಿರುವ ಧಿರೇನ್ ಕೆಲವೇ ದಿನಗಳಲ್ಲಿ ಚಿತ್ರಗಳ ಮಾಹಿತಿ ನೀಡಲಿದ್ದಾರೆ.

ವಿಶ್ವರಾಧ್ಯರು ಸಿನಿಮಾದಲ್ಲಿ ರಾಮ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಶೃತಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರೀಕರಣ ಮುಗಿಸಿರೋ ಚಿತ್ರತಂಡ ಇನ್ನ ಕೆಲವೇ ದಿನಗಳಲ್ಲಿ ಸಿನಿಮಾವನ್ನ ಬಿಡುಗಡೆ ಮಾಡಲಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top