ಸಿನಿಮಾ

ಪುಷ್ಕರ್ ಮಲ್ಲಿಕಾರ್ಜುನ್ ಅವರೇ ನೀವು ಎಷ್ಟು ಪ್ರಾಮಾಣಿಕರು?

ಮುಕ್ಕೋಟಿ ದೇವರ ಮೇಲೆ ಆಣೆ ಮಾಡಲು ರೆಡೀನಾ?

 

ಪುಷ್ಕರ ಮಲ್ಲಿಕಾರ್ಜುನ್ ಅವರೆ ನೀವು ಮಾಡುವ ತಪ್ಪನ್ನು ಬೊಟ್ಟು ಮಾಡಿ ತೋರಿಸಿದರೆ ಅವರ ಮೇಲೆ ಇಲ್ಲಸಲ್ಲದ ಸುಳ್ಳು ಹೊರಿಸಿ ನಿಮ್ಮ ಫೇಸ್ ಬುಕ್ ವಾಲ್ ಗೆ ಹಾಕಿಕೊಳ್ಳುವ ವಿಚಾರ ಹೊಸದೇನೂ ಅಲ್ಲ. ನೀವು ಒಂದು ಸುಳ್ಳನ್ನು ಸಮರ್ಥಿಸಿಕೊಳ್ಳಲು ನಿಮಗಿಷ್ಟ ಬಂದ ರೀತಿಯಲ್ಲಿ ಸತ್ಯವನ್ನು ತಿರುಚುವ ಪ್ರಯತ್ನ ಮಾಡುವಿರಿ ಎನ್ನುವದು ನಿಮ್ಮನ್ನು ಬಲ್ಲ ಎಲ್ಲರಿಗೂ ಗೊತ್ತಿದೆ. ದುಡ್ಡು ಮಾಡುವ ಉದ್ದೇಶದಿಂದ ಪ್ರೊಡ್ಯೂಸರ್ಸ್ ಮತ್ತು ಪಬ್ಲಿಕ್ ಫಿಗರ್‍ಗಳ ಬಗ್ಗೆ ಟ್ರೋಲ್ ಪೇಜ್‍ಗಳು ಮತ್ತು ಹರಾಸಿಂಗ್ ಕನ್ನಡ ಪೇಜ್‍ಗಳು ಕ್ರಿಯೇಟ್ ಮಾಡುತ್ತವೆ ಎಂದು ಬರೆದುಕೊಂಡಿದೀರಲ್ವಾ?

 

 

ಯಾವುದು ನಿಜ?

 

ಪ್ರೀಮಿಯರ್ ಶೋಗೆ ಕನ್ನಡದ ಪತ್ರಿಕೆಗಳನ್ನು ಕರೆದಿದ್ದೀರಿ ಎಂದು ಪಟ್ಟಿ ಹಾಕಿದೀರ. ನಿಮ್ಮ ಸಿನಿಮದ ಪಿ.ಆರ್.ಓ ಚಿತ್ರವಾಣಿ ಪ್ರೆಸ್ ಶೋ ಅರೇಂಜ್ ಮಾಡಿದ್ದಿದ್ದು ವೀರೇಶ್ ಚಿತ್ರಮಂದಿರದಲ್ಲಿ ಜನವರಿ 12ರ ಬೆಳಿಗ್ಗೆ. ನೀವು ಪ್ರೀಮಿಯರ್ ಶೋ ಮಾಡಿದ್ದು ಒರಾಯನ್ ಮಾಲ್‍ನಲ್ಲಿ ಜನವರಿ 11ರ ದಿನ ರಾತ್ರಿ ಹತ್ತು ಗಂಟೆಗೆ. ಅಲ್ಲಿಗೆ ಬಂದಿದ್ದು ಟೈಮ್ಸ್ ಆಫ್ ಇಂಡಿಯಾ ಒಳಗೊಂಡು ಇಂಗ್ಲಿಷ್ ಪತ್ರಿಕೆಯವರು. ನೀವು ಲಿಸ್ಟ್ ಕೊಟ್ಟಿರುವವರೆಲ್ಲಾ ವೀರೇಶ್ ಥೇಟರ್‍ನಲ್ಲಿ ಫಿಲಂ ವೀಕ್ಷಣೆ ಮಾಡಿರುವದು ಜನವರಿ 12 (ಇಂದು) ಬೆಳಿಗ್ಗೆ. ನಾವು ಜನವರಿ 12ರ ಬೆಳಗ್ಗೆನೇ ನಿಮ್ಮ ಕನ್ನಡ ದ್ರೋಹದ ಬಗ್ಗೆ ಪೋಸ್ಟ್ ಹಾಕಿದ್ದೀವಿ. ಈಗ ನೀವು ಸತ್ಯವನ್ನು ತಿರುಚುವ ಪ್ರಯತ್ನ ಮಾಡುತ್ತಿರುವಿರಿ.

 

 

ನೀವು ಮಾಡಿರುವ ಸಿನಿಮಾವನ್ನು ಕನ್ನಡದ ಪಂಡಿತರು, ಬುದ್ದಿಜೀವಿಗಳು, ಸಾಹಿತಿಗಳಿಗೆ ಪ್ರದರ್ಶನ ಮಾಡಿ. ಚನಲಚಿತ್ರದಲ್ಲಿ ಎಷ್ಟು ಭಾಗ ಕನ್ನಡ ಇದೆ? ಎಷ್ಟು ಆಂಗ್ಲ ಭಾಷೆ ತುರುಕಿದೀರ ಅಂತಾ ಗೊತ್ತಾಗತ್ತೆ. ನೀವು ಕನ್ನಡಿಗರಿಗೆ, ಕನ್ನಡ ಚಲನಚಿತ್ರ ರಂಗಕ್ಕೆ ಕಂಗ್ಲಿಷ್ ಸಿನಿಮಾ ನಿರ್ಮಾಣ ಮಾಡಿ ಅವಮಾನ ಮಾಡಿ, ಈಗ ಕನ್ನಡ ಪೇಜ್‍ಗಳ ಬಗ್ಗೆ ಇಲ್ಲಸಲ್ಲದ ಆರೋ ಹೊರಿಸುತ್ತಿದೀರಲ್ಲ ಸರೀನಾ?

 

ದುಡ್ಡು ಮಾಡೋ ಉದ್ದೇಶ ಯಾರ್ದು?

 

 

ಪುಷ್ಟಕರ ಮಲ್ಲಿಕಾರ್ಜುನ್ರವರೇ, ಕನ್ನಡ ಮತ್ತು ಆಂಗ್ಲ ಪತ್ರಿಕೆಗಳ ವಿಮರ್ಶಕರಿಗೆ ದುಡ್ಡಿನ ಆಮಿಶ ನೀಡಿ ಅವರನ್ನು ಕೊಳಚೆದಾರಿಗೆ ಎಳೆದಿರೋರು ನೀವು. ನೀವು ಪ್ರಾಮಾಣಿಕರಾಗಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ, ಮಂತ್ರಾಲಯ ರಾಘವೇಂದ್ರ ಸ್ವಾಮಿ, ಬೆಂಗಳೂರು ಅಣ್ಣಮ್ಮ, ಶಿವಾಜಿನಗರ ಮದರ್ ಮೇರಿ ಮೇಲೆ ಅಷ್ಟು ಮಾತ್ರ ಅಲ್ಲ ಕನ್ನಡಾಂಬೆಯ ಮೇಲೆ ಆಣೆ ಮಾಡಿ ಹೇಳಿ ಇದುವರ್ಗೂ ಯಾವ ಪತ್ರಕರ್ತರಿಗೂ ನೀವು ಲಂಚ ಕೊಟ್ಟಿಲ್ಲ ಅಂತಾ. ಸಂಸ್ಥೆಗಳಲ್ಲಿ ಸಂಬಳ ಪಡೆಯುವ ಪತ್ರಕರ್ತರಿಗೆ ದುಡ್ಡಿನ ಆಸೆ ತೋರಿಸಿ ಅವರ ವೃತ್ತಿಗೆ ದ್ರೋಹ ಮಾಡಿಸುತ್ತಿದ್ದೀರಾ. ನಿಮ್ಮ ತಪ್ಪು ಕಂಡು ಹಿಡಿಯುವ ಪೇಜ್‍ಗಳ ಮೇಲೆ ತಪ್ಪು ಆರೋಪ ಮಾಡುತ್ತಿದ್ದೀರಲ್ಲ ಸರೀನಾ? ತಾಯಿ ಕನ್ನಡಾಂಬೆ ನಿಮ್ಮನ್ನು ಕ್ಷಮಿಸ್ತಾಳಾ?

 

ಪತ್ರಕರ್ತರೇ ಎಚ್ಚರ

 

 

ಕನ್ನಡ ಚಲನಚಿತ್ರ ಪತ್ರಕರ್ತರ ಹೆಸರು ತುಂಬಾ ಕೆಡುತ್ತಿದೆ. ಅದು ಪುಷ್ಕರ್ ಮಲ್ಲಿಕಾರ್ಜುನ್‍ರವರಂತಹ ನಿರ್ಮಾಪಕರಿಂದ ಅವರ ಸಿನಿಮಾನ ಪ್ರಮೋಟ್ ಮಾಡಿಸಿಕೊಳ್ಳಲು ನಿಮಗೆ ದುಡ್ಡಿನ ಆಮಿಷ ಒಡ್ಡುತ್ತಾರೆ. ಹಬ್ಬದ ಊಟಕ್ಕಾಗಿ ವರ್ಷದ ಊಟ ಕಳೆದುಕೊಂಡ್ರು ಅಂತಾ ಗಾದೆ ಇದ್ಯಲ್ಲ ಹಾಗೆ ಆಗೋದು ಬೇಡ. ನೀವು ಕೆಲ್ಸ ಮಾಡೋ ಸಂಸ್ಥೆಗಳ್ಗೆ ನಿತ್ತು ತೋರಿ. ಇಂಥವರ ಅಮಿಷಕ್ಕೆ ಬಲಿಯಾಗಿ ನೀವು ಹಣ ಪಡ್ದಿದೀರ ಅಂತಾ ನಿಮ್ಮ ಪ್ರಿಂಟ್ ಮೀಡಿಯಾ ಮ್ಯಾನೇಜ್ ಮೆಂಟ್ ಗೆ ಗೊತ್ತಾದ್ರೆ ನಿಮ್ ಕೆಲ್ಸಗಳಿಗೂ ಕಲ್ಲು ಬೀಳತ್ತೆ. ನಿಮ್ ಸಂಸ್ಥೆಗಳಿಗೂ ಕೆಟ್ಟ ಹೆಸ್ರು ಬರತ್ತೆ. ಇದಕ್ಕಿಂತಾ ಪ್ರಾಮಾಣಿಕವಾಗಿ ಬರೆದ್ರೆ ಒಳ್ಳೇದಲ್ವಾ?

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top