ಸಾಧನೆ

ಈ ನಿವೃತ್ತ ಸೈನಿಕ ತಮ್ಮ ನಿವೃತ್ತಿ ಸಮಯದಲ್ಲಿ ತನಗೆ ಬಂದಿದ್ದ ಸಂಪೂರ್ಣ ಹಣವನ್ನು ಈ ಕಾರ್ಯಕ್ಕಾಗಿ ದಾನ ಮಾಡಿದ್ದಾನೆ:

ಈ ನಿವೃತ್ತ ಸೈನಿಕ ತಮ್ಮ ನಿವೃತ್ತಿ ಸಮಯದಲ್ಲಿ ತನಗೆ ಬಂದಿದ್ದ ಸಂಪೂರ್ಣ ಹಣವನ್ನು ಈ ಕಾರ್ಯಕ್ಕಾಗಿ ದಾನ ಮಾಡಿದ್ದಾನೆ:

 

 

ಇತ್ತೀಚಿನ ದಿನಗಳಲ್ಲಿ ನಾವು ಸಿನಿಕತನದಿಂದ ಸುತ್ತುವರಿದಿದ್ದೇವೆ ಮತ್ತು ಹೆಚ್ಚಿನವರು ನಮ್ಮ ನೆರೆಹೊರೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಸಮಾಜವನ್ನು ಉತ್ತಮಗೊಳಿಸಲು ತಮ್ಮ ಜೀವವನ್ನು ಸಮರ್ಪಿಸಿದ ಜನರನ್ನು ನೋಡಿದಾಗ ನಾವು ಆಶ್ಚರ್ಯಚಕಿತರಾಗುತ್ತೇವೆ.ನಿವೃತ್ತ ಸೈನಿಕ ಭಗೂರಾಮ್ ಮೌರ್ಯ ಅವರ ಕಥೆಯನ್ನು ನಾವು ಹೇಳುತ್ತಿದ್ದೇವೆ. ಭಗೂರಾಮ್ ಮೌರ್ಯ ಅವರು ಹಳ್ಳಿಯ ರಸ್ತೆ ನಿರ್ಮಾಣಕ್ಕಾಗಿ ತಮ್ಮ ಭವಿಷ್ಯ ನಿಧಿಯನ್ನು ದೇಣಿಗೆಯಾಗಿ ನೀಡಿದ್ದಾರೆ.

 

 

ವಾರಣಾಸಿಯಿಂದ 20 ಕಿ.ಮೀ ದೂರದಲ್ಲಿನ, ಝಾನ್ಸ ಜಿಲ್ಲೆಯ, ರಾಮೇಶ್ವರ ಗ್ರಾಮದ ಭಗೂರಾಮ್ ಮೌರ್ಯ ಎಂಬ ಮಾಜಿ ಸೈನಿಕ ತನ್ನ ಹಳ್ಳಿಯ ರಸ್ತೆ ನಿರ್ಮಾಣಕ್ಕಾಗಿ
ತಾವು ನಿವೃತ್ತಿಯಾದಾಗ ಬಂದಿದ್ದ ತಮ್ಮ ಭವಿಷ್ಯ ನಿಧಿಯನ್ನು ದೇಣಿಗೆಯಾಗಿ ನೀಡಿ ಸುದ್ದಿಯಾಗಿದ್ದಾರೆ.. ಮೌರ್ಯ ಕ್ಯಾಪ್ಟನ್ ಆಗಿ ನಿವೃತ್ತರಾದರು, ಅವರು ಭವಿಷ್ಯ ನಿಧಿಯಾಗಿ ಸ್ವೀಕರಿಸಿದ ನಾಲ್ಕು ಲಕ್ಷ ಹಣವನ್ನು ತಮ್ಮ ಗ್ರಾಮದ 1 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ದಾನ ಮಾಡಿದ್ದಾರೆ.

 

 

ಹೀಗೆ ಮಾಡಲು ಅವರಿಗೆ ಪ್ರೇರೇಪಿಸಿದ್ದೇನು?

ಮೌರ್ಯ ಅವರುತಮ್ಮ ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಚಲಿಸಬೇಕಾಗಿತ್ತು ಆಗ ಅವರಿಗೆ ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಆ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡುವುದು ಒಂದು ರೀತಿಯ ದೊಡ್ಡ ಸವಾಲಾಗಿತ್ತು. ಮೌರ್ಯ ಅವರು ತಮ್ಮ ಹಳ್ಳಿಗೆ ತಾನು ಅತ್ಯಮೂಲ್ಯವಾದದ್ದನ್ನು ಏನಾದರೂ ಮಾಡಬೇಕೆಂದು ನಿರ್ಧರಿಸಿ ತಮ್ಮ ಸಂಪೂರ್ಣ ಭವಿಷ್ಯ ನಿಧಿಯನ್ನು ಊರಿನ ರಸ್ತೆಯ ನಿರ್ಮಾಣಕ್ಕಾಗಿ ನೀಡಿದರು.

 

 

ಈಗ ದ್ವಿಚಕ್ರವಾಹನವಲ್ಲದೆ, ನಾಲ್ಕು-ಚಕ್ರದ ವಾಹನಗಳು, ಟ್ರಾಕ್ಟರುಗಳೂ ಸಹ ಈ ರಸ್ತೆಯ ಮೇಲೆ ಪ್ರಯಾಣಿಸಬಹುದು.ಉತ್ತಮ ರಸ್ತೆಯನ್ನು ನಿರ್ಮಿಸಲು ಏಳು ತಿಂಗಳುಗಳ ಸಮಯವನ್ನು ತೆಗೆದುಕೊಂಡಿತು. ಮೌರ್ಯ ಅವರು ತಮ್ಮ ಗ್ರಾಮಸ್ಥರಿಗೆ ಒಳ್ಳೆಯ ಗುಣಮಟ್ಟದ ರಸ್ತೆಯನ್ನು ವಾಸ್ತವಕ್ಕೆ ತರುವುದರಲ್ಲಿ ಯಶಸ್ವಿಯಾದರು.
ಇದಕ್ಕೂ ಮುಂಚೆ, ರಾಮೇಶ್ವರ ಗ್ರಾಮಕ್ಕೆ ಉತ್ತಮ ಸಂಪರ್ಕ ರಸ್ತೆ ಇರಲಿಲ್ಲ.ಪರಿಣಾಮವಾಗಿ, ಅಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು ರೋಗಿಗಳು ಮತ್ತು ಗಾಯಗೊಂಡವರು ಹತ್ತಿರದ ಆಸ್ಪತ್ರೆಯನ್ನು ತಲುಪಲು ಬಹಳ ಕಷ್ಟ ಪಡಬೇಕಾಗಿತ್ತು. ರಸ್ತೆಯ ನಿರ್ಮಾಣವು ಆ ಊರಿನ ಜನರ ಜೀವನವನ್ನು ಬದಲಾಯಿಸಿದೆ.

 

 

ಭಗೂರಾಮ್ ಮೌರ್ಯ ಅವರು ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರಣಬ್ ಮುಖರ್ಜಿ ಅವರಿಂದ ತಮ್ಮ ಪ್ರಶಂಸನೀಯ ಸೇವೆಗಾಗಿ ಎರಡು ಬಾರಿ ರಾಷ್ಟ್ರಪತಿ ಪದಕವನ್ನು ಪಡೆದಿದ್ದಾರೆ.ಇದಲ್ಲದೇ ಇವರು ಹಲವಾರು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.ಸಮಾಜವನ್ನು ಉತ್ತಮಗೊಳಿಸುವಲ್ಲಿ ಇವರು ಎಲ್ಲರಿಗು ಸ್ಫೂರ್ತಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top