ಧರ್ಮ

ಸೂರ್ಯನು ಪಥ ಬದಲಿಸುವ ಮಕರ ಸಂಕ್ರಾಂತಿ ಹಬ್ಬದ ದಿನ ಈ 4 ಕೆಲಸಗಳನ್ನು ಅಪ್ಪಿತಪ್ಪಿನೂ ಮಾಡ್ಬೇಡಿ

ಸೂರ್ಯನು ಪಥ ಬದಲಿಸುವ ಮಕರ ಸಂಕ್ರಾಂತಿ ಹಬ್ಬದ ದಿನ ಈ 4 ಕೆಲಸಗಳನ್ನು ಅಪ್ಪಿತಪ್ಪಿನೂ ಮಾಡ್ಬೇಡಿ

ಮಕರ ಸಂಕ್ರಾಂತಿಯ ದಿನ, ಸೂರ್ಯನು ಪಥ ಬದಲಿಸುವ ಈ ದಿನ ಈ ನಾಲ್ಕು ಕೆಲಸಗಳನ್ನು ಮಾಡಬಾರದಂತೆ.

ಈ ವರ್ಷ 2018 ಜನವರಿ ಹದಿನಾಲ್ಕರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು.ಈ ಬಾರಿ ಎರಡು ದಿನ ಮಕರ ಸಂಕ್ರಾಂತಿ ಮುಹೂರ್ತ ಬಂದಿದೆ. ಜನವರಿ ಹದಿನಾಲ್ಕನೇ ತಾರೀಖಿನಂದು ಮಧ್ಯಾಹ್ನ ಒಂದು ಗಂಟೆ ಐವತ್ತು ನಿಮಿಷಕ್ಕೆ ಸೂರ್ಯನು ಧನಸ್ಸು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಜನವರಿ ಹದಿನೈದನೇ ತಾರೀಖಿನಂದು ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಸಂಕ್ರಾಂತಿಯ ಶುಭ ಮೂರ್ತ ಹದಿನೈದನೇ ತಾರೀಖು ಬೆಳಗ್ಗೆ ಐದು ಗ೦ಟೆ ಹನ್ನೊಂದು ನಿಮಿಷಕ್ಕೆ ಕೊನೆಗೊಳ್ಳಲಿದೆ. ಇದು ಸಂಕ್ರಾಂತಿಯ ಹಬ್ಬದ ಶುಭ ಮುಹೂರ್ತವಾಗಿದೆ.

 

 

ಸಂಕ್ರಾಂತಿ ಹಬ್ಬದ ಒಂದು ತಿಂಗಳು ಮುನ್ನ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶ ಮಾಡಿರುತ್ತಾನೆ. ಸಂಕ್ರಾಂತಿಗೂ ಮುನ್ನ ಒಂದು ತಿಂಗಳು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಆ ಮಾಸವನ್ನು ಧನುರ್ಮಾಸ,ಶೂನ್ಯಮಾಸ ಅಥವಾ ಮಲಮಾಸ,ಖಾರಮಾಸ ಎಂದು ಸಹ ಕರೆಯಲಾಗುತ್ತದೆ.

ಸಂಕ್ರಾಂತಿ ಹಬ್ಬದ ನಂತರ ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ತನ್ನ ಪಥವನ್ನು ಬದಲಿಸುತ್ತಾನೆ. ಮತ್ತು ಸೂರ್ಯನ ಮಗನಾದ ಶನಿಯ ರಾಶಿಯಾದ ಮಕರ ರಾಶಿಗೆ ಸೂರ್ಯನ ಪ್ರವೇಶ ಮಾಡುತ್ತಾನೆ. ಸಂಕ್ರಾಂತಿಯ ನಂತರ ಶುಭ ಮುಹೂರ್ತಗಳು ಶುರುವಾಗಲಿವೆ. ಮಂಗಳ ಕಾರ್ಯಗಳನ್ನು ಮಾಡಲು ಇದನ್ನು ಶುಭ ಸಮಯವೆಂದು ಪರಿಗಣಿಸಲಾಗಿದೆ.

ಮಕರ ಸಂಕ್ರಾಂತಿ ಹಬ್ಬದ ದಿನ ಸ್ನಾನ, ದಾನ, ಜಪ, ತಪ ಮತ್ತು ಹಬ್ಬದ ಆಚರಣೆಗೆ ಮಹತ್ವ ನೀಡಲಾಗುವುದು. ಈ ದಿನ ಮಾಡಿದ ದಾನ ಎರಡು ಪಟ್ಟಾಗಿ ಮರಳಿ ತಮಗೆ ದೊರೆಯಲಿದೆ ಎಂಬ ನಂಬಿಕೆಯಿದೆ.ಸಂಕ್ರಾಂತಿಯ ದಿನ ತುಪ್ಪ, ಎಳ್ಳು ,ಕಂಬಳಿ ಮತ್ತು ಕಿಚಡಿಯನ್ನು ದಾನ ಮಾಡಬೇಕು.

ಮಕರ ಸಂಕ್ರಾಂತಿಯಂದು ಕೆಲವು ಕೆಲಸಗಳನ್ನು ಮಾಡಬಾರದು.

ಕೂದಲು ಕತ್ತರಿಸುವುದು ಹಾಗೂ ಗಡ್ಡ ತೆಗೆಯುವುದನ್ನು ಮಾಡಬಾರದು.

ಈ ದಿನ ಕಹಿಯನ್ನು ಬೇರೆಯವರಿಗೆ ಕೊಡಬಾರದು ಹಾಗೆ ಕಹಿಯನ್ನು ತಾವು ತಿನ್ನಬಾರದಂತೆ.

ಸಂಕ್ರಾಂತಿ ಹಬ್ಬದ ದಿನ ಮರೆತು ಕೂಡ ಮರಗಳನ್ನು ಮತ್ತು ಗಿಡಗಳನ್ನು ಕತ್ತರಿಸಬಾರದು.

ಮಾಂಸ ಮತ್ತು ಮದ್ಯವನ್ನು ಸಂಕ್ರಾಂತಿ ಹಬ್ಬದ ದಿನ ಸೇವಿಸಬಾರದು. ಕಿಚಡಿ ಅಥವಾ ಸಾತ್ವಿಕ ಆಹಾರವನ್ನು ಸೇವಿಸಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top