ಧರ್ಮ

ಶಿಖಂಡಿ ನೇತೃತ್ವದ ಸೇನೆ ಯುದ್ಧ ಮಾಡಲು ಮುಂದಾಗಲು ಭೀಷ್ಮರು ( ಬಾಣಗಳ) ಶರ ಮಂಚದಲ್ಲಿ ಮಲಗಿದರು , ಯಾರಿ ಶಿಖಂಡಿ ಅವಳಿಗೇಕೆ ಭೀಷ್ಮರ ಮೇಲೆ ಅಷ್ಟು ಕೋಪ ?

ಶಿಖಂಡಿ ನೇತೃತ್ವದ ಸೇನೆ ಯುದ್ಧ ಮಾಡಲು ಮುಂದಾಗಲು ಭೀಷ್ಮರು ( ಬಾಣಗಳ) ಶರ ಮಂಚದಲ್ಲಿ ಮಲಗಿದರು , ಯಾರಿ ಶಿಖಂಡಿ ಅವಳಿಗೇಕೆ ಭೀಷ್ಮರ ಮೇಲೆ ಅಷ್ಟು ಕೋಪ ?

ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮರು (ಬಾಣಗಳ) ಶರ ಮಂಚದಲ್ಲಿ.

ಸೇನಾ ನಾಯಕರಾಗಿರುವ ಪಿತಾಮಹಾ ಭೀಷ್ಮರು ದೃಷ್ಟದ್ಯುಮ್ನನೊಂದಿಗೆ ಯುದ್ಧವನ್ನು ಆರಂಭಿಸಿದರು. ಬೇರೆ ಬೇರೆ ಜನರು ಬೇರೆ ರೀತಿಯಲ್ಲಿ ಯುದ್ಧವನ್ನು ನಡೆಸಿದರು. ಖಡ್ಗಗಳ ಹೊಡೆತಕ್ಕೆ ಕಿಡಿಗಳು ಎದ್ದು ಬರುತ್ತಿದ್ದವು. ಧನುಸ್ಸಿನ ಠೇಂಕಾರ ಅವಿರತವಾಗಿ ಕೇಳಿ ಬರುತ್ತಿತ್ತು. ಅರ್ಜುನನು ಭೀಷ್ಮನನ್ನು ಭೀಮಸೇನನು ದುರ್ಯೋಧನನನ್ನು ಸಾತ್ಯಕಿಯು ಕೃತವರ್ಮನನ್ನು ಎದುರಿಸಿದರು.ಯುಧಿಷ್ಠಿರ, ಶಲ್ಯ, ನಕುಲ, ದುಶ್ಯಾಸನ, ಉತ್ತಮೌಜನು ಕೃಪಾಚಾರ್ಯರೊಂದಿಗೆ ಯುದ್ಧ ಮಾಡಿದರು.

 

 

ಯುದ್ಧದ ಮಧ್ಯೆ ರಣಘೋಷ ವಾದ್ಯ ಘೋಷ ನಡೆದೇ ಇತ್ತು. ಆನೆಗಳ ಚೀತ್ಕಾರ, ಕುದುರೆಗಳ ಹೇಷಾರವ, ಸೈನಿಕರ ಕೂಗಾಟ ಕೇಳಿ ಬರುತ್ತಿತ್ತು. ಭೀಷ್ಮನು ಪ್ರತಿದಿನವೂ ಹತ್ತು ಸಾವಿರ ಜನರನ್ನು ಆಹುತಿ ತೆಗೆದುಕೊಳ್ಳ ತೊಡಗಿದರು. ಮೊದಲ ದಿನದಲ್ಲಿಯೇ ಉತ್ತರ ಕುಮಾರನು ಶಲ್ಯನಿಂದ ಹತನಾದನು. ಮುಂದಿನ ದಿನಗಳಲ್ಲಿ ಬೇರೆ ಬೇರೆ ರಚನೆಯಲ್ಲಿ ಕೌರವರ ಸೈನ್ಯ ಸಜ್ಜಾಗಿ ಬಂದಿತು. ಪಾಂಡವರು ಸಹ ಅದಕ್ಕೆ ಉತ್ತರವಾಗಿ ಸರಿಯಾದ ವ್ಯೂಹ ರಚನೆ ಮಾಡಿದರು.

ಭೀಮನು ಆಗಲೇ ಧೃತರಾಷ್ಟ್ರನ ಎಂಟು ಮಕ್ಕಳನ್ನು ಕೊಂದಿದ್ದನು. ಪಾಂಡವರು ಮಕರ ವ್ಯೂಹ ರಚಿಸಿದಾಗ ಕೌರವರು ಕ್ರೌ0ಚವ್ಯೂಹ ರಚಿಸಿದರು. ಭೀಮಾರ್ಜುನರು ದಿನವಿಡೀ ಜನರನ್ನು ನಾಶಪಡಿಸಿದರು. ಎಂಟು ದಿನಗಳಲ್ಲಿ ಹದಿನೇಳು ಕೌರವರು ಹತರಾದರು. ಕ್ರೌಂಚರುಣ, ಗುರುಡ, ಅರ್ಧಚಂದ್ರ, ವ್ಯಾಲ, ಮಕರ, ಸೂಚಿಮುಖ, ಮಂಡಲವಜ್ರ, ಶೃಂಗಾಟಕ ಮುಂತಾದ ವ್ಯೂಹಗಳು ರಚನೆ ಆದವು. ಈ ರೀತಿಯಲ್ಲಿ ಹತ್ತು ದಿನಗಳ ಕಾಲ ಭೀಷ್ಮರು ಸೇನಾ ಪಥ್ಯವನ್ನು ನಿರ್ವಹಿಸಿದರು.

ಕುರುಕ್ಷೇತ್ರ ರಣಭೂಮಿಯಲ್ಲಿ ಮುರಿದ ರಥ, ಬಾಣಬಿಲ್ಲು ಸತ್ತವರ ಹೆಣ, ಪ್ರಾಣಿಗಳು, ಆನೆಗಳು ಎಲ್ಲವೂ ಸೇರಿ ರಕ್ತದ ನದಿಯೇ ಹರಿಯಿತು. ಪಾಂಡವರಿಗೆ ಭೀಷ್ಮನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಕೃಷ್ಣನೊಂದಿಗೆ ವಿಚಾರ ವಿನಿಮಯ ನಡೆಸಿದರು. ಆನಂತರ ಭೀಷ್ಮನಿದ್ದ ಪಾಳಯಕ್ಕೆ ಬಂದು ಭೀಷ್ಮರಿಗೆ ವಂದಿಸಿ “ ಅಜ್ಜ, ನಾವು ಎಂದಿನಿಂದಲೂ ಅನ್ಯಾಯ ಆನೀತಿಗಳನ್ನೇ ಕಂಡಿದ್ದೇವೆ. ನಮಗೆ ಜಯ ಸಿಗಬೇಕಲ್ಲವೇ ? ಆದುದರಿಂದ ನಿಮ್ಮನ್ನು ಯುದ್ಧದಿಂದ ನಿವಾರಣೆ ಮಾಡುವ ವಿಧಾನವನ್ನು ನೀವೇ ತಿಳಿಸಿರಿ ಎಂದು ಪ್ರಾರ್ಥಿಸಿದರು. ಭೀಷ್ಮರು ಕೃಷ್ಣನಿಗೆ ತಿಳಿಯದ ವಿಷಯವು ಯಾವುದಿದೆ ? ಇರಲಿ. ನೀನು ನೇರವಾಗಿ ಬಂದು ಕೇಳಿದ್ದಕ್ಕೆ ನನಗೆ ಸಂತಸವಾಗಿದೆ. ನಾಳಿನ ಯುದ್ಧದಲ್ಲಿ ಶಿಖಂಡಿಯನ್ನು ಮುಂದೆ ಮಾಡಿ ಯುದ್ಧಕ್ಕೆ ಬನ್ನಿರಿ , ಆಗ ನಾನು ಯುದ್ಧದಿಂದಲೇ ದೂರ ನಿರ್ಗಮಿಸುತ್ತೇನೆ ಎಂದು ಭೀಷ್ಮನು ಹೇಳಿದನು. ಹೀಗೆ ಶಸ್ತ್ರಸನ್ಯಾಸ ಮಾಡಿದ ನನಗೆ ಅರ್ಜುನನು ಆಕ್ರಮಿಸಲಿ ಎಂದು ತನ್ನ ಯುದ್ದ ವಿರಾಮದ ಬಗೆಯನ್ನು ತಿಳಿಸಿದನು.

ಶಿಖಂಡಿ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳಬೇಕಂದ್ರೆ ಈ ಲಿಂಕ್ ಕ್ಲಿಕ್ ಮಾಡಿ: 

 

ಆ ದಿನದ ಯುದ್ಧದಲ್ಲಿ ಭೀಷ್ಮನು ಒಂದು ಸಾವಿರ ಆನೆ, ಐದು ಸಾವಿರ ರಥಿಕರು ಹತ್ತು ಸಾವಿರ ಕುದುರೆ ಸವಾರರು, ಹದಿನಾರು ಸಾವಿರ ಪದಾತಿಗಳನ್ನು ಸಂಹರಿಸಿದನು. ಪಾಂಡವ ಸೇನೆ ದಿಕ್ಕಾಪಾಲಾಗಿ ಹೋದರೆ ಕೌರವರು ವಿಜಯ ತಮಗೆ ಎಂದು ತಿಳಿದಿದ್ದರು. ಅರ್ಜುನನ ರಥ ಬೇರೆ ಕಡೆಗಿತ್ತು. ಅದನ್ನು ಕೃಷ್ಣನು ಭೀಷ್ಮನ ಎದುರಿಗೆ ತಂದನು. ಅರ್ಜುನ ಕೃಷ್ಣರನ್ನು ಕಂಡ ಪಾಂಡವ ಸೇನೆ ಮತ್ತೆ ಆಕ್ರಮಣವನ್ನು ಆರಂಭಿಸಿತು. ಭೀಷ್ಮಾರ್ಜುನರು ಜನರು ತಮ್ಮ ಬಿಲ್ವಿದ್ಯಾ ಕೌಶಲದಿಂದ ಮೆರೆದರು.ಆಗ ಸ೦ಜೆಯಾಗತೊಡಗಿತ್ತು.
ಆಗಲೇ ಶಿಖಂಡಿಯನ್ನು ಎದುರಿಗೆ ತಂದು ಪಾಂಡವರು ಯುದ್ಧವನ್ನು ಮುಂದುವರಿಸಿದಾಗ ಭೀಷ್ಮನು ಶಸ್ತ್ರಸನ್ಯಾಸ ಮಾಡಿ ಸುಮ್ಮನೆ ನಿಂತನು. ಅರ್ಜುನನ ಅನೇಕ ಬಾಣಗಳು ಭೀಷ್ಮನನ್ನು ಚುಚ್ಚಿದವು. ಭೀಷ್ಮನು ಶರಗಳ ಮಂಚದ ಮೇಲೆ ಓರಗಿದನು. ಭೀಷ್ಮರು ಬಿದ್ದಿದ್ದನ್ನು ಕಂಡ ಕುರುಸೇನೆ ಓಡಿ ಹೋದಾಗ ಅಂದಿನ ಯುದ್ಧ ಮುಗಿದಿತ್ತು. ಬಿದ್ದ ಭೀಷ್ಮನ ಎದುರಿಗೆ ಪಾಂಡವರು ಕೈಮುಗಿದು ನಿಂತರು.

ಇಚ್ಛಾಮರಣ ಶಕ್ತಿಯನ್ನು ಭೀಷ್ಮನು ತಂದೆ ಶಂತುವಿನಿಂದ ಪಡೆದ ಕಾರಣವಾಗಿ ಮುಂದೆ ಉತ್ತರಾಯಣ ಕಾಲ ಬರುವವರೆಗೂ ಶರಮಂಚದಲ್ಲಿಯೇ ಉಳಿಯಲು ನಿರ್ಧರಿಸಿದನು. ಅವನ ಮೈಯಿಂದ ರಕ್ತ ಹರಿಯುತ್ತಿತ್ತು. ಭೀಷ್ಮನಿಗೆ ತಲೆಗೆ ಆಧಾರವಿಲ್ಲದಾದಾಗ ಅರ್ಜುನನು ಜೋಡಿ ಬಾಣಗಳಿಂದ ತಲೆಗೆ ಕತ್ತರಿ ಹಾಕಿ ಆಧಾರ ಕಲ್ಪಿಸಿದನು. ಕೌರವರು ಮೃದುವಾದ ದಿಂಬುಗಳನ್ನು ತರಿಸಿದ್ದನ್ನು ಭೀಷ್ಮರು ನಿರಾಕರಿಸಿದರು.

ಪವಿತ್ರವಾದ ನೀರು ಬೇಕೆಂದಾಗ ಕೌರವರು ಗಂಗಾಜಲವನ್ನು ತರಲು ಓಡಿದರು. ಶೀತಲ ಸುವಾಸನಾ ದ್ರವ್ಯ ಸಹಿತವಾದ ನೀರನ್ನು ದುರ್ಯೋಧನ ತರಿಸಿದನು. ಆದರೆ ಪಾರ್ಥನು ಪರ್ಜನ್ಯಾಸ್ತ್ರದಿಂದ ಅಲ್ಲಿಯೇ ಬಾಣ ಹೊಡೆದು ಭೂಮಿಯಿಂದ ನೀರು ಚಿಮ್ಮಿಸಿ ಅಜ್ಜನನ್ನು ತೃಪ್ತಗೊಳಿಸಿದನು. ಭೀಷ್ಮರು ದುರ್ಯೋಧನನಿಗೆ ಇಷ್ಟು ದಿವಸ ಯುದ್ಧ ಮಾಡಿದ್ದು ಸಾಕು, ಇನ್ನಾದರೂ ಸಂಧಿ ಮಾಡಿಕೋ ಎಂದರು ಆದರೆ ಅವನು ಒಪ್ಪಲಿಲ್ಲ ಎಲ್ಲರೂ ಭೀಷ್ಮರನ್ನು ಕೊಂಡಾಡುತ್ತಾ ಸಾಗಿದರು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top