ಸಿನಿಮಾ

ಮೂವತ್ತು ವರ್ಷ ನಾಟಕ ಪ್ರದರ್ಶನಗೊಂಡಿದ್ದು ಸಿದ್ದಿಪುರುಷ ವಿಶ್ವರಾಧ್ಯರ ಪವಾಡಗಳ ಚರಿತೆ ಸಿನಿಮಾ ರೂಪದಲ್ಲಿ ಬರಲು ಸಜ್ಜಾಗಿದೆ

ಮೂವತ್ತು ವರ್ಷ ನಾಟಕ ಪ್ರದರ್ಶನಗೊಂಡಿದ್ದು ಸಿದ್ದಿಪುರುಷ ವಿಶ್ವರಾಧ್ಯರ ಪವಾಡಗಳ ಚರಿತೆ ಸಿನಿಮಾ ರೂಪದಲ್ಲಿ ಬರಲು ಸಜ್ಜಾಗಿದೆ

ಸಿದ್ದಿಪುರುಷ ವಿಶ್ವರಾಧ್ಯರ ಪವಾಡಗಳ ಚರಿತೆ

ಭಕ್ತಿ ಪ್ರಧಾನ ‘ಅಬ್ಬೆ ತುಮಕೂರ ಸಿದ್ದಪುರುಷ ವಿಶ್ವಾರಾಧ್ಯರು’ ಚಿತ್ರವು ಸದ್ದಿಲ್ಲದೆ ಶಹಪುರ, ಯಾದಗಿರಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಬ್ಬೆ ತುಮಕೂರ ಎನ್ನುವ ಸ್ಥಳವು ಯಾದಗಿರಿ ಜಿಲ್ಲೆಯಲ್ಲಿದ್ದು, ಎಲ್ಲಿಯೋ ಬೆಳದು ನಿಷ್ಪತ್ತಗೊಂಡ ಮಹಾತ್ಮರು ಅಂತಿಮ ದಿನಗಳನ್ನು ಇದೇ ಜಾಗದಲ್ಲಿ ಕಳೆದರಿಂದ ಅದು ಅವಿಮುಕ್ತ ಕ್ಷೇತ್ರವಾಗಿ ಕರ್ನಾಟಕ, ಮಹರಾಷ್ಟ್ರಗಳಿಂದ ಭಕ್ತಾದಿಗಳು ಬರುತ್ತಾರಂತೆ. ಭಕ್ತಿ ಚಿತ್ರಗಳಿಗೆ ಹೆಸರಾದ ಸಾಯಿಪ್ರಕಾಶ್‍ರವರು ನಿರ್ದೇಶನ ಮಾಡಿದ್ದಾರೆ.

 

 

ವಿಶ್ವಾರಾಧ್ಯರ ಪಾತ್ರದಲ್ಲಿ ರಾಮ್‍ಕುಮಾರ್ ಗ್ಯಾಪ್ ನಂತರ ನಟಿಸಿದ್ದಾರೆ. ಪತ್ನಿಯಾಗಿ ಶೃತಿ, ತಮ್ಮನಾಗಿ ಹರೀಶ್‍ರಾಜ್‍ಗೆ ಜೋಡಿಯಾಗಿ ದಿಶಾಪೂವಯ್ಯ ಉಳಿದಂತೆ ಸಾಧುಕೋಕಿಲ, ಕೀರ್ತಿರಾಜ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ರಮೇಶ್‍ಭಟ್, ಶ್ರೀನಿವಾಸಮೂರ್ತಿ, ಶಿವಕುಮಾರ್, ಬಾಲ ವಿಶ್ವಾರಾಧ್ಯರಾಗಿ ಮಾಸ್ಟರ್ ವಿಜಯ್‍ಕಿರಣ್, ಬಸವಲಿಂಗನಾಗಿ ಜಯಂತ್ ಸೇರಿದಂತೆ 75 ಕಲಾವಿದರು ಸಿನಿಮಾದಲ್ಲಿ ಕಾಣ ಸಿಕೊಂಡಿದ್ದಾರೆ. ಕತೆಗೆ ತಕ್ಕಂತೆ ಸನ್ನಿವೇಶಕ್ಕೆ ಅನುಗುಣವಾಗಿ ಜವಾರಿ ಬಾಷೆಯನ್ನು ಬಳಸಲಾಗಿದ್ದು, ಅದರ ಜವಬ್ದಾರಿಯನ್ನು ಸುಭಾಷ್‍ಚಂದ್ರಕವಲಗಿ ವಹಿಸಿಕೊಂಡಿದ್ದಾರೆ.

 

 

ಪವಾಡಪುರುಷರ ಕುರಿತು ಜಾನಪದಗೀತೆಗಳು, ಮೂವತ್ತು ವರ್ಷ ನಾಟಕ ಪ್ರದರ್ಶನಗೊಂಡಿದ್ದು, ಈಗ ಸಿನಿಮಾ ರೂಪದಲ್ಲಿ ಜನರಿಗೆ ತೋರಿಸಲು ಸಜ್ಜಾಗಿದೆ. ಸ್ವಾಮಿಗಳ ವಿದ್ಯಾಭ್ಯಾಸ, ಯೌವ್ವನ, ಮದುವೆ, ವೃದ್ದಾಪ್ಯ ಇವುಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರೀಕರಣ ಸಂದರ್ಭದಲ್ಲಿ ಸ್ವಾಮಿ ಅನುಗ್ರಹದಿಂದ ಮಳೆಗಾಲದಲ್ಲೂ ಸುಗಮವಾಗಿ ಎಲ್ಲಾ ಕೆಲಸಗಳು ನಡೆಯುತ್ತಿದ್ದವು ಅಂತ ನಿರ್ದೇಶಕರು ಹೇಳಿಕೊಂಡಿದ್ದ್ದಾರೆ. ಶ್ರೀಚಂದ್ರುರವರ ಸಾಹಿತ್ಯ, ಶ್ಲೋಕ ಸೇರಿದಂತೆ ಒಟ್ಟು 16 ಗೀತೆಗಳಿಗೆ ಬಿ.ಬಲರಾಮ್ ಸಂಗೀತ ಸಂಯೋಜಿಸಿದ್ದಾರೆ. ಕಳೆದ ಫಬ್ರವರಿ ಜಾತ್ರೆ ದಿನದಂದು ಮಹೂರ್ತ ಅಚರಿಸಿಕೊಂಡು, ಈ ಸಲದ ಜಾತ್ರೆ ಸಂದರ್ಭದಲ್ಲಿ ದರ್ಶನ ಪಡೆಯುವ ಭಕ್ತಾದಿಗಳಿಗೆ ಸಿನಿಮಾ ತೋರಿಸಲು ತಂಡವು ಯೋಜನೆ ಹಾಕಿಕೊಂಡಿದೆ. ಮಠಾಧೀಕ್ಷರಾದ ಶ್ರೀ ಶ್ರೀ ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳು ಮತ್ತು ವಿಶ್ವಗಂಗಾ ಗೆಳೆಯರ ಬಳಗವು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಸಾಯಿಪ್ರಕಾಶ್ ಅವರ 99ನೇ ನಿರ್ದೇಶನದ ಚಿತ್ರವಾಗಿರುವುದು ಮತ್ತೋಂದು ವಿಶೇಷವಂತೆ.

 

 

ನಂತರ ನಡೆದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗರೆಡ್ಡಿ, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶಾಸಕ ಮಾಲಿಕ್‍ರಡ್ಡಿ, ಪುನೀತ್‍ರಾಜ್‍ಕುಮಾರ್, ಜಗ್ಗೇಶ್, ಇತರರು ಹಾಜರಿದ್ದು ಚಿತ್ರಕ್ಕೆ ಶುಭಹಾರೈಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top