ಸಮಾಚಾರ

ತನ್ನ ಹೆತ್ತವರಿಗಾಗಿ ಧಾರವಾಡವೆಲ್ಲ ಹುಡುಕುತ್ತಿರುವ ಸ್ವೀಡನ್ ಲೇಡಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತನ್ನ ಹೆತ್ತವರಿಗಾಗಿ ಧಾರವಾಡವೆಲ್ಲ ಹುಡುಕುತ್ತಿರುವ ಸ್ವೀಡನ್ ಲೇಡಿ.

ಹೆತ್ತವರಿಗಾಗಿಅಲೆಯುತ್ತಿರುವ ಸ್ವೀಡನ್ ಲೇಡಿ…

ಎಷ್ಟೋ ಮಕ್ಕಳಿಗೆ ಅವರನ್ನು ಹೆತ್ತವರೇ ಬೇರೆ, ಸಾಕುವವರೇ ಬೇರೆ ಆಗಿರುತ್ತಾರೆ.ಆ ಮಕ್ಕಳಿಗೆ ತಮ್ಮನ್ನು ಸಾಕಿದವರು ತುಪ್ಪದನ್ನ ತಿನ್ನಿಸಿದರೂ, ತಮ್ಮ ಹೆತ್ತವರನ್ನು ನೋಡುವ ಹಂಬಲ ಇದ್ದೇ ಇರುತ್ತದೆ .ಅದಕ್ಕಾಗಿ ಸಾಗರದಾಚೆಗೆ ಸಾವಿರ ದಾರಿ ದಾಟಿ ಬರಲು ಸಿದ್ಧರಿರುತ್ತಾರೆ. ಈಗ ಇಂತಹದ್ದೇಒಂದು ಪ್ರಸಂಗ ನಡೆದಿದೆ.ಭಾರತ ದೇಶದ ಈ ಹೆಣ್ಣುಮಗಳು ಸ್ವೀಡನ್‍ನಿಂದ ಮತ್ತೆ ಭರತಭೂಮಿಗೆ ಬಂದಿದ್ದಾಳೆ.ತನ್ನ ಹೆತ್ತವರ ಹುಡುಕಾಟದಲ್ಲಿ ನಿರತಳಾಗಿದ್ದಾಳೆ.

ಸ್ವೀಡನ್‍ನಲ್ಲಿ ನರ್ಸ್‍ಆಗಿರುವ ಮಯ (32) ತನ್ನ ಹೆತ್ತವರನ್ನು ಭೇಟಿ ಮಾಡಲು ಸದ್ಯಕರುನಾಡಿಗೆ ಬಂದಿದ್ದಾಳೆ ಆಕೆ ಹೇಳುವ ಪ್ರಕಾರ, ‘ತಾನು ಧಾರವಾಡದಲ್ಲಿ 1984ರಲ್ಲಿ ಜನಿಸಿದೆ.1988ರ ಹುಬ್ಬಳ್ಳಿಯಲ್ಲಿ ಸರ್ಕಾರಿ ಶಿಶುಗೃಹವೊಂದರಲ್ಲಿ ಅನಾರೋಗ್ಯ ಸಮಸ್ಯೆಯಿಂದ ನಾನು ನರಳುತ್ತಿದ್ದಾಗ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಶೇಖರ್ ನರ್ಸಿಂಗ್ ಹೋಂಗೆ ದಾಖಲಿಸಿದರು. ಅನಾಥ ಮಗುವಾದ್ದರಿಂದ ನನ್ನನ್ನು ಇಲ್ಲಿನ  ಶಿಶು ನಿವಾಸ ಕೇಂದ್ರದಲ್ಲಿ ಇರಿಸಲಾಗಿತ್ತು. ನಂತರ ಶ್ವಾಸಕೋಶ ಸಮಸ್ಯೆ ಕಂಡುಬಂದಾಗ ಪುನಃ ಆಸ್ಪತ್ರೆಗೆ ದಾಖಲಿಸಿ, ನಂತರ ಬಸವನಗುಡಿಯ ಮಾತೃಛಾಯಾ ಶಿಶುವಿಹಾರಕ್ಕೆ ಕಳುಹಿಸಿದರು’ ಎಂಬುದು ಆಕೆಯ ಬಳಿಯಿರುವ ಮಾಹಿತಿ.

1990ರ ಮೇ 30ರಂದು ಸ್ವೀಡನ್ ದಂಪತಿ ಮಯಳನ್ನು ದತ್ತು ಪಡೆದು, ಸ್ವೀಡನ್‍ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಉತ್ತಮ ಶಿಕ್ಷಣ ನೀಡಿದ್ದಾರೆ. ಸದ್ಯ ಟೂರಿಸ್ಟ್‍ಗೈಡ್ ಮಥಾಯಿಸ್‍ ಅವರ ನಿವಾಸದಲ್ಲಿ ತಂಗಿರುವ ಮಯ, ತನ್ನ ಹೆತ್ತಮ್ಮನಿಗಾಗಿ ಹುಡುಕಾಟ ಮುಂದುವರೆಸಿದ್ದಾಳೆ.

ಇಂತಹ ಅದೆಷ್ಟೋ ಮಕ್ಕಳು ಭಾರತದಿಂದ ಹೊರ ದೇಶಗಳಿಗೆ ದತ್ತುಮಕ್ಕಳಾಗಿ ಹೋಗಿದ್ದಾರೆ. ಕೆಲವು ವಾಪಸ್ ಬಂದು ತಮ್ಮ ಹೆತ್ತವರ ಹುಡುಕಾಟದಲ್ಲಿ ಯಶಸ್ಸು ಕೂಡಾ ಕಂಡಿದ್ದಾರೆ .ಕೆಲವರು ವಿಫಲವಾಗಿ ವಪಸ್ ಹೋಗಿರುವುದೂ ಉಂಟು .

ಅದೇನೇ ಇರಲಿ ಮಯಅವರ ಹೆತ್ತವರು ಆಕೆಗೆ ಆದಷ್ಟು ಬೇಗ ಸಿಗಲಿ ಎಂದು ನಾವೆಲ್ಲರೂ ಹಾರೈಸೋಣ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top