ಸಾಧನೆ

ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ತನ್ನ ಆಭರಣವನ್ನೇ ಮಾರಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕಿ

ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ತನ್ನ ಆಭರಣವನ್ನೇ ಮಾರಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಕಿ

ಶಿಕ್ಷಕ ವೃತ್ತಿ ಬಹಳ ಶ್ರೇಷ್ಠವಾದುದು ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿ ತೋರುವ ದೇವರಿದ್ದಂತೆ. ನಿತ್ಯ ಮಕ್ಕಳಿಗೆ ಸಂಸ್ಕಾರ, ಜ್ಞಾನ, ಮಾನವೀಯ ಮೌಲ್ಯಗಳನ್ನು ಧಾರೆಯೆರೆಯುವ ಮಾರ್ಗದರ್ಶಕರಾಗಿ ಕೈ ಮರದಂತೆ ಕೆಲಸ ಮಾಡುವ ಕಾಯಕ ಶಿಕ್ಷಕರದ್ದಾಗಿದೆ. ಅತ್ಯಂತ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿಯಾಗಿದ್ದು,

ಕಲಿಸುವುದು ಕಷ್ಟಕರವೂ ದಣಿಸುವಂಥದ್ದೂ ಆಗಿರುವುದಾದರೂ, ಮಕ್ಕಳು ಕಲಿಯುವುದರ ಬಗ್ಗೆ ಉತ್ಸಾಹದಿಂದಿರುವುದನ್ನು ನೋಡುವುದು ಮತ್ತು ಅವರು ಮಾಡುತ್ತಿರುವ ಪ್ರಗತಿಯನ್ನು ನೋಡುವುದೇ, ನನಗೆ ಮುಂದುವರಿಯುವಂತೆ ಪ್ರಚೋದಿಸುತ್ತದೆ. ಇದರಂತೆ ಅವರ ವ್ಯಕ್ತಿತ್ವವನ್ನೂ ರೂಪಿಸುತ್ತಾನೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ತಮಿಳುನಾಡಿನ ಶಿಕ್ಷಕಿ ಅನ್ನಪೂರ್ಣ.

ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಮತ್ತು ತಮ್ಮ ಶಾಲೆಯಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುವುದಕ್ಕಾಗಿ ಹಣಕಾಸಿನ ಕೊರತೆ ಕಂಡು ಬಂದಾಗ ಇವರು ತಮ್ಮಲ್ಲಿನ ಆಭರಣವನ್ನು ಮಾರಿ ಬೇಕಾದ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.

  (Photo Courtesy: <a href="https://www.facebook.com/annapurna.mohan.1">Facebook</a>/Annapurna Mohan)

ಅನ್ನಪೂರ್ಣ ಮೋಹನ್ ಅವರು ಸರ್ಕಾರಿ ಶಾಲಾ ಶಿಕ್ಷಕಿ. ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಗಿಟ್ಟಿಸುವ ಅವಕಾಶವಿತ್ತಾದರೂ ಶಿಕ್ಷಕಿ ವೃತ್ತಿಯನ್ನು ಆರಿಸಿಕೊಂಡವರು. ತನ್ನಲ್ಲಿನ ಆಭರಣಗಳನ್ನು ಮಾರಾಟ ಮಾಡಿ ತನ್ನ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯವನ್ನು ಒದಗಿಸಿಕೊಟ್ಟವರು.

  (Photo Courtesy: <a href="https://www.facebook.com/annapurna.mohan.1">Facebook</a>/Annapurna Mohan)

ಇಂಗ್ಲೀಷ್ ಶಿಕ್ಷಕಿಯಾದ ಇವರು ವಿದ್ಯಾರ್ಥಿಗಳ ಇಂಗ್ಲೀಷ್ ಕಮ್ಯೂನಿಕೇಶನ್ ವೃದ್ಧಿಗೆ ಇನ್ನಿಲ್ಲದಂತೆ ಪರಿಶ್ರಮಪಡುತ್ತಿದ್ದಾರೆ. ಅದಕ್ಕಾಗಿ ಇಂಗ್ಲೀಷ್ ತರಬೇತಿ ಕ್ಲಾಸ್ ಆರಂಭಿಸಿದ್ದಾರೆ. ಉತ್ತಮ ಶಿಕ್ಷಣಕ್ಕಾಗಿ ಡಿಜಿಟಲ್ ಕ್ಲಾಸ್ ರೂಮ್ಗಳನ್ನು ಆರಂಭಿಸಿದ್ದಾರೆ. ತಮ್ಮ ವಿದ್ಯಾರ್ಥಿಗಳ ಎಲ್ಲಾ ಚಟುವಟಿಕೆಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುವ ಇವರಿಗೆ ಉತ್ತಮ ಸ್ಪಂದನೆಗಳು ಸಿಕ್ಕಿವೆ. ಕೆಲವರು ಬ್ಯಾಡ್ಮಿಂಟನ್ ರಾಕೆಟ್ ಸೇರಿದಂತೆ ಇತರ ಕ್ರೀಡಾ ಪರಿಕರಗಳನ್ನು, ವಿದ್ಯಾಭ್ಯಾಸ ಪರಿಕರಗಳನ್ನು, ಅನುದಾನಗಳನ್ನು ವಿದ್ಯಾರ್ಥಿಗಳಿಗಾಗಿ ಕಳುಹಿಸಿಕೊಡುತ್ತಿದ್ದಾರೆ.

  (Photo Courtesy: <a href="https://www.facebook.com/annapurna.mohan.1">Facebook</a>/Annapurna Mohan)

ಇದೀಗ ಇವರ ಸರ್ಕಾರಿ ಶಾಲೆ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳದು ನಿಂತಿದೆ. ಇಂಗ್ಲೀಷ್ ಕಮ್ಯೂನಿಕೇಶನ್ಗೆ ಇಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಡಿಜಿಟಲ್ ಕ್ಲಾಸ್ ರೂಮ್ ಇದೆ, ಎಲ್ಲಾ ಸೌಕರ್ಯಗಳೂ ಇದೆ. ಇದಕ್ಕೆಲ್ಲಾ ಅನ್ನಪೂರ್ಣ ಅವರ ತ್ಯಾಗ ಮತ್ತು ಪರಿಶ್ರಮವೇ ಕಾರಣ.

  (Photo Courtesy: <a href="https://www.facebook.com/annapurna.mohan.1">Facebook</a>/Annapurna Mohan)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top