ಸಮಾಚಾರ

ಟಿವಿ ರಿಮೋಟ್ ನೀಡದಿದ್ದಕ್ಕೆ ನೇಣು ಬಿಗಿದುಕೊಂಡು ಸತ್ತ ಗಂಡ , ಸಿಲ್ಲಿ ಸಿಲ್ಲಿಕಾರಣಕ್ಕೂ ಸಾಯುತ್ತಾರಲ್ಲಾ!

ಟಿವಿ ರಿಮೋಟ್ ನೀಡದಿದ್ದಕ್ಕೆ ನೇಣು ಬಿಗಿದುಕೊಂಡು ಸತ್ತ ಗಂಡ , ಸಿಲ್ಲಿ ಸಿಲ್ಲಿಕಾರಣಕ್ಕೂ ಸಾಯುತ್ತಾರಲ್ಲಾ!

ಸಿಲ್ಲಿ ಸಿಲ್ಲಿಕಾರಣಕ್ಕೂ ಸಾಯುತ್ತಾರಲ್ಲಾ!

ಎಂಥಾ ಕಾಲ ಬಂತಪ್ಪ… ಹಿಂದೆಲ್ಲ ನಮ್ಮ ಪೂರ್ವಿಕರುತಮ್ಮ ಶತಾಯುಷ್ಯವನ್ನು ನೋಡಿಯೇ ಮರಣಹೊಂದುತ್ತಿದ್ದರಂತೆ.ಖಾಯಿಲೆಗಳು ಸಹ ಅವರ ಬಳಿ ಸುಳಿಯುತ್ತಿರಲಿಲ್ಲವಂತೆ.ಇನ್ನು ಬದುಕಬೇಕೆಂಬ ಹಠ, ಛಲ ಅವರ ಬಳಿ ಹೆಚ್ಚೇ ಇದ್ದುದರಿಂದಅವರು ಸಾವನ್ನು ಸ್ಮರಿಸುತ್ತಲೂ ಇರಲಿಲ್ಲ ಎನಿಸುತ್ತದೆ.ಆದರೆಇಂದು ಸಣ್ಣಪುಟ್ಟ ವಿಚಾರಗಳಿಗೂ ‘ನಾನು ಸಾಯಬೇಕು’ ಎನ್ನುವ ಆಲೋಚನೆಗಳೇ ಸುಳಿಯುತ್ತವೆ. ಕಾಲ ಬದಲಾದಂತೆ ನಮ್ಮ ಆಲೋಚನೆಗಳು ಇನ್ನಷ್ಟು ದೀಘವಾಗುವ ಬದಲು ಸಂಕುಚಿತವಾಗುತ್ತಿರುವುದೇ ಶೋಚನೀಯ ಸಂಗತಿ.

 

 

ಇದಕ್ಕೆ ಪುರಾವೆಯಾಗಿ ಮೊನ್ನೆಯೊಂದು ಘಟನೆ ನಡೆದಿದೆ; ನಮ್ಮದೇ ಭೋಪಾಲ್‍ನಲ್ಲಿ . ಪತ್ನಿ ಟಿವಿ ರಿಮೋಟ್ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಇಲ್ಲಿನ ಅಶೋಕ ಗಾರ್ಡನ್ ನಿವಾಸಿ ಶಂಕರ್ ವಿಶ್ವಕರ್ಮ ಆತ್ಮಹತ್ಯೆ ಮಾಡಿಕೊಂಡಿರುವುದು ಸದ್ಯದ ಮನಸ್ಸುಗಳ ಲಘು ಸ್ಥಿತಿಯನ್ನು ವಿವರಿಸುತ್ತದೆ.

ಸಣ್ಣ ಹೋಟೆಲ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಂಕರ್, ತನ್ನ ಸಾವಿಗೆ ಇಂಥದ್ದೇ ಕಾರಣಎಂದೇನು ಪತ್ರ ಬರೆದಿಲ್ಲ. ಆದರೆ ಸಾವಿಗೆ ಮುನ್ನ ನಡೆದಘಟನೆ ರಿಮೋಟ್‍ ಕಾರಣವನ್ನ ಊಹಿಸಲು ಸಾಧ್ಯಮಾಡಿಸಿದೆ ಅಷ್ಟೆ.

ಶನಿವಾರರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಶಂಕರ್, ಕುಟುಂಬದವರೊಡನೆ ಊಟ ಮಾಡಿ ಬಳಿಕ ಟಿವಿ ನೋಡುತ್ತಿದ್ದ. ಈ ವೇಳೆ ಪತ್ನಿಯನ್ನು ಟಿವಿ ರಿಮೋಟ್ ನಿಡುವಂತೆ ಕೇಳಿದ್ದಾನೆ. ಆದರೆ ರಿಮೋಟ್ ನೀಡಲು ನಿರಾಕರಿಸಿದ ಪತ್ನಿ ಹೋಗಿ ವಿಶ್ರಾಂತಿ ಪಡೆಯುವಂತೆ ಪತಿ ಶಂಕರ್‍ಗೆ ಸೂಚಿಸಿದ್ದಾರೆ. ಇದಾದ ನಂತರ ಮತ್ತೊಂದು ಕೊಠಡಿಗೆ ತೆರಳಿದ ಶಂಕರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

 

ಮದ್ಯವ್ಯಸನಿಯಾಗಿದ್ದ ಶಂಕರ್, ಇತ್ತೀಚೆಗೆ ಬೇಡವಾದ ಸಣ್ಣಪುಟ್ಟ ವಿಚಾರಗಳಿಗೂ ಕೋಪ ಮಾಡಿಕೊಂಡು, ದೊಡ್ಡದಾಗಿ ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ಆತನ ಕುಟುಂಬದವರು ತನಿಖೆ ವೇಳೆ ತಿಳಿಸಿದ್ದಾರೆ. ಸದ್ಯ ಪ್ರಕರಣದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಈ ರೀತಿ ಸಣ್ಣ ವಿಚಾರಗಳಿಗೆ ಸಾವಿನ ಪರಿಹಾರ ಕಂಡುಕೊಳ್ಳುವ ಮನಃಸ್ಥಿತಿಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈ ಕುರಿತಾಗಿ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕೌನ್ಸೆಲಿಂಗ್ ನೀಡಬೇಕಾದ ತುರ್ತು ಅಗತ್ಯತೆ ಇಂದಿನ ಸಮಾಜಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top