ಸಿನಿಮಾ

ತಮಿಳು ನಟಿಯೊಬ್ಬಳು 6 ಯುವಕರಿಗೆ ಮದುವೆಯಾಗುವುದಾಗಿ ನಂಬಿಸಿ ಉಂಡೆ ನಾಮ ಹಚ್ಚಿದ್ದಾಳೆ

ಕೊಯಂಬತ್ತೂರು ಸಿಟಿ ಕ್ರೈಂ ಬ್ರಾಂಚ್ ಪೋಲಿಸ್ ನವರು ಮದುವೆಯಾಗುವುದಾಗಿ ನಂಬಿಸಿ ಎಂಜಿನಿಯರ್ ಒಬ್ಬರಿಗೆ 41 ಲಕ್ಷ ರೂಪಾಯಿ ಪಂಗನಾಮ ಎಳೆದಿದ್ದ ಯುವತಿ ,ಆಕೆಯ ಪೋಷಕರು ಮತ್ತು ಸಹೋದರನನ್ನು ಬಂಧಿಸಿದ್ದಾರೆ

ನಟಿಯೆಂದು ಹೇಳಿಕೊಳ್ಳುವ ಯುವತಿ ಆಕೆಯ ಕುಟುಂಬ 6 ವರರಿಂದ ಸುಮಾರು 1.42 ಕೋಟಿ ಮತ್ತು ಮದುವೆಯ ನಿಮಿತ್ತವಾಗಿ ₹ 20 ಲಕ್ಷ ಮೌಲ್ಯದ ಆಭರಣಗಳನ್ನು ಪಡೆದು
ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮುಖ್ಯ ಆರೋಪಿ ಪಿ.ಶ್ರುತಿ ಅಲಿಯಾಸ್ ಮೈಥಿಲಿ ವೆಂಕಟೇಶ್, ಅವರ ತಂದೆ ಪ್ರಸನ್ನ ವೆಂಕಟೇಶ್, ತಾಯಿ ಚಿತ್ರಾ ಅಲಿಯಾಸ್ ಅಮುತ ವೆಂಕಟೇಶ್ ಮತ್ತು ಸಹೋದರ ಸುಭಾಷ್ ಇವರನ್ನು ಪೊಲೀಸ್ ರು ಬಂಧಿಸಿದ್ದಾರೆ .

 

ಇವರ ಬಗ್ಗೆ ಕಂಪ್ಲೇಂಟ್ ನೀಡಿದ ವರ ಬಾಲಮುರುಗನ್ ಮತ್ತು ಶೃತಿ ಮ್ಯಾಟ್ರಿಮೋನಿ ಸೈಟ್ ಒಂದರಲ್ಲಿ ಪರಿಚಯವಾಗಿದ್ದಾರೆ ,ನಂತ್ರ 2017 ರ ಮೇ 24 ಮತ್ತು ಜನವರಿ 1, 2018 ಇದರ ನಡುವೆ ಹೊರದೇಶದಲ್ಲಿದ್ದ ಬಾಲಮುರುಗನ್ ಅವರಿಂದ 41 ಲಕ್ಷ ರೂ ಪೀಕಿಸಿದ್ದಾರೆ .

ಈ ಪ್ರಕರಣದ ಜೊತೆಗೆ ಹಲವಾರು ಬೇರೆ ಬೇರೆ ಪ್ರಕರಣಗಳು ಸಹ ಹೊರಬಿದ್ದಿವೆ

 

 

ನಾಮಕ್ಕಲ್ ನ ಸಾಫ್ಟ್ವೇರ್ ಇಂಜಿನಿಯರ್ ಸಂತೋಷ್ ಕುಮಾರ್ ಅವರಿಂದ ಫೆಬ್ರವರಿ 2016 ರಲ್ಲಿ ಶೃತಿ ಮತ್ತು ಅವರ ಪೋಷಕರು 43 ಲಕ್ಷ ಪೀಕಿಸಿದ್ದಾರೆ .
2016 ರ ಮಾರ್ಚ್ನಲ್ಲಿ ಚಿದಂಬರಂನ ಇ. ಅರುಲ್ ಕುಮಾರ್ ಗುರುರಾಜ ಅವರಿಂದ 20 ಲಕ್ಷ ಮೌಲ್ಯದ ಆಭರಣಗಳನ್ನು ಪಡೆದು ವಂಚಿಸಿದ್ದಾರೆ .
ನಾಮಕ್ಕಲ್ ನ ಶಶಿಕುಮಾರ್ ಎಂಬುವವರಿಂದ 22 ಲಕ್ಷ ಪೀಕಿಸಿದ್ದಾರೆ . ನಾಗಪಟ್ಟಿಣಂ ನ ಸುಂದರ್ ಅವರಿಂದ 15 ಲಕ್ಷ ಮತ್ತು ದಿಂಡಿಗಲ್ ನ ರಾಜ್ ಕಮಲ್ ಅವರಿಂದ 21 ಲಕ್ಷ ಪೀಕಿಸಿ ಮೋಸ ಮಾಡಿದ್ದಾರೆ ಎಂದು ತಿಳಿದುಬಂದಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top