ಸಮಾಚಾರ

ದೇಶದ ಎರಡನೇ ರಾಜಧಾನಿಯಾಗಿ ಬೆಂಗಳೂರು?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದೇಶದ ಎರಡನೇ ರಾಜಧಾನಿಯಾಗಿ ಬೆಂಗಳೂರು?

 

 

ಉದ್ಯಾನ ನಗರಿ ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡುವಂತೆ ರಾಜ್ಯ ಬೃಹತ್‌‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್‌‌.ವಿ.ದೇಶಪಾಂಡೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದೆ ವೇಳೆ ಬೆಂಗಳೂರನ್ನು ಎರಡನೇ ಆಡಳಿತ ಕೇಂದ್ರವಾಗಿ ಘೋಷಿಸುವ ಕುರಿತು ಕೇಂದ್ರಕ್ಕೆ ಪ್ರಸ್ತಾವ ರವಾನಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೂ ಕೂಡ ದೇಶಪಾಂಡೆ ಮನವಿ ಮಾಡಿಕೊಂಡಿದ್ದಾರೆ.

 

 

ದೇಶಕ್ಕೆ ತುರ್ತಾಗಿ ಎರಡನೇ ರಾಜಧಾನಿಯ ಅವಶ್ಯಕತೆ ಇದ್ದು ಎರಡನೇ ರಾಜಧಾನಿಯಾಗಲು ಬೆಂಗಳೂರಿಗಿಂತ ಅರ್ಹತೆ ಪಡೆದಿರುವ ನಗರ ಮತ್ತೊಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಭಾರತದ ಎಲ್ಲ ಭಾಷೆಗಳನ್ನೂ ಮಾತನಾಡುವ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ವೃತ್ತಿಪರರಿಂದ ಕೂಡಿದ ವಿಭಿನ್ನ ಜನಸಮುದಾಯ ಮತ್ತು ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದ ವಿಸ್ತೃತ ಕೈಗಾರಿಕೆಗಳನ್ನು ಬೆಂಗಳೂರು ಒಳಗೊಂಡಿದೆ ಅಲ್ಲದೆ ಬೆಂಗಳೂರು ನೈಸರ್ಗಿಕ ವಿಕೋಪ ಮತ್ತು ಪ್ರತಿಕೂಲ ಹವಾಮಾನಗಳಿಂದ ಮುಕ್ತವಾಗಿದ್ದು ಬೆಂಗಳೂರನ್ನು ಎರಡನೇ ರಾಜಧಾನಿಯಾಗಿ ಘೋಷಿಸಿದರೆ ದಕ್ಷಿಣದ ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಗಳೂರನ್ನು ಎರಡನೇ ರಾಜಧಾನಿಯಾಗಿ ಘೋಷಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾತ್ರ ಬರೆದಿರುವ ದೇಶಪಾಂಡೆ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿ ಅವರಿಗೂ ಈ ವಿಷಯವನ್ನು ಸಂಸತ್ ನಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top