ಕಿರುತೆರೆ

ಶಾಕಿಂಗ್: 13ನೇ ವಾರ ಬಿಗ್’ಬಾಸ್ ನಿಂದ ಸ್ಟ್ರಾಂಗ್ ಕಟೆಸ್ಟಂಟ್ ಎಲಿಮಿನೇಟ್.

ಶಾಕಿಂಗ್: 13ನೇ ವಾರ ಬಿಗ್’ಬಾಸ್ ನಿಂದ ಸ್ಟ್ರಾಂಗ್ ಕಟೆಸ್ಟಂಟ್ ಎಲಿಮಿನೇಟ್.

 

 

ಯಶಸ್ವಿ ಹನ್ನೆರಡು ವಾರಗಳನ್ನು ಮುಗಿಸಿ ಹದಿಮೂರನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಸೀಸನ್ 5ನಲ್ಲಿ ದಿನಕಳೆದಂತೆ ಕುತೂಹಲ ಹೆಚ್ಚಿಸುತ್ತಿದೆ. ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ ಈಗಾಗಲೇ 10 ಮಂದಿ ಮನೆಯಿಂದ ಹೊರ ಹೋಗಿದ್ದು ಈಗ ಕೇವಲ 8 ಜನ ಸದಸ್ಯರಷ್ಟೇ ಬಿಗ್ ಬಾಸ್ ಮನೆಯ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಪ್ರತಿ ವಾರದಂತೆ ಈ ವಾರದ ಎಲಿಮಿನೇಷನ್ ಕೂಡ ಮುಗಿದಿದ್ದು ಇಂದು ಯಾರು ತಮ್ಮ ಬಿಗ್ ಬಾಸ್ ಪಯಣವನ್ನು 13 ವಾರಗಳಿಗೆ ಮುಗಿಸುತ್ತಾರೆ ಎನ್ನುವ ಕುತೂಹಲಕ್ಕೆ ವಾರದ ಕಥೆ ಕಿಚ್ಚ ಜೊತೆ ಸಂಚಿಕೆಯಲ್ಲಿ ತೆರೆ ಬಿದ್ದಿದೆ..

 

 

ಈ ವಾರ ಮನೆಯಿಂದ ಹೊರಹೋಗಲು ಸದಸ್ಯರ ಆಯ್ಕೆಯ ಅನುಸಾರ ನಿವೇದಿತಾ, ರಿಯಾಜ್,ಶ್ರುತಿ, ಜಯರಾಮ್ ಕಾರ್ತಿಕ್,ಸಮೀರಾಚಾರ್ಯ ಮತ್ತು ಚಂದನ್ ಶೆಟ್ಟಿ ನಾಮಿನೇಟ್ ಆಗಿದ್ದರು. ನಾಮಿನೇಟ್ ಆಗಿರುವ ಈ ಆರು ಜನರ ಪೈಕಿ ಕಾಮನ್ ಮ್ಯಾನ್ ಕೋಟಾದಿಂದ ಮನೆಗೆ ಎಂಟ್ರಿಕೊಟ್ಟಿದ್ದ ಸದಸ್ಯರುಗಳಲ್ಲಿ ಸ್ಟ್ರಾಂಗ್ ಕಂಟಸ್ಟೆಂಟ್ ಎನಿಸಿಕೊಂಡಿದ್ದ ರಿಯಾಜ್ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯ ತಮ್ಮ ಜರ್ನಿಯನ್ನು ಹದಿಮೂರು ವಾರಗಳಿಗೆ ಮುಗಿಸಿ ಅಚ್ಚರಿ ಮೂಡಿಸಿದ್ದಾರೆ.

 

 

ಸ್ಪರ್ಧಿಗಳಲ್ಲಿ ರೂಲ್ಸ್ ರಿಯಾಜ್ ಎಂದೇ ಹೆಸರು ಪಡೆದುಕೊಂಡಿದ್ದ ರಿಯಾಜ್ ಮೊದಲ ವಾರದಿಂದಲೂ ತುಂಬಾ ಆಕ್ಟಿವ್ ಆಗಿ ಗೇಮ್ ಆಡ್ತಿದ್ದರು. ಕಾಮನ್ ಮ್ಯಾನ್ ಕೋಟದಿಂದ ಮನೆಯೊಳಕ್ಕೆ ಕಾಲಿಟ್ಟಿದ್ದ ಸದಸ್ಯರನ್ನೆಲ್ಲಾ ಒಂದು ಕಡೆ ಸೇರಿಸಿ ಬಲಿಷ್ಠವಾಗಿ ಒಂದು ಗುಂಪು ಮಾಡಿದ್ದರು. ಆದರೆ ಕ್ರಮೇಣ ಆ ಗುಂಪು ಒಡೆದು ತಮ್ಮ ತಮ್ಮಲ್ಲಿ ವೈಮನಸ್ಸು ಉಂಟಾಗಿ ಗುಂಪು ಒಡೆದುಕೊಂಡಿತ್ತು. ತಾವೇ ತಾವಾಗಿ ಜಗಳಗಳನ್ನು ಮಾಡಿಕೊಂಡು ಮನೆಯಿಂದ ಹೊರಬರುವ ಪರಿಸ್ಥಿತಿ ಎದುರಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top