ಕ್ರೈಂ ಸ್ಟೋರಿ

ಅನುಮಾನಾಸ್ಪದವಾಗಿ ಸಾವನಪ್ಪಿದ ಬಾಕ್ಸರ್, ಮೃತದೇಹದ ಮೇಲೆ ಬುಲೆಟ್ ಗಾಯದ ಗುರುತು.

ಅನುಮಾನಾಸ್ಪದವಾಗಿ ಸಾವನಪ್ಪಿದ ಬಾಕ್ಸರ್, ಮೃತದೇಹದ ಮೇಲೆ ಬುಲೆಟ್ ಗಾಯದ ಗುರುತು.

ಉತ್ತರ ಪ್ರದೇಶದ ನೋಯ್ಡಾ ದಲ್ಲಿ ರಾಷ್ಟೀಯ ಮಟ್ಟದ ಬಾಕ್ಸರ್ ಒಬ್ಬರ ದೇಹದಲ್ಲಿ ಬುಲೆಟ್ ಗಾಯಗಳ ಗುರುತಿನೊಂದಿಗೆ ತನ್ನ ಫ್ಲಾಟ್ ನಲ್ಲಿ ಹೆಣವಾಗಿ ಸಿಕ್ಕಿರುವ ಘಟನೆ ನಡೆದಿದೆ.

 

 

2006 ರಲ್ಲಿ ಜೂನಿಯರ್ ಲೆವೆಲ್ ಬಾಕ್ಸಿಂಗ್ ನಲ್ಲಿ ಜಿತೇಂದ್ರ ಮನ್ (27) ಅವರು ಭಾರತವನ್ನ ಪ್ರತಿನಿಧಿಸಿದ್ದರಂತೆ. 7 ತಿಂಗಳ ಹಿಂದೆ ಇಂಜುರಿಗಳಿಂದ ಬಾಕ್ಸಿಂಗ್ ಅನ್ನು ಬಿಟ್ಟು ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಎರಡು ದಿನದಿಂದ ಮೊಬೈಲ್ ನನ್ನ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಜಿಮ್ ಗೂ ಹೊಗರಿಲಿಲ್ಲ ಎಂದು ತಿಳಿದು ಬಂದಿದೆ.

ದೆಹಲಿಯಲ್ಲಿ ಜೀತೆಂದ್ರ ಅವರ ಕುಟುಂಬದವರು ವಾಸವಾಗಿದ್ದು, ಜೇತೇಂದ್ರ ರನ್ನು ಕಳೆದ ಇದು ದಿನಗಳಿಂದ ಸಂಪರ್ಕಿಸಲು ಆಗಿರಲಿಲ್ಲ, ಅನುಮಾನದಿಂದ ಅಪಾರ್ಟ್ ಮೆಂಟ್ ಬಾಗಿಲು ಹೊಡೆದು ನೋಡಿದರೆ ಅವರ ಶವ ಪತ್ತೆಯಾಗಿದೆ.

 

 

ಪೊಲೀಸ್ ಅಧಿಕಾರಿ ಸುನಿತಿ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ ಜೀತೆಂದ್ರ ಅವರ ಫ್ಲಾಟ್ ಹೊರಗಡೆ ಇಂದ ಲಾಕ್ ಮಾಡಲಾಗಿತ್ತು, ತೆಗೆದು ನೋಡಿದರೆ ಶವವಾಗಿ ಬಿದ್ದಿದ್ದರು ಜೀತೆಂದ್ರ.

ಅವರ ಶವ ವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯ ರಿಪೋರ್ಟ್ ಗಾಗಿ ಕಾಯುತ್ತಿದ್ದಾರೆ. ಅಮೀತ್ ಕಿಶೋರ್ ಹೇಳುವ ಪ್ರಕಾರ ತನಿಖೆಯನ್ನು ಮುಂದುವರಿಸಲಾಗುವುದು.

 

 

ಈ ಪ್ರಕರಣ ಸೂರಜ್‍ಪುರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302(ಕೊಲೆ) ಅಡಿ ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top