ತಿಂಡಿ ತೀರ್ಥ

ಸವಿಯಾದ ಕಡಲೆ ಮಿಠಾಯಿ(ಚಿಕ್ಕಿ) ಮನೆಯಲ್ಲೇ ತಯಾರಿಸುವ ಸಿಂಪಲ್ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸವಿಯಾದ ಕಡಲೆ ಮಿಠಾಯಿ(ಚಿಕ್ಕಿ) ಮನೆಯಲ್ಲೇ ತಯಾರಿಸುವ ಸಿಂಪಲ್ ವಿಧಾನ

 

 

ಚಿಕ್ಕಿಯನ್ನು ಸಾಮಾನ್ಯವಾಗಿ ಕಡಲೆ ಬೀಜ (ಶೇಂಗಾ ಬೀಜ) ಮತ್ತು ಬೆಲ್ಲದಿಂದ ತಯಾರಿಸಿದ ಒಂದು ಸಾಂಪ್ರದಾಯಿಕ ಮಿಠಾಯಿಯಾಗಿದೆ.

ಕಡಲೆ ಮಿಠಾಯಿ( ಚಿಕ್ಕಿ) ಮಾಡಲು ಬೇಕಾದ ಪದಾರ್ಥಗಳು:
ಬೆಲ್ಲ 1 ಕಪ್
ಕಡಲೆ ಬೀಜ (ಶೇಂಗಾ ಬೀಜ) ೧ ಕಪ್
ತುಪ್ಪ 1 ಚಮಚ

 

 

ಶೇಂಗಾ ಮಿಠಾಯಿ ಮಾಡುವ ವಿಧಾನ:

ಮೊದಲಿಗೆ ಒಂದು ಬಾಣೆಲೆಗೆ ಕಡಲೆ ಬೀಜ (ಶೇಂಗಾ ಬೀಜ) ಹಾಕಿ ಗ್ಯಾಸ್ ಸಿಮ್ ನಲ್ಲಿ ಇಟ್ಟುಕೊಂಡು ಹುರಿದುಕೊಳ್ಳಿ ಶೇಂಗಾ ಕ್ರಿಸ್ಪಿ ಆಗುವರೆಗೂ ಹುರಿಯಿರಿ. ನಂತರ ಶೇಂಗಾ ತಣ್ಣಗಾಗುವರೆಗೂ ಕಾಯ್ದು ಕೈಯಲ್ಲಿ ತಿಕ್ಕಿ ಗುಲಾಬಿ ಬಣ್ಣದ ಸಿಪ್ಪೆ ಬಿಡಿಸಿಕೊಳ್ಳಿ.

 

 

ಬಾಣೆಲೆಗೆ 1 ಕಪ್ ಬೆಲ್ಲ ಹಾಕಿ ಕುದಿಸಿ ಬೆಲ್ಲ ಕರಗಿ ಪಾಕ ಹದಕ್ಕೆ ಬಂದಾಗ ಹುರಿದ ಶೇಂಗಾ ಹಾಕಿಕೊಳ್ಳಿ ಗ್ಯಾಸ್ ಕಡಿಮೆ ಶಾಖದಲ್ಲಿ ಇಟ್ಟುಕೊಳ್ಳಲು ಮರೆಯದಿರಿ. ಮಿಶ್ರಣವನ್ನು ಚೆನ್ನಾಗಿ ಕಲಸಿ.

ಒಂದು ಪಾತ್ರೆಗೆ ತುಪ್ಪ ಸವರಿಟ್ಟುಕೊಳ್ಳಿ ಅದರ ಮೇಲೆ ಶೇಂಗಾ ಬೆಲ್ಲದ ಮಿಶ್ರಣ ಹಾಕಿಕೊಳ್ಳಿ.. ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top