ಸಿನಿಮಾ

ಬಿಡುಗಡೆಗೆ ಸಜ್ಜಾದ ದಂಡುಪಾಳ್ಯ 3. ಶೂಟಿಂಗ್ ಗೆ ಸಜ್ಜಾದ ದಂಡುಪಾಳ್ಯ 4?

ಬಿಡುಗಡೆಗೆ ಸಜ್ಜಾದ ದಂಡುಪಾಳ್ಯ 3.
ಶೂಟಿಂಗ್ ಗೆ ಸಜ್ಜಾದ ದಂಡುಪಾಳ್ಯ 4?

ಈ ಮೊದಲು ಯಶಸ್ಸು ಕಂಡಿದ್ದ ದಂಡುಪಾಳ್ಯ 1 ಮತ್ತು ದಂಡುಪಾಳ್ಯ 2 ನಂತರ ಈಗ ದಂಡುಪಾಳ್ಯ- 3 ಬಿಡುಗಡೆಗೆ ಸಿದ್ಧವಾಗಿದೆ. ಈ ಮೊದಲು ನಿರ್ಧರಿಸಿದಂತೆ ಇದೆ ತಿಂಗಳ 19 ಕ್ಕೆ ಬಿಡುಗಡೆಯಾಗಬೇಕಿದ್ದ ದಂಡುಪಾಳ್ಯ ಯಾಕೋ ಗೊತ್ತಿಲ್ಲ ಇನ್ನು ಕೆಲವು ದಿನ ತಡವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲೆರಡು ಭಾಗಗಳನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ರಾಜು ದಂಡುಪಾಳ್ಯ 3 ಕೂಡ ನಿರ್ದೇಶಿಸಿದ್ದಾರೆ.

 

ದಂಡುಪಾಳ್ಯ 2 ಬಿಡುಗಡೆಯಾದ ಕೆಲವೇ ದಿನದಲ್ಲಿ ದಂಡುಪಾಳ್ಯ-3 ಬಿಡುಗಡೆಯಾಗುತ್ತಂತೆ ಎಂದು ಸುದ್ದಿಗಳಿದ್ದವು ಆದರೆ ಚಿತ್ರಕ್ಕೆ ಎದುರಾದ ಕೆಲವು ಸಮಸ್ಯೆಗಳಿಂದ ಆಗ ದಂಡುಪಾಳ್ಯ 3 ಬಿಡುಗಡೆಯಾಗಲಿಲ್ಲ.

 

 

ಇನ್ನು ಹೊಸ ಸುದ್ದಿಯೊಂದು ಚಿತ್ರರಂಗದಲ್ಲಿ ಹರಿದಾಡುತ್ತಿದ್ದು ದಂಡುಪಾಳ್ಯ-4 ಬರಲಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಯಾವ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಮಾಹಿತಿ ಪ್ರಕಾರ ದಂಡುಪಾಳ್ಯ-3 ಬಿಡುಗಡೆ ನಂತರ ದಂಡುಪಾಳ್ಯ-4 ಚಿತ್ರದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

ನಿರ್ದೇಶಕ ಶ್ರೀನಿವಾಸ್ ರಾಜು ಅವರೇ ದಂಡುಪಾಳ್ಯ-4 ರಲ್ಲಿ ನಿರ್ದೇಶಿಸಲಿದ್ದಾರೆ. ಇನ್ನು ಹಳೆಯ ತಂಡದ ನಟ ನಟಿಯರೇ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಮುಂದಿನ ಎರಡು ಚಿತ್ರ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top