ಧರ್ಮ

ಅನ್ಯಾಯವಾಗಿ ದ್ರೋಣಾಚಾರ್ಯರ ತಲೆ ಕತ್ತರಿಸಿ ಪಾಂಡವರು ಕೊಂದರು ಮುಂದೆ ಮಗ ಅಶ್ವತ್ಥಾಮನು ಶಸ್ತ್ರ ಸನ್ಯಾಸ ಏಕೆ ಮಾಡಿದನು ತಿಳಿಯಿರಿ

ಅನ್ಯಾಯವಾಗಿ ದ್ರೋಣಾಚಾರ್ಯರ ತಲೆ ಕತ್ತರಿಸಿ ಪಾಂಡವರು ಕೊಂದರು ಮುಂದೆ ಮಗ ಅಶ್ವತ್ಥಾಮನು ಶಸ್ತ್ರ ಸನ್ಯಾಸ ಏಕೆ ಮಾಡಿದನು ತಿಳಿಯಿರಿ

ದ್ರೋಣಾಚಾರ್ಯರ ಅವಸಾನದಿಂದ ಅಶ್ವತ್ಥಾಮನು ಶಸ್ತ್ರ ಸನ್ಯಾಸ ಮಾಡಿದನು.

ದ್ರೋಣಾಚಾರ್ಯರು ಸೇನಾಪತಿಯಾಗಿದ್ದರೂ ಜಯದ್ರಥನನ್ನು ಉಳಿಸಲು ಸಾಧ್ಯವಾಗಲಿಲ್ಲವೆಂದು ಕೌರವರಿಗೆ ಸಂಕಟವಾಯಿತು. ಅದರೊಂದಿಗೆ ಅಭಿಮನ್ಯು ಮತ್ತು ಘಟೋತ್ಕಜ ಕೌರವರ ಸೇನೆಯನ್ನು ಧ್ವಂಸ ಮಾಡಿದ್ದರು .ಆದುದರಿಂದ ದ್ರೋಣರನ್ನೇ ಸಂಶಯದಿಂದ ನೋಡಿದ ದುರ್ಯೋಧನನು ನೀವು ಸರಿಯಾಗಿ ಪರಾಕ್ರಮವನ್ನು ತೋರಿಸುತ್ತಾ ಇಲ್ಲವೆಂದನು. ಅದಕ್ಕೆ ಪಾಂಡವರಲ್ಲಿರುವ ವೀರರೇ ಕಾರಣರು . ಅವರು ಎಲ್ಲರೂ ನಮ್ಮ ಶಕ್ತಿಯನ್ನು ಮೀರಿ ಶೂರರಿದ್ದರು. ಹೀಗಾಗಿ ನಮ್ಮ ಶೌರ್ಯ ಕಂಡು ಬರಲಿಲ್ಲ ಎಂದು ಸಮಾಧಾನ ಪಡಿಸಿದರು.

 

 

ಆದರೆ ಮರುದಿನ ತಾನೇ ಅರ್ಜುನನನ್ನು ಎದುರಿಸಬೇಕೆಂದು ನಿರ್ಧರಿಸಿದನು. ಹದಿನೈದನೇ ದಿನದ ಯುದ್ಧದಲ್ಲಿ ನಕುಲನೇ ದುರ್ಯೋಧನನನ್ನು ಎದುರಿಸಿದರು. ಸಹದೇವನು ದುಶ್ಯಾಸನನೊಂದಿಗೆ ಯುದ್ಧ ಮಾಡಿದನು. ಅರ್ಜುನ ಮತ್ತು ದ್ರೋಣರು ಯುದ್ಧ ನಡೆಸಿದ್ದರು. ಅನೇಕ ಅಸ್ತ್ರಗಳನ್ನು ಗುರುಗಳು ಪ್ರಯೋಗಿಸಿದಾಗ ಶಿಷ್ಯನು ಅವುಗಳನ್ನು ಖಂಡಿಸಿ ಬಿಡುತ್ತಿದ್ದನು. ದ್ರೋಣರು ಅಂದು ವಿರಾಟ ಹಾಗೂ ದ್ರುಪದ ರಾಜರನ್ನು ಕೊಂದು ಹಾಕಿದರು.

ಪಾಂಡವರು ದ್ರೋಣರನ್ನು ಸೋಲಿಸುವುದು ಹೇಗೆ ಎಂದು ಕೃಷ್ಣನನ್ನು ಕೇಳಿದರು. ಆಗ ದ್ರೋಣರು ಶಸ್ತ್ರ ಬಿಟ್ಟಿರುವಾಗ ಅವರನ್ನು ನಾಶ ಮಾಡಬಹುದು ಎಂದನು. ಆ ಸಮಯದಲ್ಲಿ ಅಶ್ವತ್ಥಾಮನೆಂಬ ಆನೆಯನ್ನು ಭೀಮನು ಕೊಂದನು. ಯುದಿಷ್ಟಿರನು ಅಶ್ವತ್ಥಾಮ ಎಂಬ ಆನೆ ಸತ್ತಿತ್ತು ಎಂದು ಹೇಳಿದಾಗ, ಅಶ್ವತ್ಥಾಮನು ತನ್ನ ಮಗ ಅವನೇ ಸತ್ತನು ಎಂದು ದ್ರೋಣಾಚಾರ್ಯರು ಕಂಗಾಲಾಗಿ ಶಸ್ತ್ರ ಬಿಟ್ಟಿದ್ದರು. ಆ ಸಮಯದಲ್ಲಿ ದೃಷ್ಟದ್ಯುಮ್ನನು ದ್ರೋಣರ ತಲೆಯನ್ನು ಕತ್ತರಿಸಿದನು. ಭೀಮನು ಹೇಳಿದ ವಾಕ್ಯವನ್ನು ತಿಳಿದು ದ್ರೋಣರು ಯುಧಿಷ್ಠಿರನನ್ನು ಕೇಳಿದರು. ಆಗ “ಅಶ್ವತ್ಥಾಮ ಹತಃ ಕುಂಜರ” ಎಂದನು ಯುಧಿಷ್ಠಿರ . ಆದರೆ ಆನೆ ‘ಕುಂಜರ’ ಎಂದು ಸಣ್ಣ ದನಿಯಲ್ಲಿ ಹೇಳಿದನು. ಹೀಗೆ ಧರ್ಮರಾಜನಿಗೆ ಒಂದು ಕಳಂಕವೇ ಹತ್ತಿತ್ತು .

 

 

ದ್ರುಪದನ ಮಗನೇ ದ್ರೋಣನನ್ನು ಕೊಂದಿದ್ದಾಯಿತು. ದ್ರೋಣರ ಮರಣದ ನಂತರದಲ್ಲಿ ಅಶ್ವತ್ಥಾಮನು ಅತ್ಯಂತ ದುಃಖ ಮತ್ತು ಪರಾಕ್ರಮದಿಂದ ಮುಂದೆ ಪಾಂಡವರನ್ನು ಸದೆ ಬಡಿಯಲು ಸಿದ್ಧನಾಗಿದ್ದನು. ಅನ್ಯಾಯವಾಗಿ ತಂದೆಯ ತಲೆ ಕತ್ತರಿಸಿ ಅಧರ್ಮ ಯುದ್ಧ ಮಾಡಿದ್ದನ್ನು ಎಲ್ಲರೂ ನಿಂದಿಸಿದರು. ಆದರೆ ಮೊದಲು ಕೌರವರು ಅಭಿಮನ್ಯುವಿನ ವಧೆ ಮಾಡಿದ್ದರಿಂದ ಮುಂದೆ ಅನ್ಯಾಯದ ಬಗ್ಗೆ ಟೀಕಿಸುವ ಹಕ್ಕನ್ನು ಕೌರವರು ಕಳೆದುಕೊಂಡಿದ್ದರು.

 

 

ಕೃಪಾಚಾರ್ಯರು ಅಶ್ವತ್ಥಾಮನನ್ನೇ ಸೇನಾಪತಿ ಯನ್ನಾಗಿಸಿದರೆ ಪಾಂಡವರ ವಿರುದ್ಧ ಯುದ್ಧ ಮಾಡಲು ಅನುವು ಉಂಟಾಗುವುದೆಂದು ಕುರು ಪತಿ ಇದ್ದಲ್ಲಿಗೆ ನಡೆದರು. ಅಲ್ಲಿ ಕರ್ಣನಿಗೆ ಸೇನಾಪತಿ ಪಟ್ಟ ಕೊಟ್ಟ ವಿಷಯ ತಿಳಿದಾಗ ಕರ್ಣ ಅಶ್ವತ್ಥಾಮರಲ್ಲಿ ಜಗಳವಾಗಿ ಅಶ್ವತ್ಥಾಮನು ಶಸ್ತ್ರ ಸನ್ಯಾಸ ಮಾಡಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top