ವಿಶೇಷ

ಕಣ್ಣು ಗುಡ್ಡೆಗೂ ರೇಜರ್, ಅಪಾಯ ಮಾಡದೆ, ಉಪಾಯವಾಗಿ ಬೋಳಿಸುವ ಕಲಾಕಾರ ಇವನು

ಕಣ್ಣು ಗುಡ್ಡೆಗೂ ರೇಜರ್, ಅಪಾಯ ಮಾಡದೆ, ಉಪಾಯವಾಗಿ ಬೋಳಿಸುವ ಕಲಾಕಾರ ಇವನು

ಕಣ್ಣು ಗುಡ್ಡೆಗೂ ರೇಜರ್

ತಲೆ, ಹುಬ್ಬು, ಕಣ್ಣಿನ ರೆಪ್ಪೆ ಭುಜಕೆಳಗಿನ ಕೂದಲು ಬೋಳಿಸುವವರು ಗೊತ್ತು. ಹೆಚ್ಚಿನ ರೊಕ್ಕ ಕೊಟ್ಟರೆ ‘ಜನರೇಟರ್’ ಭಾಗದ ಕೂದಲೂ ಬೋಳಿಸುವರು ಇದ್ದಾರೆ! ಆದರೆ ಇವನು ಸಾಮಾನ್ಯನಲ್ಲ. ಕೇಶ, ರೆಪ್ಪೆ ನಂತರ…ಕಣ್ಣಿನ ಗುಡ್ಡೆಗಳನ್ನೂ ಶೇವ್ ಮಾಡ್ತಾನೆ.

ಅಯ್ಯೋ ಕಣ್ಣೇ ‘ಢಮಾರ್’ ಆಗಲಿದೆಯಲ್ಲವೇ?!

 

 

ಇಲ್ರೀ… ಇವನು ಎಕ್ಸ್ ಪರ್ಟ್. ಈತನೇನು ವೈದ್ಯನಲ್ಲ. ಸಾಧಾರಣ ಮೋಚಿ. ಸುಮಾರು 40 ವರ್ಷಗಳಿಂದಲೂ ಬೀದಿಯಲ್ಲಿಯೇ ಕೂಡಿಸಿ ಬೋಳಿಸುತ್ತಾನೆ. ಇವನ ರೇಜರ್‍ನಿಂದ ಕಣ್ಣು ಬೋಳಿಸಕೊಂಡರೆ ದೃಷ್ಟಿ ಉತ್ತಮವಾಗುತ್ತದಂತೆ. ಕಣ್ಣಿಗೆ ಮೆತ್ತಿದಕೊಳೆ, ಪೊರೆ ಎಲ್ಲವೂ ಮಾಯವಂತೆ. ಹಾಗೆಂದು ಕಣ್ಣಿಗೆ ಸೋಂಕು ತಗಲಿಲ್ಲ. ಅಥವಾ ಕಣ್ಣಿಗೂ ಅಪಾಯ ಮಾಡಿಲ್ಲವೆಂಬುದು ಇವನ ಬಗೆಗಿರುವ ಮೆಚ್ಚುಗೆ.

 

 

ಹಿಡಿದ ಚಾಕುವಿನಿಂದ ಯಾವುದೇ ರೀತಿಯ ಅಪಾಯ ಮಾಡದೆ, ಉಪಾಯವಾಗಿ ಬೋಳಿಸುವ ಕಲಾಕಾರ್ ಇವನು! ಗ್ಸಿಯಾಂಗ್ ಗೌ ಹೆಸರಿನ ಈತ ನುರಿತ ಕಣ್ಣಿನ ವೈದ್ಯರಿಗೆ, ಹೈಟೆಕ್ ಆಸ್ಪತ್ರೆಗಳಿಗೂ ತೊಡಕಾಗಿರುವ ಸಮಸ್ಯೆಯನ್ನು ತಡವರಿಸದೆ ತರಿದುಹಾಕುತ್ತಾನಂತೆ.

ಈತನಿಂದ ಕಣ್ಣುಗುಡ್ಡೆ ಮೋಚಿಸಿಕೊಳ್ಳಬೇಕಿದ್ದರೆ ನೆರೆಯ ಚೀನಾ ದೇಶದ ಜಿನ್‍ಜಿಯಾಂಗ್ ಜಿಲ್ಲೆಯ ಚೆಂಗ್ಡುಪಟ್ಟಣಕ್ಕೆ ತೆರಳಬೇಕು. ಆದರೆ ಇಂತಹ ಕಣ್ಣಿನ ಗುಡ್ಡೆಯ ಶೇವ್‍ಗಳು ಅಪಾಯಕಾರಿ, ನೇತ್ರದ ಕಾಯಿಲೆಗಳು ಹರಡಲು ಸಹಕಾರಿಯಾಗಲಿದೆ ಎನ್ನುತ್ತಾರೆ ‘ಐ’ಡಾಕ್ಟರ್‍ಗಳು!

 

 

ಇರಬಹುದು ಏಕೆಂದರೆ ಅವರಿಗೆ ಬ್ಯುಸಿನೆಸ್ ನಷ್ಟ ಅಲ್ಲವಾ?!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top