ದೇವರು

ಹನುಮಂತ ದೇವರಿಗೆ ಈ 7 ತರಹದ ಶಾಸ್ತ್ರದ ನಿಯಮಗಳನ್ನು ಪಾಲಿಸಿ , ನಿಮ್ಮ ಮನೆಯ ಕಷ್ಟಗಳು ಕಳೆದು ಒಳ್ಳೆಯ ದಿನಗಳು ಬರುತ್ತವೆ

ಹನುಮಂತ ದೇವರಿಗೆ ಈ 7 ತರಹದ ಶಾಸ್ತ್ರದ ನಿಯಮಗಳನ್ನು ಪಾಲಿಸಿ , ನಿಮ್ಮ ಮನೆಯ ಕಷ್ಟಗಳು ಕಳೆದು ಒಳ್ಳೆಯ ದಿನಗಳು ಬರುತ್ತವೆ

ಹನುಮಂತ ದೇವನನ್ನು ಪ್ರಸನ್ನ ಗೊಳಿಸಲು ಈ ಸುಲಭವಾದ ಪರಿಕರಗಳನ್ನು ಪಾಲಿಸಿ.

“ ಜೈ ಶ್ರೀರಾಮ್”
“ ಶ್ರೀ ರಾಮ ಜಯ ರಾಮ ಜಯ ಜಯ ರಾಮ”

1.ಶ್ರೀ ರಾಮನ ಹೆಸರಿನ ಭಜನೆಯು ಎಲ್ಲಿ ಸದಾಕಾಲ ಇರುತ್ತದೋ ಅಲ್ಲಿ ಹನುಮಂತ ದೇವನು ಕೂಡ ಯಾವಾಗಲೂ ನೆಲೆಸಿರುತ್ತಾನೆ .

 

 

2.ಮನೆಯಲ್ಲಿ ಜಗಳ, ವಾಗ್ವಾದಗಳು, ವೈಮನಸ್ಯ ಇದ್ದರೆ ಇದರಿಂದ ಮುಕ್ತಿ ಹೊಂದಲು, ಶ್ರೀಗಂಧ ಮತ್ತು ಕೇಸರಿಯನ್ನು ಹನುಮಂತ ದೇವನ ಮೂರ್ತಿಗೆ ಪ್ರತಿ ಮಂಗಳವಾರ ಅರ್ಪಿಸಿರಿ .

3.ಎಳ್ಳೆಣ್ಣೆಯನ್ನು ಮತ್ತು ಸಿಂಧೂರವನ್ನು ಮಿಶ್ರಣ ಮಾಡಿ, ಹನುಮಂತ ದೇವನ ಮೂರ್ತಿಗೆ ಅರ್ಪಿಸಿ ಆಶೀರ್ವಾದವನ್ನು ಪಡೆಯಿರಿ.

 

 

4.ತೆಂಗಿನಕಾಯಿಯನ್ನು ಒಂದು ಕೆಂಪುಬಟ್ಟೆಯಲ್ಲಿ ಸುತ್ತಿ ಅದಕ್ಕೆ ಸ್ವಲ್ಪ ಸಿಂಧೂರವನ್ನು ಅರ್ಪಿಸಿ, ಹನುಮಂತನ ದೇವಸ್ಥಾನಕ್ಕೆ ಸಮರ್ಪಿಸಿ. ಇದರಿಂದ ನಿಮಗೆ ಉತ್ತಮ ಅದೃಷ್ಟವನ್ನು ಹನುಮಂತನು ತಂದುಕೊಡುತ್ತಾನೆ.

5. ಮಂಗಳವಾರ ಮತ್ತು ಶನಿವಾರದ ದಿನ ಮಾಂಸಾಹಾರವನ್ನು ಸೇವಿಸಬೇಡಿ.

6. ಶನಿವಾರದ ದಿನ ಹನುಮಂತನನ್ನು ಪೂಜಿಸಲು, ಎಳ್ಳು ಮಿಶ್ರಿತ ನೀರಿನಿಂದ ತಲೆಗೆ ಸ್ನಾನ ಮಾಡಿ.ಹನುಮಂತ ದೇವನ ದೇವಾಲಯಕ್ಕೆ ಹೋಗಿ ಎಳ್ಳು, ಸಕ್ಕರೆ ಮತ್ತು ಕೆಂಪು ಬಣ್ಣದ ತೊಗರಿಕಾಳು ಅಥವಾ ತೊಗರಿಬೇಳೆಯನ್ನು ಹೀಗೆ ಹನ್ನೊಂದು ವಾರಗಳವರೆಗೂ ಅರ್ಪಿಸಿ. ನಂತರ ನೀವು ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಕಷ್ಟಗಳಿಂದ ಹೊರಗೆ ಬರುವಿರಿ. ನಿಮ್ಮ ಜೀವನದಲ್ಲಿ ಒಂದು ಚಮತ್ಕಾರವೇ ನಡೆಯುವುದು. ನೀವು ಒಂದು ಅದ್ಭುತವನ್ನು ಕಾಣುತ್ತೀರಿ ಮತ್ತು ನಿಮ್ಮ ಸಮಸ್ಯೆಗಳೆಲ್ಲವೂ ಸಹ ಪರಿಹಾರವಾಗುವವು.

 

 

7. ಪ್ರತಿ ಮಂಗಳವಾರ ಹನುಮಾನ್ ಚಾಲೀಸವನ್ನು ಪಠಿಸಿ ಪ್ರತಿ ದಿನ ಅಥವಾ ಪ್ರತಿ ಶನಿವಾರವಾದರೂ ಬೆಳಿಗ್ಗಿನಿಂದ ಹನುಮಂತನ ದೇವಸ್ಥಾನದ ಮುಂದೆ ದೀಪವನ್ನು ಬೆಳಗಿಸಿ ಅಥವಾ ಎಳ್ಳೆಣ್ಣೆಯನ್ನು ಹನುಮಂತನ ದೇವಸ್ಥಾನಕ್ಕೆ ದಾನವಾಗಿ ನೀಡಿ ಇದರಿಂದ ಹನುಮಂತ ದೇವನು ಪ್ರಸನ್ನಗೊಳ್ಳುವನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top