ಆರೋಗ್ಯ

ಮಣ್ಣಿನ ಮಡಿಕೆಯಲ್ಲಿಟ್ಟ ನೀರನ್ನು ಕುಡಿಯೋದ್ರಿಂದ ಈ ಅದ್ಭುತ ಪ್ರಯೋಜನಗಳನ್ನ ಪಡ್ಕೋಬೋದು!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಣ್ಣಿನ ಮಡಿಕೆಯಲ್ಲಿಟ್ಟ ನೀರನ್ನು ಕುಡಿಯೋದ್ರಿಂದ ಈ ಅದ್ಭುತ ಪ್ರಯೋಜನಗಳನ್ನ ಪಡ್ಕೋಬೋದು!

 

ಪಂಚಭೂತಗಲ್ಲೊಂದಾದ ನೀರು ಸಂಜೀವಿನಿಯಂತೆ ಕೆಲಸ ಮಾಡುತ್ತದೆ.ಆರೋಗ್ಯ ರಕ್ಷಣೆಯು ಎಲ್ಲರೂ ಕಾಳಜಿ ವಹಿಸಬೇಕಾದ ವಿಷಯ . ಬಹುತೇಕ ಜನರು ಕೆಲಸದ ಒತ್ತಡದಿಂದಾಗಿ ಅನಾರೋಗ್ಯದಿಂದ ಬಳಲುತ್ತಾರೆ.

 

 

ಅರೋಗ್ಯ ಕಾಪಾಡಿಕೊಳ್ಳುವುದರಲ್ಲಿ ನೀರಿನ ಪಾತ್ರ ಪ್ರಮುಖವಾದದ್ದಾಗಿದೆ. ಮಣ್ಣಿನ ಮಡಿಕೆಯಲ್ಲಿಟ್ಟ ನೀರನ್ನು ಕುಡಿಯುವುದು ಆರೋಗ್ಯಕರ ಸಂಗತಿ .ಮಣ್ಣಿನ ಮಡಿಕೆಯಲ್ಲಿನ ನೀರನ್ನು ಕುಡಿಯುವುದು ಗಾಜಿನ,ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರಿಗಿಂತ ಆರೋಗ್ಯಕರ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ . ಪ್ಲಾಸ್ಟಿಕ್ ಬಾಟಲಿನಲ್ಲಿರುವ ನೀರಿನಲ್ಲಿ ಬಿಸಿಲಿನ ಮೂಲಕ ಪ್ಲಾಸ್ಟಿಕ್ ನಲ್ಲಿರುವ ಬಿಪಿಎ ಎಂಬ ಹಾನಿಕಾರಕ ಕಣ ಕರಗುತ್ತದೆ.ಇಂತಹ ನೀರನ್ನು ಕುಡಿಯುವುದರಿಂದ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

 

 

ಮಡಿಕೆಯಲ್ಲಿನ ನೀರು ಶುದ್ಧವಾಗಿದ್ದು,ಜೀವ ರಾಸಾಯನಿಕ ಕ್ರಿಯೆಗಳನ್ನು ಉತ್ತಮಗೊಳಿಸುತ್ತದೆ.ಮಡಿಕೆಯಲ್ಲಿ ನೀರನ್ನುಒಂದು ರಾತ್ರಿಯ ಕಾಲಾವಧಿಯಷ್ಟು ಇಟ್ಟು ನಂತರ ಕುಡಿಯಬೇಕು.ಮಣ್ಣಿನಲ್ಲಿರುವ ಲವಣಗಳು ಆಮ್ಲಗಳನ್ನು ತಟಸ್ಥಗೊಳಿಸಿ ನೀರನ್ನು ಶುದ್ಧ ಮಾಡುತ್ತವೆ. ನೆಲದಿಂದ ಉಕ್ಕಿದ ನೀರು ಮತ್ತು ಬಂಡೆಗಳ ನಡುವೆ ಉಕ್ಕುವ ನೀರು ಶುದ್ಧವಾಗಿರಲು ಇದೇ ಕಾರಣ . ಸಾಮಾನ್ಯವಾಗಿ ಬೇರೆ ಪ್ರದೇಶಕ್ಕೆ ಹೋದಾಗ ಅಲ್ಲಿನ ನೀರು ಕುಡಿಯುವುದರಿಂದ ಗಂಟಲ ತುರಿಕೆ ಶುರುವಾಗುತ್ತದೆ . ಆದರೆ ಮಡಿಕೆಯಲ್ಲಿನ ನೀರನ್ನು ಕುಡಿದರೆ ಯಾವ ತೊಂದರೆಯೂ ಆಗುವುದಿಲ್ಲ. ದಣಿದವರು ಫ್ರಿಡ್ಜ್ ನಲ್ಲಿನ ನೀರನ್ನು ಕುಡಿಯುವುದರಿಂದ ದೇಹದ ತಾಪಮಾನವು ತಕ್ಷಣವೇ ಇಳಿಯುವ ಸಾಧ್ಯತೆಯಿರುತ್ತದೆ.

 

 

ಈ ಎಲ್ಲ ಕಾರಣಗಳಿಂದ ಕುಡಿಯುವ ನೀರಿನ ವಿಷಯದಲ್ಲಿ ಎಚ್ಚರ ವಹಿಸಲೇಬೇಕಾಗುತ್ತದೆ.ಶುದ್ಧ ನೀರನ್ನು ಕುಡಿಯುವತ್ತ ಗಮನ ಹರಿಸುವುದರ ಜೊತೆಗೆ ಅರೋಗ್ಯ ಸುಧಾರಣೆಗೆ ಮಹತ್ವ ನೀಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top