ಸಿನಿಮಾ

ಮಾಸ್ತಿಗುಡಿ ಶೂಟಿಂಗ್ ವೇಳೆ ದುರಂತ ಸಾವನ್ನಪ್ಪಿದ ಅನಿಲ್ , ಉದಯ್ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ವೇಳೆ ಅನಿಲ್ , ಉದಯ್ ಎಂಬ ಇಬ್ಬರು ವಿಲನ್ ಗಳು ಸಾವನ್ನಿಪ್ಪಿದ್ದ ಘಟನೆ ಇನ್ನು ಹಸಿಯಾಗಿಯೇ ಇದೆ , ಈ ಪ್ರಕರಣದ ವಿಚಾರಣೆ ಇನ್ನು ಕೋರ್ಟ್ ನಲ್ಲಿ ನಡೆಯುತ್ತಿದೆ .

 

 

ಅನಿಲ್ , ಉದಯ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 304 ರ ಪ್ರಕಾರ ಸಲ್ಲಿಸಲಾಗಿದ್ದ ಆರೋಪಪಟ್ಟಿಯನ್ನು ರದ್ದು ಮಾಡುವಂತೆ ಕೋರಿ ನಿರ್ಮಾಪಕ ಸುಂದರ್ ಗೌಡ, ಸ್ಟಂಟ್ ಡೈರೆಕ್ಟರ್ ರವಿವರ್ಮ, ಡೈರೆಕ್ಟರ್ ನಾಗಶೇಖರ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು .

 

 

ಇದು ಉದ್ದೇಶ ಪೂರ್ವಕವಾಗಿ ಮಾಡಿದ ಹತ್ಯೆಯಲ್ಲ ಬದಲಾಗಿ ಸಿನಿಮಾ ತಂಡದ ಮುಂಜಾಗರೂಕತೆಯ ಕೊರತೆಯಿಂದಾದ ತಪ್ಪು ಎಂದು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ .

 

 

ಹೀಗಾಗಿ ಐಪಿಸಿ ಸೆಕ್ಷನ್ 304 ರ ಪ್ರಕಾರ ಸಲ್ಲಿಸಲಾಗಿದ್ದ ಆರೋಪಪಟ್ಟಿಯನ್ನು ರದ್ದುಗೊಳಿಸಿ ಮತ್ತೆ ಹೊಸದಾಗಿ ಪ್ರಕರಣವನ್ನು ನಡೆಸುವಂತೆ ರಾಮನಗರ ಜಿಲ್ಲಾ ಸೆಷನ್ಸ್ ಕೋರ್ಟ್‌ ಆದೇಶ ಹೊರಡಿಸಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top